ಮಹತ್ವದ ಯೋಜನೆ ಅನುಷ್ಠಾನ: ರಾಜ್ಯದಲ್ಲಿಯೇ ಬಾಗಲಕೋಟೆ ನಂ.1
ರಾಜ್ಯದಲ್ಲಿ ಬಾಗಲಕೋಟೆ ಜಿಪಂ ಮುನ್ನಡೆ| ಮಾತೃವಂದನೆಯಲ್ಲಿ ಪ್ರಥಮ | ನರೇಗಾ 7ನೇ ಸ್ಥಾನ | ಬೇಟಿ ಬಚಾವೋ, ಪಡಾವೋದಲ್ಲಿ ಸಾಧನೆ| ಆನ್‌ಲೈನ್ ನೋಂದಣಿ ಸೇರಿದಂತೆ ಬೇಟಿ ಬಚಾವೊ, ಬೇಟಿ ಪಡಾವೋ ಯೋಜನೆಯಲ್ಲಿಯೂ ಗುರಿ ಮೀರಿ ಸಾಧನೆ|
ಬಾಗಲಕೋಟೆ[ಜ.22]: ಬಾಗಲಕೋಟೆ ಜಿಪಂ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ನರೇಗಾ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ ಎಂದು ಜಿ ಪಂ ಸಿಇಒ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.
ಮಂಗಳವಾರ ಬಾಗಲಕೋಟೆಯ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬಾಗಲಕೋಟೆ ಜಿಲ್ಲೆ ಮಾನವ ದಿನಗಳ ಸೃಜನೆಯಲ್ಲಿ 7ನೇ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದರೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯಲ್ಲಿ ಭೌತಿಕ ಗುರಿಯಲ್ಲಿ ನೂರರಷ್ಟು ಸಾಧನೆ ಮಾಡಿ ರಾಜ್ಯದಲ್ಲಿಯೇ ಬಾಗಲಕೋಟೆ ಜಿಲ್ಲೆಯು ಮೂರನೇ ಸ್ಥಾನದಲ್ಲಿದೆ ಎಂದು ವಿವರಿಸಿದರು. ಪ್ರಧಾನಮಂತ್ರಿ ಮಾತೃವಂದನೆ ಯೋಜನೆ ಅಡಿಯಲ್ಲಿ ಬಾಗಲಕೋಟೆ ಜಿಲ್ಲೆ ಕಳೆದ ಒಂದು ವರ್ಷದಿಂದ ಮೊದಲನೇ ಸ್ಥಾನದಲ್ಲಿದ್ದು, ಆನ್‌ಲೈನ್ ನೋಂದಣಿ ಸೇರಿದಂತೆ ಬೇಟಿ ಬಚಾವೊ, ಬೇಟಿ ಪಡಾವೋ ಯೋಜನೆಯಲ್ಲಿಯೂ ಗುರಿ ಮೀರಿ ಸಾಧನೆ ಮಾಡಲಾಗಿದೆ ಎಂದು ಹೇಳಿದರು.
