ಮಂಗಳೂರು(ಫೆ.07): ಅನರ್ಹ ಶಾಸಕರು ಬಿಜೆಪಿ ಸೇರ್ಪಡೆಯಾಗಿ ಉಪಚುನಾವಣೆಯಲ್ಲಿ ಗೆದ್ದ ಬಳಿಕ ಅರ್ಹ ಶಾಸಕರಾಗಿದ್ದಾರೆ. ಅವರೀಗ ಸಚಿವರಾಗಿದ್ದು, ಕಾಂಗ್ರೆಸ್‌ ಮನೋಭಾವದಲ್ಲಿ ಇಲ್ಲ. ಸೋಲನುಭವಿಸಿ ಹತಾಶಗೊಂಡ ನಿರುದ್ಯೋಗಿ ಕಾಂಗ್ರೆಸಿಗರು ಅರ್ಹ ಶಾಸಕರ ಕುರಿತು ಮಿಥ್ಯಾರೋಪ ಮಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.

"

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಗೆ ಗುರುವಾರ ಭೇಟಿ ನೀಡಿ ಸನ್ಮಾನ ಸ್ವೀಕರಿಸಿದ ಬಳಿಕ ಅವರು ಸುದ್ದಿಗಾರರಲ್ಲಿ ಮಾತನಾಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸಿಗರು ಅರ್ಹ ಶಾಸಕರನ್ನು ಅನರ್ಹರು ಎಂದು ಹತಾಶೆಯಿಂದ ಹೇಳುತ್ತಿದ್ದಾರೆ. ಉಪ ಚುನಾವಣೆಯಲ್ಲಿ ಸೋತ ಬಳಿಕ ಇವರೆಲ್ಲ ಈಗ ನಿರುದ್ಯೋಗಿಗಳಾಗಿದ್ದಾರೆ. ಈ ರೀತಿ ಮಾತನಾಡುವುದು ಅವರಿಗೆ ಶೋಭೆ ತರುವ ವಿಚಾರವಲ್ಲ. ಉಪಚುನಾವಣೆಯಲ್ಲಿ ಸೋಲು ಅನುಭವಿಸಿದ ಬಳಿಕ ಕಾಂಗ್ರೆಸಿಗರು ಮನಬಂದಂತೆ ಮಾತನಾಡುತ್ತಿದ್ದಾರೆ. ಇದಕ್ಕೆ ಯಾರೂ ಧೃತಿಗೆಡಬೇಕಾಗಿಲ್ಲ ಎಂದು ಶ್ರೀರಾಮುಲು ಹೇಳಿದರು.

ಟೋಲ್‌ ತಪ್ಪಿಸಲು ಹೋಗಿ ವಾಹನ ಅಪಘಾತ

ನನಗೆ ಉಪಮುಖ್ಯಮಂತ್ರಿ ಸ್ಥಾನ ನೀಡದ ಬಗ್ಗೆ ಬೇಸರವಿಲ್ಲ. ಮುಂದೆ ಪಕ್ಷ ಅವಕಾಶ ಬಂದಾಗ ನೀಡಬಹುದು. ಸದ್ಯ ಮೂರು ಮಂದಿ ಉಪಮುಖ್ಯಮಂತ್ರಿಗಳಿದ್ದು, ಇತರರಿಗೆ ಅವಕಾಶ ಇಲ್ಲ ಎಂದು ಪಕ್ಷ ಮುಖಂಡರು ತಿಳಿಸಿದ್ದಾರೆ. ಶಾಸಕ ಉಮೇಶ್‌ ಕತ್ತಿ ಅವರಂತೆ ಬಹಳಷ್ಟುಮಂದಿ ಸಚಿವ ಸ್ಥಾನದ ಆಕಾಂಕ್ಷಿಗಳಿದ್ದಾರೆ. ನನಗೂ ಉಪಮುಖ್ಯಮಂತ್ರಿ ಆಗುವ ಆಸೆ ಇದೆ. ಆದರೆ ಯಾವುದಕ್ಕೂ ಅವಕಾಶಕ್ಕಾಗಿ ಕಾಯಬೇಕು ಎಂದು ಸಚಿವ ಶ್ರೀರಾಮುಲು ಹೇಳಿದರು.

ದ.ಕ. ಜಿಲ್ಲೆಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಬಿಜೆಪಿ ಶಾಸಕರಿದ್ದು, ಹಿರಿಯ ಶಾಸಕರಿದ್ದಾರೆ. ಹಾಗಿದ್ದೂ ಇಲ್ಲಿಗೆ ಈ ಬಾರಿಯೂ ಸಚಿವ ಸ್ಥಾನ ಸಿಕ್ಕಿಲ್ಲ, ಈ ಮೂಲಕ ಜಿಲ್ಲೆಯನ್ನು ಕಡೆಗಣಿಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಶ್ರೀರಾಮುಲು, ಈ ಕುರಿತ ನಿರ್ಧಾರವನ್ನು ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಸಿಎಂ ಯಡಿಯೂರಪ್ಪ ತೆಗೆದುಕೊಳ್ಳುತ್ತಾರೆ ಎಂದರು.

ಮಂಗಳೂರು ಗೋಲಿಬಾರ್: ವಿಡಿಯೋ ಸಾಕ್ಷಿ ನೀಡಲು ಮಾಧ್ಯಮಗಳಿಗೆ ಸೂಚನೆ

ಮಾ.5ರಂದು ನನ್ನ ಪುತ್ರಿಯ ವಿವಾಹ ಇದೆ. ಅದಕ್ಕಾಗಿ ಆಹ್ವಾನ ಪತ್ರಿಕೆ ಹಂಚಿಕೆಗೆ ರಾಜ್ಯಾದ್ಯಂತ ಓಡಾಟ ನಡೆಸುತ್ತಿದ್ದೇನೆ. ಹಾಗಾಗಿ ಸಚಿವ ಸಂಪುಟ ವಿಸ್ತರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ. ಈ ಬಗ್ಗೆ ಪಕ್ಷದ ವರಿಷ್ಠರಿಂದ ಮೊದಲೇ ಅನುಮತಿಯನ್ನು ಪಡೆದಿದ್ದೇನೆ. ಉಡುಪಿಗೆ ತೆರಳಿ, ಅಲ್ಲಿಂದ ಚಿಕ್ಕಮಗಳೂರಿಗೆ ಭೇಟಿ ನೀಡುವುದಾಗಿ ಸಚಿವ ಶ್ರೀರಾಮುಲು ಹೇಳಿದರು. ಶಾಸಕ ಉಮೇಶ್‌ ಕತ್ತಿ ಅವರಂತೆ ಬಹಳಷ್ಟುಮಂದಿ ಸಚಿವ ಸ್ಥಾನದ ಆಕಾಂಕ್ಷಿಗಳಿದ್ದಾರೆ. ನನಗೂ ಉಪಮುಖ್ಯಮಂತ್ರಿ ಆಗುವ ಆಸೆ ಇದೆ. ಆದರೆ ಯಾವುದಕ್ಕೂ ಅವಕಾಶಕ್ಕಾಗಿ ಕಾಯಬೇಕು ಎಂದಿದ್ದಾರೆ.