ಧಾರವಾಡ (ಮಾ.07):  ಸಾಲ ವಸೂಲಾತಿಗಾಗಿ ದಂಪತಿಯನ್ನು ಅಕ್ರಮ ಬಂಧನದಲ್ಲಿಟ್ಟು, ಬೆದರಿಸಿ ಒಂದು ತಿಂಗಳಿನ ಮಗುವನ್ನೇ ಮಾರಿಸಿದ ಅಮಾನವೀಯ ಘಟನೆ ಧಾರವಾಡದಲ್ಲಿ ನಡೆದಿದೆ.

ಮಗುವನ್ನು ಮಾರಿಸಿದ್ದ ನಾಲ್ವರು ಹಾಗೂ ಮಗು ಖರೀದಿಸಿದ್ದ ದಂಪತಿ ಇದೀಗ ಪೊಲೀಸರ ಅತಿ​ಥಿ​ಯಾ​ಗಿ​ದ್ದಾರೆ. ಮಗು ಮಾರಾಟ ಮಾಡಿ 4 ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಮಗು ಮಕ್ಕಳ ಕಲ್ಯಾಣ ಸಮಿತಿಯ ಆರೈಕೆಯಲ್ಲಿದೆ.

ಮಗು ಮಾರಾಟ ಮಾಡಿದ ಆರೋಪದ ಮೇಲೆ ಧಾರವಾಡದ ನಾಲ್ವರು ಹಾಗೂ ಮಗು ಖರೀದಿಸಿದ ಆರೋಪದ ಮೇಲೆ ಉಡುಪಿ ಮೂಲದ ದಂಪತಿಯನ್ನು ಬಂಧಿಸಲಾಗಿದೆ.

ನಗ್ನ ವಿಡಿಯೋ ತೋರಿಸಿ ಉದ್ಯಮಿಗೆ ಬ್ಲ್ಯಾಕ್​ಮೇಲ್: ಮಹಿಳೆ ಅಂದರ್ ..

ಧಾರವಾಡದ ದಂಪತಿ .50 ಸಾವಿರ ಸಾಲ ಮಾಡಿದ್ದರು. ಆದರೆ ಕೊರೋನಾದಿಂದಾಗಿ ಸಾಲ ಪಾವತಿಸಲು ಸಾಧ್ಯವಾಗಿರಲಿಲ್ಲ. .50 ಸಾವಿರ ಸಾಲ ಬಡ್ಡಿ ಸೇರಿ .1.50 ಲಕ್ಷವಾಗಿದೆ. ದಂಪತಿಯನ್ನು ಕರೆದೊಯ್ದು ಅಕ್ರಮ ಬಂಧನದಲ್ಲಿಟ್ಟಿದ್ದಾರೆ. 1 ತಿಂಗಳ 10 ದಿನದ ಗಂಡು ಮಗುವನ್ನೇ ಮಾರಲು ಒತ್ತಾಯಿಸಿದ್ದಾರೆ. ಉಡುಪಿ ಮೂಲದ ಮಕ್ಕಳಿಲ್ಲದ ದಂಪತಿಯನ್ನು ಸಾಲ ಕೊಟ್ಟವರೇ ಕರೆತಂದು .2.5 ಲಕ್ಷಕ್ಕೆ ಮಗುವನ್ನು ಮಾರಾಟ ಮಾಡಿಸಿದ್ದಾರೆ. ತಮಗೆ ಬರಬೇಕಾದ .1.5 ಲಕ್ಷ ಪಡೆದುಕೊಂಡು ಮಗುವನ್ನು ಅವರಿಗೆ ನೀಡಿದ್ದಾರೆ. ಉಳಿದ 1 ಲಕ್ಷವನ್ನು ದಂಪತಿಯ ಕೈಗಿಟ್ಟಿದ್ದಾರೆ. ತಾಯಿ ನೀಡಿದ ದೂರಿನ ಮೇರೆಗೆ 24 ತಾಸಿನಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.