Asianet Suvarna News Asianet Suvarna News

'ದೊರೆಸ್ವಾಮಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್‌ ಪುರುಷ'

ಯತ್ನಾಳ ಹಿರಿಯ ಬಗ್ಗೆ ಗೌರವದಿಂದ ನಡೆದುಕೊಳ್ಳಿ: ಎಸ್‌.ಜಿ.ನಂಜಯ್ಯನಮಠ| ದೊರೆಸ್ವಾಮಿ ಯಾವುದೇ ಪಕ್ಷಕ್ಕೆ ಸೇರಿದವರಲ್ಲ| ಒಬ್ಬ ಸಾಮಾಜಿಕ ಹೋರಾಟಗಾರ, ಸ್ವಾತಂತ್ರ್ಯ ನಂತರ ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು|ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್‌ ಪುರುಷ|

Bagalkot District Congress President S G Nanjayanamath Talks Over Doreswamy
Author
Bengaluru, First Published Mar 1, 2020, 10:52 AM IST

ಬಾದಾಮಿ(ಮಾ.01): ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಬಗ್ಗೆ ಹಗುರವಾಗಿ ಮಾತನಾಡುವುದು ಅವರ ಘನತೆಗೆ ಮತ್ತು ವ್ಯಕ್ತಿತ್ವಕ್ಕೆ ಗೌರವ ತರುವಂದಲ್ಲ. ಹಿರಿಯರ ಬಗ್ಗೆ ಗೌರವದಿಂದ ನಡೆದುಕೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಜಿ.ನಂಜಯ್ಯನಮಠ ಹೇಳಿದ್ದಾರೆ.

ಶನಿವಾರ ನಗರದ ಕಾನಿಪ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆ ವ್ಯಕ್ತಿ ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಒಬ್ಬ ಸಾಮಾಜಿಕ ಹೋರಾಟಗಾರ, ಸ್ವಾತಂತ್ರ್ಯ ನಂತರ ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಕಳೆದ 35 ವರ್ಷಗಳಿಂದ ಜನರ ಧ್ವನಿಯಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದವರು. ಜೈಲುವಾಸ ಅನುಭವಿಸಿದ ಅವರು ಒಬ್ಬ ಗಾಂಧೀಜಿ ಅನುಯಾಯಿಗಳಾದ ದೊರೆ ಸ್ವಾಮಿಯವರನ್ನು ಅವನೊಬ್ಬ ಕಾಂಗ್ರೆಸ್‌ ಏಜೆಂಟ್‌ ಎಂದು ಹೇಳುವುದು ಅಂತವರ ಮೇಲೆ ಆರೋಪ ಮಾಡುವುದು ಬಸನಗೌಡ ಪಾಟೀಲ ಯತ್ನಾಳ ಅವರು ಬಿಡಬೇಕು ಎಂದು ಒತ್ತಾಯಿಸಿದರು.

ಇಲ್ಲ ಸಲ್ಲದ ಆರೋಪ ಬೇಡ:

ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳಿಗೆ ಸುಮಾರು ದಿವಸಗಳಿಂದ ಟೀಕೆ ಮಾಡುವುದು ಸರ್ವೆ ಸಾಮಾನ್ಯವಾಗಿದೆ. ಇವತ್ತು ಒಬ್ಬ ವ್ಯಕ್ತಿಯ ಬಗ್ಗೆ ಅವಹೇಳನವಾಗಿ ಮಾತನಾಡಿದರು ಅಂತಾ ವಾಜಪೇಯಿ ಅವರ ಬಗ್ಗೆ ಆಗಲಿ ಇನ್ನೊಬ್ಬರ ಬಗ್ಗೆಯಾಗಲಿ ಹಗುರವಾಗಿ ಮಾತನಾಡಲು ಬರುವುದಿಲ್ಲ. ಬಿಜೆಪಿಯವರು ತಮ್ಮ ಸರ್ಕಾರ ಇದ್ದಾಗ ಸೈದ್ಧಾಂತಿಕವಾಗಿ ರಾಜಕಾರಣ ಮಾಡುವ ಒಬ್ಬ ಅನುಭವಿ ರಾಜಕಾರಣಿ ಹಿರಿಯ ಮುತ್ಸದಿ ಎಲ್‌.ಕೆ.ಅಡ್ವಾಣಿ ಅವರನ್ನು ರಾಷ್ಟ್ರಪತಿ ಮಾಡಬಹುದಿತ್ತು. ಆದರೆ ಮಾಡಲಿಲ್ಲ. ನಮಗೂ ಆದಿನ ನೋವಾಯಿತು. ಅಂತಹ ಆರೋಗ್ಯಕರ ಆಲೋಚನೆಗಳನ್ನು ಬಿಟ್ಟು ಇಲ್ಲಸಲ್ಲದ ಆರೋಪ ಮಾಡಿ ಇನ್ನೊಬ್ಬರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ತಮ್ಮ ಗೌರವಕ್ಕೆ ಧಕ್ಕೆ ತಂದುಕೊಳ್ಳುವುಲ್ಲದೆ ಜನರ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವೀರ ಸಾರ್ವರಕರ್‌ ಒಬ್ಬ ಹುಟ್ಟು ಹೋರಾಟಗಾರ. ಆದರೆ, 1942ರಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡುವಾಗ ಅರ್ಧಕ್ಕೆ ನಿಲ್ಲಿಸಲು ಮುಚ್ಚಳಿಕೆ ಬರೆದುಕೊಟ್ಟಿದ್ದರು ಅದನ್ನು ಪ್ರಶ್ನಿಸಲು ಬರುತ್ತದೆ ಏನು? ಅವರು ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್‌ ಪುರುಷರು ಎಂದರು.

ನಿಮ್ಮ ವಿರುದ್ಧವೂ ಮಾತನಾಡಬಹುದು:

47 ವರ್ಷಗಳ ಕಾಲ ಹೋರಾಟ ಮಾಡಿದ ದೊರೆಸ್ವಾಮಿ ಅವರನ್ನು ಹೋಲಿಕೆ ಮಾಡಿ ಮಾತನಾಡಬಾರದು. ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವದಿಂದ ಕಾಣುವುದನ್ನು ಬಿಟ್ಟು ಬಾಯಿಗೆ ಬಂದಂತೆ ಮಾತನಾಡುವುದು ಶೋಭೆ ತರುವುದಲ್ಲ. ಆದ್ದರಿಂದ ಮುಖ್ಯಮಂತ್ರಿ ಮೊದಲು ಅವರಿಗೆ ಸಚಿವ ಸ್ಥಾನ ಕೊಟ್ಟು ಸುಮ್ಮನೆ ಕೂರಿಸಲಿ, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಯಡಿಯೂರಪ್ಪ, ಗೋವಿಂದ ಕಾರಜೋಳ, ಶೋಭಕ್ಕ, ಕಟೀಲು ಅವರ ವಿರುದ್ಧ ಇಂತಹ ಹೇಳಿಕೆಗಳನ್ನು ಕೊಡಲು ಹಿಂಜರಿಯುವುದಿಲ್ಲ. ಮುಂದೆ ನಿಮ್ಮ ಸರದಿ ಬರುತ್ತದೆ ಎಂದು ಎಚ್ಚರಿಸಿದರು.

ಕೆಪಿಸಿಸಿ ಹಿಂದುಳಿದ ವರ್ಗಗಳ ಕಾರ್ಯದರ್ಶಿ ಮಹೇಶ ಹೊಸಗೌಡರ, ಎಫ್‌.ಬಿ. ಕುರಟ್ಟಿ, ಹನುಮಂತ ಖಾನಗೌಡರ, ಶೈಲಾ ಪಾಟೀಲ, ಅಮಿನಬಿ ನದಾಫ ಇದ್ದರು.
 

Follow Us:
Download App:
  • android
  • ios