‘ನೆರೆ’ವಿಗೆ ಬನ್ನಿ: ಅನ್ನದಾತನಿಂದ ‘ವಿಧಾತ’ನಿಗೆ ಮನವಿ ಪತ್ರ!

ರಾಜ್ಯದ ನೆರೆ ಪರಿಹಾರಕ್ಕಾಗಿ ಪ್ರಧಾನಿ ಮೋದಿಗೆ ಪತ್ರ ಬರೆದ  ರೈತ| ಬಾಗಲಕೋಟೆ ಜಿಲ್ಲೆಯ ಹಂಡರಗಲ್ ಗ್ರಾಮದ ರೈತನಿಂದ ಪ್ರಧಾನಿಗೆ ಪತ್ರ| ಮಡಿವಾಳಯ್ಯ ಗಂಗೂರ, ಪ್ರಧಾನಿ ಮೋದಿಗೆ ಪತ್ರ ಬರೆದ ರೈತ| ಬಾಗಲಕೋಟೆ ಜಿಲ್ಲೆಯಲ್ಲಿ ಉಂಟಾದ ನೆರೆ ಮತ್ತು ಬರದಿಂದಾದ ಹಾನಿಗೆ ಪರಿಹಾರ ನೀಡುವಂತೆ ಆಗ್ರಹ| ಅತಿವೃಷ್ಠಿ, ಅನಾವೃಷ್ಠಿಗೆ ಸ್ಪಂದಿಸಿ ಪರಿಹಾರ ಘೋಷಿಸುವಂತೆ ಆಗ್ರಹಿಸಿದ ಮಡಿವಾಳಯ್ಯ| 
 

Bagalkot Farmer Writes PM Modi  To Announce Package For Flood Relief

ಮಲ್ಲಿಕಾರ್ಜುನ ಹೊಸಮನಿ

ಬಾಗಲಕೋಟೆ(ಸೆ.18): ರಾಜ್ಯದಲ್ಲಿ ಇತ್ತೀಚಿಗೆ ಸಂಭವಿಸಿದ ಭೀಕರ ನೆರೆಗೆ ಸ್ಪಂಧಿಸಿ ಪರಿಹಾರ ಘೋಷಣೆಗೆ ಮುಂದಾಗುವಂತೆ ಆಗ್ರಹಿಸಿ ರೈತನೋರ್ವ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾನೆ.

ಬಾಗಲಕೋಟೆ ಜಿಲ್ಲೆಯ ಹಂಡರಗಲ್ ಗ್ರಾಮದ ರೈತ ಮಡಿವಾಳಯ್ಯ ಗಂಗೂರ್ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು, ಬಾಗಲಕೋಟೆ ಜಿಲ್ಲೆಯಲ್ಲಿ ಉಂಟಾದ ನೆರೆ ಮತ್ತು ಬರದಿಂದಾದ ಹಾನಿಗೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾನೆ.

"

ಅತಿವೃಷ್ಠಿ, ಅನಾವೃಷ್ಠಿಗೆ ಕೂಡಲೇ ಸ್ಪಂದಿಸಿ ಪರಿಹಾರ ಘೋಷಿಸುವಂತೆ ಆಗ್ರಹಿಸಿರುವ ಮಡಿವಾಳಯ್ಯ, ರಾಜ್ಯದಲ್ಲಿ ಸಂಭವಿಸಿರುವ ಅಪಾರ ಪ್ರಮಾಣದ ಹಾನಿ ತನ್ನಿಂದ ನೋಡಲಾಗುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾನೆ.

ನೆರೆಯಿಂದ ಲಕ್ಷಾಂತರ ಜನರ ಬದುಕು ಬೀದಿಗೆ ಬಿದ್ದಿದ್ದು, ದನಕರುಗಳು ಕೂಡ ಸಂಕಷ್ಟಕ್ಕೆ ಸಿಲುಕಿವೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಪರಿಹಾರ ಘೋಷಣೆಯ ಮೂಲಕ ನೆರವಿಗೆ ಧಾವಿಸುವಂತೆ ಮಡಿವಾಳಯ್ಯ ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಿದ್ದಾನೆ. 

Latest Videos
Follow Us:
Download App:
  • android
  • ios