ಉಸ್ತುವಾರಿ ಸಚಿವರ ಬದಲಾವಣೆ: ಶ್ರೀರಾಮುಲು ಪ್ರತಿಕ್ರಿಯೆ
* ಕೋವಿಡ್ ಸಮಯದಲ್ಲಿ ಸ್ವಾರ್ಥವಿಲ್ಲದೆ ನಿಸ್ವಾರ್ಥಿಯಾಗಿ ಕೆಲಸ ಮಾಡಬೇಕು
* ಸರ್ಕಾರಕ್ಕೆ ವಿರೋಧ ಪಕ್ಷದವರು ಸಲಹೆ ಕೊಡುವ ಕೆಲಸ ಮಾಡಲಿ
* ಆ್ಯಕ್ಟಿವ್ ಆಗಿ ಕೆಲಸ ಮಾಡುವ ಸಚಿವರಿಗೆ ಹೆಚ್ಚಿನ ಒತ್ತು ನೀಡಿದ ಸಿಎಂ
ಬಾಗಲಕೋಟೆ(ಮೇ.09): ರಾಜಕಾರಣದಲ್ಲಿ ಬದಲಾವಣೆ ಆಗೋದು ಸಹಜವಾದ ಪ್ರಕ್ರಿಯೆಯಾಗಿದೆ. ಮೊನ್ನೆ ಉಸ್ತುವಾರಿ ಮಂತ್ರಿಗಳನ್ನ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಬದಲಾವಣೆ ಮಾಡಿದ್ದಾರೆ. ಕೋವಿಡ್ ನಿಯಂತ್ರಣಕ್ಕಾಗಿ ಉಸ್ತುವಾರಿ ಸಚಿವರ ಬದಲಾವಣೆ ಆಗಿದೆ. ಆ್ಯಕ್ಟಿವ್ ಆಗಿ ಕೆಲಸ ಮಾಡುವ ಸಚಿವರಿಗೆ ಸಿಎಂ ಹೆಚ್ಚಿನ ಒತ್ತು ನೀಡಿ ಬದಲಾವಣೆ ಮಾಡಿದ್ದಾರೆ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಉಸ್ತುವಾರಿ ಸಚಿವರ ಬದಲಾವಣೆ ವಿಚಾರದ ಬಗ್ಗೆ ಇಂದು(ಭಾನುವಾರ) ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಈ ಕೋವಿಡ್ ಸಮಯದಲ್ಲಿ ಸ್ವಾರ್ಥವಿಲ್ಲದೆ ನಿಸ್ವಾರ್ಥಿಯಾಗಿ ಕೆಲಸ ಮಾಡಬೇಕು. ವಿಪಕ್ಷದವರಲ್ಲಿ ನಾನು ಮನವಿ ಮಾಡುತ್ತೇನೆ. ಟೀಕೆ ಮಾಡೋಡನ್ನ ಬಿಡ್ರಿ, ಈ ಸಮಯದಲ್ಲಿ ಸರ್ಕಾರದ ಜೊತೆ ಕೈ ಜೋಡಿಸಿ. ಸರ್ಕಾರಕ್ಕೆ ವಿರೋಧ ಪಕ್ಷದವರು ಸಲಹೆ ಕೊಡುವ ಕೆಲಸ ಮಾಡಲಿ ಎಂದು ತಿಳಿಸಿದ್ದಾರೆ.
ಮತ್ತೆ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ: ವಾರದಲ್ಲಿ ಇದು 2ನೇ ಸಲ
ಸಚಿವ ಉಮೇಶ್ ಕತ್ತಿ ಬೇಜವಾಬ್ದಾರಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಸಚಿವ ಶ್ರೀರಾಮುಲು, ಉಮೇಶ್ ಕತ್ತಿ ಅವರ ಹೇಳಿಕೆಯನ್ನ ನಿನ್ನೆ ನಾನು ನೋಡಿದ್ದೇನೆ. ಎಲ್ಲರ ಜೀವವೂ ಉಳಿಬೇಕಾಗಿದೆ. ಇಂತಹ ಸಂದರ್ಭದಲ್ಲಿ ಅವರ ವೈಯಕ್ತಿಕ ವಾದ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ, ಹೇಳಿಕೆ ಕೊಟ್ಟು ಮುಜುಗರ ಮಾಡಲಿಕ್ಕೆ ಹೋಗಲ್ಲ ಎಂದು ಹೇಳಿದ್ದಾರೆ.