ಮೈಸೂರು [ಸೆ.09]:  ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಎರಡನೇ ತಂಡದಲ್ಲಿ ಸೋಮವಾರ ಆಗಮಿಸಬೇಕಿದ್ದ ಬಲರಾಮ ಆನೆ ಒಂದು ದಿನ ಮುಂಚಿತವಾಗಿ ಅಂದರೆ ಭಾನುವಾರ ಮಧ್ಯಾಹ್ನವೇ ಏಕಾಂಗಿಯಾಗಿ ಆಗಮಿಸಿದೆ.

2ನೇ ತಂಡದಲ್ಲಿ ಬಲರಾಮ, ವಿಕ್ರಮ, ಗೋಪಿ, ಜಯಪ್ರಕಾಶ್‌, ಕಾವೇರಿ, ದುರ್ಗಾಪರಮೇಶ್ವರಿ ಮತ್ತು ಲಕ್ಷ್ಮಿ ಆನೆಗಳನ್ನು ಸೋಮವಾರ ಕರೆ ತರಲು ಅರಣ್ಯ ಇಲಾಖೆ ನಿರ್ಧರಿಸಿತ್ತು. ಆದರೆ, ಮತ್ತಿಗೋಡು ಆನೆ ಶಿಬಿರದಿಂದ ಬಲರಾಮ ಆನೆಯನ್ನು ಅರಣ್ಯ ಇಲಾಖೆಯ ಲಾರಿಯಲ್ಲಿ ಭಾನುವಾರ ಮಧ್ಯಾಹ್ನವೇ ತರಲಾಗಿದೆ. 

ಹೆಚ್ಚಿನ ಜಿಲ್ಲೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

61ವರ್ಷದ ಬಲರಾಮ 21 ವರ್ಷಗಳಿಂದ ದಸರೆಯಲ್ಲಿ ಭಾಗವಹಿಸಿದ್ದು, ಒಟ್ಟು 14 ಬಾರಿ ಚಿನ್ನದ ಅಂಬಾರಿ ಹೊತ್ತಿದೆ. 8 ವರ್ಷಗಳಿಂದ ನಿಶಾನೆ ಆನೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಬಲರಾಮನನ್ನು ಒಂದು ದಿನ ಮೊದಲೇ ಕರೆತಂದಿದ್ದರ ಹಿಂದೆ ವಿಶೇಷ ಕಾರಣವೇನೂ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.