ಮೃತದೇಹ ಮೇಲೆ ಶಸ್ತ್ರಚಿಕಿತ್ಸೆ: ಭಾರತದಲ್ಲೇ ಮೊದಲು, ಬಾಗಲಕೋಟೆ ವೈದ್ಯರ ಸಾಧನೆ..!

ಮೆದುಳಿನಲ್ಲಿ ಕೃತಕ ದ್ರವ ಸಂಚಾರ ಮಾಡುವ ಶೋಧನೆ| ಈ ಸಂಶೋಧನೆ ಭಾರತದಲ್ಲೇ ಪ್ರಥಮ ಹಾಗೂ ಜಗತ್ತಿನಲ್ಲಿ ಎರಡನೇಯದು| ಮೃತಶರೀರದ ಮೆದುಳಿನ ಶಸ್ತ್ರಚಿಕಿತ್ಸಾ ಕಾರ್ಯಾಗಾರವನ್ನು ಆಯೋಜಿಸಿ ದೇಶದ ವಿವಿಧ ಭಾಗಗಳ ನರಶಸ್ತ್ರಚಿಕಿತ್ಸಕರಿಗೆ ತರಬೇತಿ| 

Bagalkot Doctors Successful for Surgery on Deadbody grg

ಬಾಗಲಕೋಟೆ(ಫೆ.21): ಶಸ್ತ್ರ ಚಿಕಿತ್ಸಕರನ್ನು ಮೆದುಳು ಮತ್ತು ನರಗಳ ಶಸ್ತ್ರಚಿಕಿತ್ಸೆಯಲ್ಲಿ ಪರಿಣಿತರನ್ನಾಗಿಸಲು ಮೃತದೇಹಗಳ ಮೇಲೆ ಶಸ್ತ್ರಚಿಕಿತ್ಸೆ ಮಾಡುವ ವಿಧಾನವನ್ನು ವೈದ್ಯಕೀಯ ವಿಜ್ಞಾನದ ಅಧ್ಯಯನದ ಭಾಗವಾಗಿ ಬಾಗಲಕೋಟೆಯ ಎಸ್‌.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪರಿಚಯಿಸಲಾಗಿದೆ.

ಈ ಒಂದು ಕಾರ್ಯಯೋಜನೆಗಾಗಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ದೇಹದಾನ ಮಾಡಿದ ಮೃತ ದೇಹಗಳನ್ನು ಉಪಯೋಗಿಸಿಕೊಳ್ಳಲಾಗುವುದು. ಮನುಷ್ಯನ ಮೆದುಳಿನ ಒಳಭಾಗದಲ್ಲಿ ಮತ್ತು ಹೊರಭಾಗದಲ್ಲಿ ಸಿ.ಎಸ್‌.ಎಫ್‌ ಎನ್ನುವ ನೀರಿನಂತಹ ಒಂದು ದ್ರವ ಇರುತ್ತದೆ. ಈ ದ್ರವ ಮೆದುಳನ್ನು ಸಂರಕ್ಷಿಸುತ್ತಿರುತ್ತದೆ. ಆದರೆ ಮೃತಶರೀರದಲ್ಲಿ ಸಿ.ಎಸ್‌.ಎಫ್‌ ದ್ರವದ ಸಂಚಾರ ಇರುವುದಿಲ್ಲವಾದ್ದರಿಂದ ಮೆದುಳು ಶಸ್ತ್ರಚಿಕಿತ್ಸೆಯ ತರಬೇತಿಯನ್ನು ನೀಡುವುದು ಸಾಧ್ಯವಾಗುವುದಿಲ್ಲ.

ಬಾಗಲಕೋಟೆ: MBBS ವಿದ್ಯಾರ್ಥಿನಿ ನೇಣಿಗೆ ಶರಣು, ಕಾರಣ..?

ಎಸ್‌.ನಿಜಲಿಂಗಪ್ಪ ವೃದ್ಯಕೀಯ ಮಹಾವಿದ್ಯಾಲಯದ ಅಂಗರಚನಾ ಶಾಸ್ತ್ರ ವಿಭಾಗದಲ್ಲಿ ಮುಖ್ಯಸ್ಥರಾದ ಡಾ.ಸಂಜೀವ ಕೊಳಗಿ, ಬೋಧಕ ಸಿಬ್ಬಂದಿ ಮತ್ತು ಬೆಂಗಳೂರಿನ ನರಶಸ್ತ್ರಚಿಕಿತ್ಸಾ ತಜ್ಞರಾದ ಡಾ.ಅಜಯ ಹೆರೂರ ಅವರು ಜೊತೆಗೂಡಿ ಸಂಶೋಧನೆಯ ಮೂಲಕ ಮೃತಶರೀರದ ಮೆದುಳಿನಲ್ಲಿ ಕೃತಕ ದ್ರವವನ್ನು ಸಂಚರಿಸುವಂತೆ ಮಾಡಿ ಮೃತದೇಹದ ಮೆದುಳಿನ ಶಸ್ತ್ರಚಿಕಿತ್ಸೆಯನ್ನು ಸಾಧ್ಯವಾಗಿಸಿರುವರು. ಪರಿಣಾಮವಾಗಿ ಮೃತಶರೀರದ ಮೆದುಳಿನ ಶಸ್ತ್ರಚಿಕಿತ್ಸಾ ಕಾರ್ಯಾಗಾರವನ್ನು ಆಯೋಜಿಸಿ ದೇಶದ ವಿವಿಧ ಭಾಗಗಳ ನರಶಸ್ತ್ರಚಿಕಿತ್ಸಕರಿಗೆ ತರಬೇತಿ ನೀಡಲಾಯಿತು. ಮೃತದೇಹದ ಮೆದುಳಿನಲ್ಲಿ ಕೃತಕ ದ್ರವ ಸಂಚಾರ ಮಾಡುವ ಈ ಪ್ರಕಾರದ ಸಂಶೋಧನೆಯು ಭಾರತದಲ್ಲೇ ಪ್ರಥಮ ಹಾಗೂ ಜಗತ್ತಿನಲ್ಲಿ ಎರಡನೇಯ ಸಂಶೋಧನೆ ಎನ್ನುವುದು ಅತ್ಯಂತ ಅಭಿಮಾನ ಮತ್ತು ಹೆಮ್ಮೆಯ ಸಂಗತಿಯಾಗಿದೆ.
 

Latest Videos
Follow Us:
Download App:
  • android
  • ios