ಉದ್ಯೋಗ ಖಾತ್ರಿಯಲ್ಲಿ 7ನೇ ಸ್ಥಾನ:
ರಾಜ್ಯದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಾನವ ದಿನಗಳ ಸೃಜನೆ ಮಾಡುವಲ್ಲಿ 7ನೇ ಸ್ಥಾನ ಬಾಗಲಕೋಟೆಯದ್ದಾಗಿದ್ದು, ಪ್ರತಿದಿನ ಕನಿಷ್ಠ 12 ಸಾವಿರದಿಂದ 15 ಸಾವಿರ ಕೂಲಿ ಕಾರ್ಮಿಕರು ವಿವಿಧ ಕಾಮಗಾರಿಗಳನ್ನು ಮಾಡುತ್ತಿದ್ದು ಪ್ರಸಕ್ತ ಅವಧಿಯಲ್ಲಿ 38.85 ಲಕ್ಷ ಮಾನವ ದಿನಗಳ ಗುರಿ ಹೊಂದಲಾಗಿದೆ. ಇಲ್ಲಿಯವರೆಗೆ 31.45 ಮಾನವ ದಿನಗಳ ಸೃಜನೆ ಮಾಡಿ ಶೇ. 80.96 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಯೋಜನೆಯಲ್ಲಿ 5044 ಕುರಿದೊಡ್ಡಿ ಹಾಗೂ ದನದೊಡ್ಡಿಗಳಿಗೆ ಅನುಮೋದನೆ, 162 ಕೆರೆ ಅಭಿವೃ ದ್ಧಿ ಕಾಮಗಾರಿ, 252 ಶಾಲಾ ಕಾಂಪೌಂಡ್‌ಗಳ ನಿರ್ಮಾಣ, ೧೯೮ ಆಟದ ಮೈದಾನಗಳ ಅಭಿವೃ ದ್ಧಿ, 170 ಶಾಲಾ ಶೌಚಾಲಯಗಳ ಕಾಮಗಾರಿ, 125 ಮಲ್ಟಿ ಆರ್ಚ್ ಚೆಕ್ ಡ್ಯಾಂ ಕಾಮಗಾರಿ, ನೆರೆ ಹಾವಳಿಗೆ ತುತ್ತಾದ ಪ್ರದೇಶದಲ್ಲಿ ಸಿಸಿ ರಸ್ತೆ ನಿರ್ಮಾ ಣ, ಸ್ಮಶಾನ ಅಭಿವೃದ್ಧಿ, ಕೃಷಿ ಹೊಂಡ, ಘನತ್ಯಾಜ್ಯ ವಿಲೇವಾರಿ ಘಟಕಗಳ ಸ್ಥಾಪನೆಯನ್ನು ಮಾಡಲಾಗುತ್ತಿದೆ. ತೋಟಗಾರಿಕೆ ಇಲಾಖೆ ವತಿಯಿಂದ ಇದೆ ಯೋಜನೆಯಲ್ಲಿ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಕಾರ್ಯಕ್ರಮಕ್ಕಾಗಿ 480ಎಕರೆಗಳಲ್ಲಿ ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆಸಲು ಅನುದಾನ ನೀಡಲಾಗಿದೆ ಎಂದು ಹೇಳಿದರು.
ಸ್ವಚ್ಛ ಭಾರತ ಮಿಷನ್:
ಬಾಗಲಕೋಟೆ ಜಿಲ್ಲೆಯಲ್ಲಿ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ವಿವಿಧ ಹಂತದ ಶೌಚಾಲಯಗಳ ನಿರ್ಮಾಣ ಮತ್ತು ತ್ಯಾಜ್ಯ ವಿಲೇ ವಾರಿ ಘಟಕಗಳ ಸ್ಥಾಪನೆ, ಪ್ಲಾಸ್ಟಿಕ್ ನಿಷೇಧ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶೌಚಾಲಯಗಳ ಬಳಕೆಗೆ ವಿಶೇ ಷ ಜನಜಾಗೃತಿಯನ್ನು ಗ್ರಾಮೀಣ ಮಟ್ಟದಲ್ಲಿ ಹಮ್ಮಿ ಕೊಳ್ಳಲಾಗಿದೆ. ವೈಯಕ್ತಿಕ ಶೌಚಾಲಯಗಳನ್ನು ನಿಮಿಸಲು, ಅಂಗನವಾಡಿಯಲ್ಲಿ ಶೌಚಾಲಯಗಳು, ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ, ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳಲ್ಲಿ ಸಸಿ ನೆಡುವ ಕಾ ರ್ಯಕ್ರಮ, ಗ್ರಾಪಂಗಳಿಗೆ ಕಸ ಸಾಗಿಸುವ ವಾಹನ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಗ್ರಾಮೀಣ ಜೀವನೋಪಾಯ ಯೋಜನೆ:
ರಾಷ್ಟ್ರೀ ಯ ಗ್ರಾಮೀಣ ಜೀವನೋಪಾಯ ಯೋಜನೆ ಅಡಿ ಯಲ್ಲಿ ಬಾಗಲಕೋಟೆ ಜಿಲ್ಲೆ ರಾಜ್ಯದಲ್ಲಿಯೇ 3ನೇ ಸ್ಥಾನದಲ್ಲಿದ್ದು, ಯೋಜನೆಯಂತೆ ಎಲ್ಲಾ ಚಟುವಟಿಕೆ ಗಳಲ್ಲಿ ಶೇ.100ರಷ್ಟು ಸಾಧನೆ ಮಾಡಲಾಗಿದೆ. ಜಿಲ್ಲೆಯಲ್ಲಿನ 126 ಗ್ರಾಮ ಪಂಚಾಯ್ತಿಗಳಲ್ಲಿ ಮಹಿಳಾ ಗ್ರಾಮ ಒಕ್ಕೂಟಗಳ ರಚನೆ, 4509 ಸ್ವ ಸಹಾಯ ಗುಂಪುಗಳನ್ನು ಯೋಜನೆಯಡಿಯಲ್ಲಿ ತಂದು ಅವರಿಗೆ ಸಮುದಾಯ ಬಂಡವಾಳ ನಿಧಿ ಬಿಡುಗಡೆ ಮಾಡಿ ವಿವಿಧ ಜೀವನೋಪಾಯ ಚಟುವ ಟಿಕೆಗಳನ್ನು ಕೈಗೊಳ್ಳಲು ಪೂರಕವಾದ ವಾತಾವರಣ ನಿರ್ಮಿಸಲಾಗಿದೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ಪ್ಲಾ ಸ್ಟಿಕ್‌ಮುಕ್ತ ಅಭಿಯಾನವನ್ನು ಮಾಡಿ ಜಿಲ್ಲಾಮಟ್ಟದಲ್ಲಿ ಪ್ಲಾಸ್ಟಿಕ್ ಬ್ಯಾಗುಗಳ ಬದಲಾಗಿ ಬಟ್ಟೆ ಬ್ಯಾಗುಗಳನ್ನು ಸ್ವ ಸಹಾಯ ಸಂಘಗಳಿಂದ ತಯಾರಿಸಿ ಪ್ರದರ್ಶನ ಮತ್ತು ಮಾರಾಟ ಮೇಳ ಮಾಡಲಾಗಿದೆ ಎಂದರು.
ಶಿಕ್ಷಣ ಇಲಾಖೆ: ಕಳೆದ ವರ್ಷ ಬಾಗಲಕೋಟೆ ಜಿಲ್ಲೆಯಲ್ಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಅತ್ಯಂತ ಕಡಿ ಮೆಯಾಗಿದೆ. ರಾಜ್ಯದಲ್ಲಿ 27ನೇ ಸ್ಥಾನದಲ್ಲಿ ಪಡೆದಿದ್ದರಿಂದ ಪರೀಕ್ಷಾ ಫಲಿತಾಂಶವನ್ನು ಸುಧಾರಿಸುವ ಜವಾಬ್ದಾರಿ ನಮ್ಮ ಮೇಲೆ ಸಾಕಷ್ಟಿದೆ. ಹೀಗಾಗಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ವಾರದಲ್ಲಿ ಕೆಲವು ದಿನಗಳ ಕಾಲ ಅನೀರಿಕ್ಷಿತವಾಗಿ ಶಾಲೆಗಳಿಗೆ ಭೇಟಿ ನೀಡಿ ಶೈಕ್ಷಣಿಕ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿ ಅವುಗಳ ಸುಧಾರಣೆಗೆ ಸಲಹೆ ಸೂಚನೆಗಳನ್ನು ನೀಡಲು ಆರಂಭಿಸಿದ್ದೇವೆ ಎಂದರು.
