Bagalkote: ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಜಾಕ್‌ಪಾಟ್ ಗೆದ್ದ ಬಾಗಲಕೋಟೆಯ ಚಾಯ್‌ವಾಲಾ!
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಯುವಕ ರಮಜಾನ್ ಮಲ್ಲಿಕಸಾಬ್ ಪೀರಜಾದೆ ಕೌನ್ ಬನೇಗಾ ಕರೋಡ್‌ಪತಿಯಲ್ಲಿ 50 ಲಕ್ಷ ರೂಪಾಯಿ ಗೆದ್ದಿದ್ದಾರೆ. ಬಡ ಕುಟುಂಬದಿಂದ ಬಂದ ರಮಜಾನ್, ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.
ಬಾಗಲಕೋಟೆ (ಜ.11): ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಛನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್‌ಪತಿ ಶೋನಲ್ಲಿ ಬಾಗಲಕೋಟೆಯ ಯುವಕನಿಗೆ ಜಾಕ್‌ಪಾಟ್ ಹೊಡೆದಿದೆ. ಸೋನಿ ಚಾನೆಲ್‌ನಲ್ಲಿ ಪ್ರಸಾರವಾಗುವ ಕೆಬಿಸಿಯ 16ನೇ ಆವೃತ್ತಿಯಲ್ಲಿ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಪಟ್ಟಣದ ಯುವಕ ರಮಜಾನ್ ಮಲ್ಲಿಕಸಾಬ್ ಪೀರಜಾದೆ 50 ಲಕ್ಷ ರೂಪಾಯಿ ಗೆದ್ದಿದ್ದಾರೆ. 1 ಕೋಟಿಯ ಪ್ರಶ್ನೆಗೆ ಉತ್ತರಿಸಲು ಅವರು ಹಿಂದೆ ಸರಿದ ಪರಿಣಾಮವಾಗಿ 50 ಲಕ್ಷ ರೂಪಾಯಿ ಗೆದ್ದುಕೊಂಡಿದ್ದಾರೆ. 50 ಲಕ್ಷಕ್ಕೆ ಖುಷಿಪಟ್ಟು ರಮಜಾನ್ ಮಲ್ಲಿಕಸಾಬ್ ಪೀರಜಾದೆ ಮನೆಗೆ ವಾಪಾಸಾಗಿದ್ದಾರೆ.
ರಮಜಾನ್ ಬಡ ಕುಟುಂಬದಲ್ಲಿ ಜನಿಸಿ ಯುವಕ. ತಾಯಿ ಮುನೇರಾ ಮನೆಗೆಲಸ ಮಾಡುತ್ತಿದ್ದರೆ. ತಂದೆ ಮಲ್ಲಿಕಸಾಬ್ ಗ್ಯಾಸ್ ವೆಲ್ಡರ್ ಆಗಿದ್ದಾರೆ. ಅಲ್ಪ ಸ್ವಲ್ಪ ಆದಾಯದಲ್ಲಿ ಮಲ್ಲಿಕಸಾಬ್ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದ್ದಾರೆ. ತಂದೆಯ ಜೊತೆಗೂಡಿ ಕೆಲಸ ಮಾಡುತ್ತಾ ರಮಜಾನ್ ತಮ್ಮ ಶಿಕ್ಷಣ ಮುಂದುವರಿಸಿದ್ದರು.
ವಾಚ್‌ಮನ್ ಕೆಲಸ ಮಾಡಿಯೂ ರಮ್‌ಜಾನ್ ಶಿಕ್ಷಣ ಮುಂದುವರಿಸಿದ್ದ. ಮಹಾಲಿಂಗಪುರ ಸಿಪಿ ಸಂಸ್ಥೆಯ ಕೆಎಲ್‌ಇ ಕಾಲೇಜಿನಲ್ಲಿ ಬಿಎ ಪದವಿ ಪೂರೈಸಿ, ಧಾರವಾಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.
ಟ್ರೇಲರ್ ರಿಲೀಸ್: ನನ್ನ ಪದವಿ ಈಗ ಮುಕ್ತಾಯವಾಗಿದೆ. ಕೆಎಎಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ಅದರೊಂದಿಗೆ ನಾನು ಚಹಾ ಅಂಗಡಿಯಲ್ಲೂ ಕೆಲಸ ಮಾಡುತ್ತಿದ್ದೇನೆ. 5-6 ಗಂಟೆಗಳ ಕಾಲ ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತೇನೆ. ಆ ಬಳಿಕ ನನಗೆ ಅಭ್ಯಾಸ ಮಾಡಲು ಸಮಯ ಸಿಗುತ್ತದೆ. ಚಹಾ ಅಂಗಡಿಯಲ್ಲಿ ಕೆಲಸ ಮಾಡುವ ಮುನ್ನ ನಾನು ಬ್ಯಾಡ್ಮಿಂಟನ್ ಕೋರ್ಟ್‌ವೊಂದರಲ್ಲಿ ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದೆ ಎಂದು ರಮಜಾನ್ ಹೇಳಿದ್ದಾರೆ.
ಕರ್ನಾಟಕದ ಬೆಳಗಾವಿಯ ಬ್ಯಾಂಕ್ ಸೇರಿದಂತೆ ದೇಶದ 4 ಸಹಕಾರಿ ಬ್ಯಾಂಕ್‌ಗಳಿಗೆ ಆರ್‌ಬಿಐನಿಂದ ದಂಡ!
ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ನನ್ನದೇ ವಯಸ್ಸಿನ ಹಲವರು ಆಟವಾಡುತ್ತಿರುವುದನ್ನು ನೋಡುತ್ತಿದ್ದೆ. ಆ ಬಳಿಕ ನಾನೂ ಕೂಡ ಅವರೊಂದಿಗೆ ಆಡಲು ಆರಂಭ ಮಾಡಿದೆ. ಆರಂಭದಲ್ಲಿ ನನಗೆ ಬ್ಯಾಡ್ಮಿಂಟನ್ ಆಡಲು ಬೇಕಾದ ಯಾವುದೇ ವಸ್ತು ಇದ್ದರಿಲಿಲ್ಲ. ಅವರ ರಾಕೆಟ್‌ಗಳನ್ನು 5-10 ನಿಮಿಷ ಪಡೆದುಕೊಂಡು ಅವರನ್ನೇ ಸೋಲಿಸುತ್ತಿದ್ದೆ ಎಂದು ಹೇಳಿದ್ದಾರೆ.
ಈ ಬ್ಯಾಂಕ್‌ನಲ್ಲಿ ಅಕೌಂಟ್ ಇದ್ರೆ ಜಾಕ್‌ಪಾಟ್: ಉಳಿತಾಯ ಖಾತೆಯ ಬಡ್ಡಿ ಭರ್ಜರಿ ಏರಿಕೆ!
ಜ.13ಕ್ಕೆ ಪ್ರಸಾರ: ರಮಜಾನ್ ಮಲ್ಲಿಕಸಾಬ್ ಪೀರಜಾದೆ ಅವರ ಎಪಿಸೋಡ್ ಜನವರಿ 13 ರಂದು ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.