ಮಧುಗಿರಿ ಕ್ಷೇತ್ರದ ಕೊಡಿಗೇನಹಳ್ಳಿಯಲ್ಲಿ ಘೋರ ದುರಂತ, ಮಗುವಿನ ಮೃತ ದೇಹ ಕಂಡು ಮಮ್ಮಲ ಮರುಗಿದ ಮಾಜಿ ಸಿಎಂ
ಮಧುಗಿರಿ ಕ್ಷೇತ್ರದ ಕೊಡಿಗೇನಹಳ್ಳಿಯಲ್ಲಿ ಘೋರ ದುರಂತವೊಂದು ನಡೆದಿದ್ದು, ಮಗು ಸಂಪ್ ನಲ್ಲಿ ಬಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಮಗುವಿನ ಪಾರ್ಥೀವ ಶರೀರ ನೋಡಿದ ಮಾಜಿ ಸಿಎಂ ಹೆಚ್‌ಡಿಕೆ ಕಣ್ಣೀರಿಟ್ಟರು.
ತುಮಕೂರು (ಡಿ.2): ಮಧುಗಿರಿ ಕ್ಷೇತ್ರದ ಕೊಡಿಗೇನಹಳ್ಳಿಯಲ್ಲಿ ಘೋರ ದುರಂತವೊಂದು ನಡೆದಿದ್ದು, ಮಗು ಸಂಪ್ ನಲ್ಲಿ ಬಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಮಲ್ಲಿಕಾ, ಶೌಖತ್ ದಂಪತಿಗಳ ಪುತ್ರ ನಾಲ್ಕು ವರ್ಷ ಮಗು ಅಬ್ಬಾಸ್ ಸಂಪ್ ನಲ್ಲಿ ಮುಳುಗಿ ಮೃತಪಟ್ಟಿದೆ. ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಇದೆ ಆದರೆ ವೈದ್ಯರಿಲ್ಲ. ಹೀಗಾಗಿ ಪೋಷಕರ ಕಣ್ಣೆದುರೇ, ಕೈಯ್ಯಲ್ಲಿ ಮಗು ಸಾವನ್ನಪ್ಪಿದೆ. ಘಟನೆ ನಡೆದಾಗ ತಂದೆ ತಾಯಿ ಕುಸಿದು ಬಿದ್ದಿದ್ದಾರೆ. ಜೀವ ಬಿಟ್ಟ ಮಗುವನ್ನು ಎತ್ತಿಕೊಂಡು ಓಡಿಬಂದ ಆ ಪೋಷಕರಿಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಎದುರಾದರು. ಕುಮಾರಸ್ವಾಮಿ ಕೊಡಿಗೆನಹಳ್ಳಿಯಲ್ಲಿ ಸಾಗುತ್ತಿದ್ದ ಪಂಚರತ್ನ ಯಾತ್ರೆಯಲ್ಲಿದ್ದರು. ಪೋಷಕರ ಕೈಯ್ಯಲ್ಲಿ ಮಗುವಿನ ಪಾರ್ಥೀವ ಶರೀರ ಕಂಡು ಆಘಾತಕ್ಕೊಳಗಾದ ಮಾಜಿ ಸಿಎಂ ಕುಮಾರಸ್ವಾಮಿ ತಕ್ಷಣವೇ ಮಗುವನ್ನು ಪಂಚರತ್ನ ವಾಹನದ ಮೇಲಕ್ಕೆ ಎತ್ತಿಕೊಂಡು ಮೃತದೇಹ ಕಂಡು ಕಣ್ಣೀರಿಟ್ಟರು.
ಈ ವೇಳೆ ಕೊಡಿಗೇಹಳ್ಳಿ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದ ಪೋಷಕರ ಬಳಿ ಮಾಹಿತಿ ಪಡೆದ ಮಾಜಿ ಸಿಎಂ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಮಗು ಸಾವನ್ನಪ್ಪಿದ್ದು, ಸರಕಾರ ಹಾಗೂ ಆರೋಗ್ಯ ಸಚಿವರ ವಿರುದ್ಧ ಕಿಡಿಕಾರಿದರು. ಸ್ಥಳದಿಂದಲೇ ಆರೋಗ್ಯ ಮತ್ತು ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಹಾಗೂ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ತುಮಕೂರು DHO ಅವರಿಗೆ ಕರೆ ಮಾಡಿದ ಮಾಜಿ ಸಿಎಂ ಆಸ್ಪತ್ರೆಯ ಅವ್ಯವಸ್ಥೆ ಗೆ ತರಾಟೆಗೆ ತೆಗೆದುಕೊಂಡರು.
ಈ ವೇಳೆ ಕ್ರಮ ತೆಗೆದುಕೊಳ್ಳುವುದಾಗಿ DHO ಭರವಸೆ ನೀಡಿದರು. ಕೂಡಲೇ ಕೊಡಿಗೇನಹಳ್ಳಿ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಆಗ್ರಹಿಸಿದ ಕುಮಾರಸ್ವಾಮಿ ಅವರು ಕರ್ತವ್ಯಲೋಪ ಎಸಗಿದ ಸಿಬ್ಬಂದಿ ಅಮಾನತು ಮಾಡಲು ಆಗ್ರಹಿಸಿದರು. ಪ್ರಕರಣ ದಾಖಲು ಮಾಡುವಂತೆ ಪೊಲೀಸರಿಗೆ ಸೂಚನೆ ಕೂಡ ನೀಡಿದರು. ಇದೇ ವೇಳೆ ಆಕ್ರೋಶಗೊಂಡ ಸ್ಥಳೀಯ ಜನರನ್ನು ಮಾಜಿ ಸಿಎಂ ಸಮಾಧಾನಪಡಿಸಿದರು.
Tumakuru: ಶೀಘ್ರ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಎಚ್.ಡಿ.ಕುಮಾರಸ್ವಾಮಿ
ತಕ್ಷಣವೇ ಪೋಸ್ಟ್ ಮಟಮ್ ಮಾಡಿ ಮಾಡಿ ಮೃತ ದೇಹ ನೀಡಲು ಪೊಲೀಸರಿಗೆ ಸೂಚನೆ ನೀಡಿದ ಹೆಚ್ ಡಿ ಕುಮಾರಸ್ವಾಮಿ ಪರಿಹಾರವನ್ನು ನೀಡುವುದಾಗಿ ಹೇಳಿದರು. ಈ ವಾರದಲ್ಲಿ ಈ ರೀತಿಯ ಎರಡನೇ ಘಟನೆ ನಡೆದಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದರು. ಒಂದು ಲಕ್ಷ ಪರಿಹಾರ ನೀಡುವುದಾಗಿ ಸ್ಥಳೀಯ ಶಾಸಕ ವಿರಭದ್ರಯ್ಯ ಕುಟುಂಬಕ್ಕೆ ತಿಳಿಸಿದರು.
ಜೆಡಿಎಸ್ ಸ್ವತಂತ್ರ ಸರ್ಕಾರಕ್ಕೆ ಅವಕಾಶ ಕೊಡಿ: ಎಚ್.ಡಿ.ಕುಮಾರಸ್ವಾಮಿ