ಬಾದಾಮಿ: ಆಮೆಗತಿ ಕಾಮಗಾರಿ, ನಗರದಲ್ಲಿ ಗುಂಡಿಗಳ ನಿರ್ಮಾಣ

ನಗರದ ಬಹುತೇಕ ಕಡೆಗಳಲ್ಲಿ ಗುಂಡಿಗಳು ಬಿದ್ದು ಸಂಚಾರಕ್ಕೆ ಅಡಚಣೆ| ಕೆಲಸ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ| ಇಷ್ಟಾದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ವಿಪರ್ಯಾಸದ ಸಂಗತಿ| ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು|

Badami People Faces Problems For Construction of Road Work

ಶಂಕರ ಕುದರಿಮನಿ 

ಬಾದಾಮಿ(ನ.28): ಮಾಜಿ ಸಿಎಂಗೆ ರಾಜಕೀಯವಾಗಿ ಮರುಜನ್ಮ ನೀಡಿದ ಬಾದಾಮಿ ಕ್ಷೇತ್ರದಲ್ಲಿ ಹಲವು ತಿಂಗಳಿನಿಂದ ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಇದರಿಂದ ನಗರದ ಬಹುತೇಕ ಕಡೆಗಳಲ್ಲಿ ಗುಂಡಿಗಳು ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ.

ಇತ್ತೀಚೆಗೆ ನಗರದ ಪ್ರಮುಖ ಕೆಸಿಪ್‌ ರಸ್ತೆ ಮಧ್ಯದಲ್ಲಿ ಪುಲಕೇಶಿ ವೃತ್ತ ಸ್ಥಾಪನೆ ಮಾಡಬೇಕೆಂದು ಕೆಲವು ತಿಂಗಳ ಹಿಂದೆ ಕಾಮಗಾರಿ ಆರಂಭಿಸಲಾಗಿತ್ತು. ಸಾರ್ವಜನಿಕ ಸಂಚಾರಕ್ಕೆ ಅಗತ್ಯವಾಗಿ ಬೇಕಾಗಿರುವುದು ಮುಖ್ಯವಾಗಿ ರಸ್ತೆ ಸುಗಮ ಸಂಚಾರ ನಗರದ ಪ್ರಮುಖ ರಸ್ತೆ ಪುಲಕೇಶಿ ವೃತ್ತ ಕಳೆದ 3 ತಿಂಗಳಿಂದ ದೊಡ್ಡ ಪ್ರಮಾಣದ ಗುಂಡಿಯನ್ನು ತೆಗೆದು ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಕೆಲಸ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ. ಇಷ್ಟಾದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ವಿಪರ್ಯಾಸದ ಸಂಗತಿ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಾದಾಮಿ, ಬನಶಂಕರಿ ಹಾಗೂ ಸ್ಥಳೀಯ ಮೇಣಬಸದಿ ಹೋಗುವ ಮಾರ್ಗ ಇದೆಯಾಗಿದ್ದು ಬರುವ ಪ್ರವಾಸಿಗರಿಗೆ ಬಹಳಷ್ಟುತೊಂದರೆ ಯಾಗುತ್ತದೆ. ನವೆಂಬರ್‌, ಡಿಸೆಂಬರ್‌ ಹಾಗೂ ಜನವರಿ ತಿಂಗಳಲ್ಲಿ ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಂದ ಶಾಲಾ ಕಾಲೇಜ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಈ ವೃತ್ತದ ಮುಖಾಂತರ ಅವರು ಸಾಗಿ ಹೋಗಬೇಕು. ಹೀಗಾಗಿ ಸಂಚಾರಕ್ಕೆ ಸಾಕಷ್ಟು ಸಂಚಕಾರ ಬಂದೊದಗಿದೆ.

