ಹೊಸಕೋಟೆ [ನ.29] :  ತಾಲೂಕಿನ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸ್ಥಳೀಯ ನಾಯಕರಿಂದ ಮಾತ್ರ ಹೆಚ್ಚಿನ ಸಹಕಾರ ದೊರೆತಿದ್ದು, ಈ ಬಾರಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶರತ್‌ ಬಟ್ಟೇಗೌಡ ಅವರಿಗೆ ತಾಲೂಕು ಹಿಂದುಳಿದ ವರ್ಗಗಳ ಒಕ್ಕೂಟ ಬೆಂಬಲ ಸೂಚಿಸಿದೆ ಎಂದು ಒಕ್ಕೂಟದ ಅಧ್ಯಕ್ಷ ಸಿ.ಮುನಿಯಪ್ಪ ತಿಳಿಸಿದರು.

ನಗರದ ವೆಂಕಟಾದ್ರಿ ಸಭಾಂಗಣದಲ್ಲಿ ತಾಲೂಕು ಹಿಂದುಳಿದ ವರ್ಗಗಳ ಒಕ್ಕೂಟದ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಕಳೆದ 60 ವಷಗಳಿಂದ ತಾಲೂಕಿನ ಚನ್ನಬೈರೇಗೌಡ, ಚಿಕ್ಕೇಗೌಡ ತಬಸಪ್ಪ, ಬಚ್ಚೇಗೌಡ ಹೀಗೆ ಕ್ಷೇತ್ರದ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸುವುದರ ಮೂಲಕ ಕ್ಷೇತ್ರದಲ್ಲಿನ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ತಮ್ಮ ಕಾಣಿಕೆಯನ್ನು ನೀಡಿದ್ದಾರೆ ಎಂದರು. 

ಹೊಸಕೋಟೆಯಲ್ಲಿ ರಕ್ತ ರಾಜಕೀಯ! MTB ಬೆಂಬಲಿಗನ ಮೇಲೆ ಹಲ್ಲೆ...

ಬೇರೆ ಕ್ಷೇತ್ರದ ಅಭ್ಯರ್ಥಿಗಳು ಕಳೆದ ಮೂರು ಚುನಾವಣೆಗಳಿಂದ ಜನಪ್ರತಿನಿಧಿ​ಯಾಗಿ ಆಯ್ಕೆಗೊಂಡು ಈವರೆಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ನೂತನ ಯೋಜನೆಗಳನ್ನು ತರುವಲ್ಲಿ ವಿಫಲವಾದ ಕಾರಣ ಈ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿರುವ ಕ್ಷೇತ್ರದ ಅಭ್ಯರ್ಥಿ ಶರತ್‌ ಬಚ್ಚೇಗೌಡ ಅವರಿಗೆ ನಮ್ಮ ಒಕ್ಕೂಟದ ಬೆಂಬಲ ಸೂಚಿಸಲಾಗಿದ್ದು, ಇದರಲ್ಲಿ ಸುಮಾರು 12 ಹಿಂದುಳಿದ ಜಾತಿಗಳ ತಾಲೂಕಿನ ಹಿರಿಯ ಮುಖಂಡರು ಒಮ್ಮತದಿಂದ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ಪುತ್ರನಿಗೆ ತಾಯಿ ಸಾಥ್: ಬಿಜೆಪಿಗೆ ಸೆಡ್ಡು ಹೊಡೆಯಿತಾ ಬಚ್ಚೇಗೌಡ್ರ ಕುಟುಂಬ..?...

ಈ ಸಂದರ್ಭದಲ್ಲಿ ಒಕ್ಕೂಟದ ಪಧಾದಿಕಾರಿಗಳಾದ ಅರುಣ್‌ ಕುಮಾರ್‌, ಎಚ್‌.ಜೆ.ಶ್ರೀನಿವಾಸ್‌, ಆರ್‌. ಸೋಮಸುಂದರ್‌, ವೇಣುಗೋಪಾಲ್‌, ರಾಜ್‌ ಕುಮಾರ್‌ ಹಾಗೂ ಹಲವರು ಸಮುದಾಯದ ಮುಖಂಡರು ಹಾಜರಿದ್ದರು.

ಡಿಸೆಂಬರ್ 5 ರಂದು ಉಪ ಚುನಾವಣೆ ನಡೆಯಲಿದ್ದು, 9 ರಂದು 15 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಲಿದೆ.