ಬೆಳಗಾವಿ [ಸೆ.11]: ಮಹಾರಾಷ್ಟ್ರದಲ್ಲಿ ಸುರಿದ  ಬಾರೀ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 23 ಗ್ರಾಮಗಳ ಜನರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.

ಕೃಷ್ಣಾ ನದಿ ತೀರದ ಗ್ರಾಮಗಳು ಹೆಚ್ಚು ಸಮಸ್ಯೆ ಎದುರಿಸುತ್ತಿವೆ. ಬಾಗಲಕೋಟೆಯಿಂದ ಜಮಖಂಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಜಲಾವೃತವಾಘಿದೆ.

ಇದರಿಂದ ಜಮಖಂಡಿ ಕಾಲೇಜಿಗೆ ತೆರಳಬೇಕಾದ ವಿದ್ಯಾರ್ಥಿಗಳು 15 ಕಿ.ಮೀ ಮಾರ್ಗದ ಬದಲಾಗಿ 50 ಕಿ.ಮೀ ಸಂಚಾರ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಕೃಷ್ಣಾ ನದಿಯ ತೀರದಲ್ಲಿ ಕೇವಲ 100 ಮೀಟರ್ ಅಂತರದಲ್ಲಿ ಇರುವ ಝಂಜರವಾಡ ಗ್ರಾಮಸ್ಥರಲ್ಲಿ ಇನ್ನಷ್ಟು ಆತಂಕ ಎದುರಾಗಿದೆ.