ಇಷ್ಟಾದರೂ ಯಾವುದೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಣ್ಣೆತ್ತಿಯೂ ನೋಡುತ್ತಿಲ್ಲ. ನಿತ್ಯ ಸಾವಿರಾರೂ ಜನರು ಶಾಲಾ ಕಾಲೇಜ ವಿದ್ಯಾರ್ಥಿಗಳು ಹಾಗೂ ನೂರಾರು ವಾಹನಗಳು ಮಾರುಕಟ್ಟೆಗೆ ಬರುತ್ತವೆ. ಇಂತಹ ದೊಡ್ಡ ಪ್ರಮಾಣದ ಗುಂಡಿಗಳು ಯಾವ ಸಂದರ್ಭದಲ್ಲಿ ಅಪಾಯ ನೀಡುತ್ತವೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಅಪಾಯವಾಗುವ ಮುನ್ನ ಎಚ್ಚೆತ್ತುಕೊಂಡು ಆದಷ್ಟು ಕಾಮಗಾರಿಯನ್ನು ಬೇಗ ಮುಗಿಸುವುದರ ಮೂಲಕ ಗುಂಡಿಯನ್ನು ಮುಚ್ಚುವ ಕೆಲಸವಾಗಬೇಕು ಎಂದು ಸಾರ್ವಜನಿಕರ ಧ್ವನಿಯಾಗಿದೆ.

ಇನ್ನು ಎರಡು ತಿಂಗಳಲ್ಲಿ ಈ ಕಾಮಗಾರಿ ಮುಗಿಯದೆ ಹೋದರೆ ಬರುವ ಜನವರಿಯಲ್ಲಿ ಒಂದು ತಿಂಗಳವರೆಗೆ ಜರುಗಲಿರುವ ಬನಶಂಕರಿ ಜಾತ್ರೆ ಆರಂಭವಾಗುತ್ತದೆ. ಆ ಸಂದಂರ್ಭದಲ್ಲಿ ಸಾಕಷ್ಟು ವಾಹನಗಳ ಸಂಚಾರ ಹೆಚ್ಚಾಗುತ್ತದೆ. ಅದನ್ನು ಗಮನದಲ್ಲಿ ಇಟ್ಟುಕೊಂಡು ಅಧಿಕಾರಿಗಳು ಸ್ಥಳೀಯ ಶಾಸಕರು ಮತ್ತು ಸಂಸದರು ಗಮನ ಹರಿಸಿ ಕೆಲಸವನ್ನು ಮುಗಿಸಲು ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕು. ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.

ಕೇಂದ್ರ ಸರ್ಕಾರದ ಹೃದಯ ಯೋಜನೆ ಅನುದಾನದಲ್ಲಿ ಕೆಲಸ ಸಾಗಿದ್ದು, ಕಾಮಗಾರಿ ನಿಧಾನಗತಿಯಿಂದ ಸಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ನಾನು ಈಗಾಗಲೆ ಸಂಬಂಧಪಟ್ಟ ಇಲಾಖೆಗೆ ತಿಳಿಸಿದ್ದೇನೆ. ಆದಷ್ಟು ಬೇಗ ಮುಗಿಸಿ ಸ್ಥಳೀಯವಾಗಿ ತೊಂದರೆಯಾಗುತ್ತಿದೆ ಎಂದು ಆದರೆ ಪುತ್ಥಳಿ ಇನ್ನು ನಿರ್ಮಾಣ ಹಂತದಲ್ಲಿ ಇದೆ. ಅದಕೊಸ್ಕರ ತಡವಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಜ್ಯೋತಿ ಗಿರೀಶ ಅವರು ತಿಳಿಸಿದ್ದಾರೆ.

ನಗರದ ಪ್ರಮಖ ವೃತ್ತವಾಗಿರುವುದರಿಂದ ಕಾಮಗಾರಿ ಆದಷ್ಟು ಬೇಗ ಮುಗಿಯಬೇಕು. ನಿಧಾನವಾಗಿ ಸಾಗುವುದರಿಂದ ಸಾರ್ವಜನಿಕರಿಗೆ ಅಷ್ಟೆ ಅಲ್ಲದೆ ಇತಿಹಾಸ ಪ್ರಸಿದ್ಧ ಪ್ರವಾಸಿ ತಾಣದ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಬಹಳಷ್ಟು ತೊಂದೆರಯಾಗುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗುತ್ತಿಗೆದಾರರಿಗೆ ಆದಷ್ಟು ಬೇಗ ಕಾಮಗಾರಿಯನ್ನು ಮುಗಿಸಲು ಆದೇಶ ನೀಡಬೇಕು ಎಂದು ಬಾದಾಮಿ ಅಭಿವೃದ್ಧಿ ಹೋರಾಟ ಸಮಿತಿ ಕಾರ‍್ಯದರ್ಶಿ ಇಷ್ಠಲಿಂಗ ನೇರೆಗಲ್ಲ ಅವರು ಆಗ್ರಹಿಸಿದ್ದಾರೆ.  
 

Latest Videos
Follow Us:
Download App:
  • android
  • ios