ಮಾತೃ ವಂದನಾ ಯೋಜನೆಯಲ್ಲಿ ರಾಜ್ಯಕ್ಕೆ ಪ್ರಥಮ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿಯಲ್ಲಿ ಬಾಗಲಕೋಟೆ ಜಿಲ್ಲೆ ಕಳೆದ ಒಂದು ವರ್ಷದಿಂದ ಪ್ರಥಮ ಸ್ಥಾನದಲ್ಲಿದೆ. ಶೇ.92ರಷ್ಟು ಸಾಧನೆ ಮಾಡಲಾಗಿದೆ. ಈ ಯೋಜನೆಯ ವಿವಿಧ ಹಂತದಲ್ಲಿ ಯಶಸ್ವಿಯಾಗಲು ವಾಟ್ಸ್‌ಪ್ ಗ್ರೂಪ್ ಮುಖಾಂತರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಫಲಾನುಭವಿಗಳಿಗೆ ನೆರವಾಗಿ ಸಂಪರ್ಕ, ಅಂಗನವಾಡಿ ಕೇಂದ್ರದಿಂದ ದೂರದಲ್ಲಿರುವ ಫಲಾನುಭವಿಗಳ ಮನೆಗೆ ಬಿಸಿಯೂಟ ಸರಬರಾಜು, ಗರ್ಭಾವಸ್ಥೆಯ ಕೊನೆಯ ಒಂದು ತಿಂಗಳು ಹಾಗೂ ಬಾಣಂತಿಯರಿಗೆ 45 ದಿನಗಳವರೆಗೆ ಅವರ ಮನೆಗೆ ಉಪಹಾರ ತಯಾರಿಸಿ ಕೊಡುವುದು, ಫಲಾನುಭವಿಗಳ ಹಾಜರಾತಿ ಹೆಚ್ಚಿಸಲು ಆಪ್ತ ಸಮಾಲೋಚನೆ ಮಾಡಿಸುವುದರಿಂದ ರಾಜ್ಯದಲ್ಲಿಯೇ ಬಾಗಲಕೋಟೆ ಜಿಲ್ಲೆ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು
ಬೇಟಿ ಬಚಾವೋ ಬೇಟಿ ಪಡಾವೋ: ಗುರಿ ಮೀರಿ ಸಾಧನೆ
ಕೇಂದ್ರ ಸರ್ಕಾರದ ಮಹತ್ವಾಂಕಾಕ್ಷೆಯ ಯೋಜನೆ ಯಾದ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮಕ್ಕೆ ಬಾಗಲಕೋಟೆ ಜಿಲ್ಲೆಯೂ ಆಯ್ಕೆಯಾಗಿದ್ದು, ಲಿಂಗಪಕ್ಷಪಾತ ಮತ್ತು ಲಿಂಗ ಆಯ್ಕೆ ಮಾಡುವುದನ್ನು ತಡೆಗಟ್ಟುವದು, ಹೆಣ್ಣು ಮಕ್ಕಳ ಉಳಿವು ಮತ್ತು ಅವರ ರಕ್ಷಣೆಯನ್ನು ಖಾತ್ರಿಗೊಳಿಸುವುದು. ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜೊತೆಗೆ ಸಮಾನತೆಯನ್ನು ಒದಗಿಸುವ ಪ್ರಯತ್ನ ಇದಾಗಿದ್ದು, ಈ ಯೋಜನೆ ಯಿಂದ ಜಿಲ್ಲೆಯಲ್ಲಿ ಲಿಂಗಾನುಪಾ ತದಲ್ಲಿ ಉತ್ತಮವಾದ ನಿರೀಕ್ಷೆ ಕಾಣುತ್ತಿದೆ ಎಂದರು.
ಹುನಗುಂದ ತಾಲೂಕಿನ ಇಲ್ಲಾಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಕಳಪೆ ಕಾಮಗಾರಿಯಾಗಿಲ್ಲ ಎಂದು ಮುಖ್ಯ ಎಂಜಿನಿಯರ್ ನೀಡಿದ ವರದಿಯಲ್ಲಿ ಸ್ಪಷ್ಟವಾಗಿದೆ. ಕಾಮಗಾರಿ ವಿಳಂಬವಾಗಿದ್ದರಿಂದ ಹಾಗೂ ಜಿಪಂ ಸದಸ್ಯರು ಕಳಪೆ ಕಾಮಗಾರಿಯಾಗಿದೆ ಎಂದು ದೂರಿದ್ದರಿಂದ ಸರ್ಕಾರಕ್ಕೆ ಕಾಮಗಾರಿಯ ಕುರಿತು ಸ್ಪಷ್ಟತೆಗಾಗಿ ವಿನಂತಿಸಲಾಗಿತ್ತು. ಈ ಕುರಿತು ಸರ್ಕಾರದ ಮಟ್ಟದಲ್ಲಿ ಕಾಮಗಾರಿಯ ಕುರಿತು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಕಳಪೆ ಕಾಮಗಾರಿ ಕುರಿತು ಯಾವುದೇ ರೀತಿಯಲ್ಲಿ ವರದಿಯಾಗಿಲ್ಲ ಎಂದು ತಿಳಿಸಿದರು.