ಮೆಟ್ರೋದಲ್ಲಿ ಯುವತಿಯರ ವಿಡಿಯೋ, ಫೋಟೋ ತೆಗೆಯುತ್ತಿದ್ದ ವೈದ್ಯ ಅರೆಸ್ಟ್, ಎಚ್ಚರಿಕೆ ಕೊಟ್ಟು ಕಳಿಸಿದ ಪೊಲೀಸ್!
ಬೆಂಗಳೂರು ಮೆಟ್ರೋದಲ್ಲಿ ಯುವತಿಯರ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ತೆಗೆಯುತ್ತಿದ್ದ ವ್ಯಕ್ತಿಯನ್ನು ಸೆಕ್ಯುರಿಟಿ ಗಾರ್ಡ್‌ಗಳು ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. . ಆರೋಪಿ ಆಯುರ್ವೇದಿಕ್ ವೈದ್ಯನಾಗಿದ್ದು, ಎನ್‌ಸಿಆರ್ ದಾಖಲಿಸಿ ಬಿಡುಗಡೆ ಮಾಡಲಾಗಿದೆ.
ಬೆಂಗಳೂರು (ಜ.2): ಬೆಂಗಳೂರು ಮೆಟ್ರೋ ಆವರಣದಲ್ಲಿ ಯುವತಿಯರ ವಿಡಿಯೋ,ಫೋಟೋ ತೆಗೆಯುತ್ತಿದ್ದ ಕಾಮುಕ ಲಾಕ್ ಆಗಿದ್ದಾನೆ. ಕಿಡಿಗೇಡಿಯನ್ನು ಮೆಟ್ರೋ ಸೆಕ್ಯುರಿಟಿ ಗಾರ್ಡ್‌ಗಳು ಬಂಧಿಸಿ, ಜಯನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಮೆಟ್ರೋದಲ್ಲಿ ಪ್ರಯಾಣ ಮಾಡುವ ಮಹಿಳೆಯರ ಖಾಸಗಿ ಅಂಗಾಂಗಗಳ ಫೋಟೋ, ವಿಡಿಯೋ ತೆಗೆಯುತ್ತಿದ್ದ ಎನ್ನುವ ಆರೋಪ ಮಾಡಲಾಗಿದೆ. ಮಹಿಳೆಯರ ಮತ್ತು ಯುವತಿಯರ ಆ್ಯಂಗಲ್, ಆ್ಯಂಗಲ್ ಪೋಟೋ ಕ್ಲಿಕ್ ಮಾಡುತ್ತಿದ್ದ. ಬರೋಬ್ಬರಿ ಐವತ್ತು ಯುವತಿಯರ ವಿಡಿಯೋ, ಫೋಟೋ ತೆಗೆದಿದ್ದ ಎಂದು ಮೆಟ್ರೋ ಸೆಕ್ಯುರಿಟಿ ಗಾರ್ಡ್‌ಗಳು ಹೇಳಿದ್ದಾರೆ. ಆ ಬಳಿಕ ಈತನನ್ನು ಜಯನಗರ ಪೋಲಿಸ್ ಸ್ಟೇಷನ್ ಗೆ ಒಪ್ಪಿಸಿದ್ದಾಋಏ. ಮೆಟ್ರೋ ರೂಲ್ಸ್ ಸೆಕ್ಷನ್- 59 ರ ಅಡಿಯಲ್ಲಿ ಕಾಮುಕನಿಗೆ 5 ಸಾವಿರ ದಂಡವನ್ನೂ ಮೆಟ್ರೋ ಹಾಕಿದೆ.
ಡಿಸೆಂಬರ್- 25 ರಂದು ಬೆಳಿಗ್ಗೆ 9 ಗಂಟೆಗೆ ನಡೆದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೆಜೆಸ್ಟಿಕ್ ನಿಂದ ಜೆಪಿ ನಗರಕ್ಕೆ ಪ್ರಯಾಣ ಮಾಡ್ತಿದ್ದ ಯುವತಿ. ಈ ವೇಳೆ ವ್ಯಕ್ತಿಯೋರ್ವ ಯುವತಿ ಖಾಸಗಿ ಅಂಗಾಂಗಗಳ ವಿಡಿಯೋ, ಫೋಟೋ ತೆಗೆಯುತ್ತಿದ್ದನ್ನು ಗಮನಿಸಿದ ಯುವತಿ ಕಾಮುಕನಿಗೆ ಹೊಡೆದಿದ್ದಾಳೆ. ಈ ವೇಳೆ ನೈಟ್ ಡ್ಯೂಟಿ ಮುಗಿಸಿ ಮನೆಗೆ ಹೋಗ್ತಿದ್ದ ಇಬ್ಬರು ಸೆಕ್ಯುರಿಟಿಗಳು ಇದನ್ನು ಗಮನಿಸಿದ್ದಾರೆ.ಸೆಕ್ಯುರಿಟಿ ಗಾರ್ಡ್‌ಗಳಾದ ಸುಜಿತ್ ಮತ್ತು ಎಸ್.ಜಿ ರಾಮ್ ಬಹದ್ದೂರ್ ತಾಪ ಯುವತಿಯ ಸಹಾಯಕ್ಕೆ ಧಾವಿಸಿ ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ.
ಕೂಡಲೇ ಜಯನಗರ ಮೆಟ್ರೋ ಸ್ಟೇಷನ್ ನಲ್ಲಿ ಯುವಕನನ್ನು ಮೆಟ್ರೋ ರೈಲಿನಿಂದ ಸೆಕ್ಯುರಿಟಿ ಕೆಳಗಿಳಿಸಿದ್ದಾರೆ. ಫೋನ್ ಪರಿಶೀಲನೆ ನಡೆಸಿದ ವೇಳೆ ಕೃತ್ಯ ಬೆಳಕಿಗೆ ಬಂದಿದೆ. ಬಳಿಕ ಕಾಮುಕನನ್ನು ಜಯನಗರ ಪೊಲೀಸರಿಗೆ ಒಪ್ಪಿಸಲಾಗಿದ್ದು. ಜಯನಗರ ಪೊಲೀಸ್ ಠಾಣೆಯಲ್ಲಿ NCR ದಾಖಲು ಮಾಡಲಾಗಿತ್ತು.
Bengaluru: ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ, ಇನ್ಮುಂದೆ ರೈಲಲ್ಲಿ ರಶ್ ಇರೋದೇ ಇಲ್ಲ!
ಆಯುರ್ವೇದಿಕ್ ವೈದ್ಯ: ಮೆಟ್ರೋದಲ್ಲಿ ಯುವತಿಯರ ಪೋಟೋ ತೆಗೆದ ಪ್ರಕರಣದಲ್ಲಿ ಬಂಧಿತನನ್ನು ಮಹೇಶ್ ಎಂದು ಗುರುತಿಸಲಾಗಿದ್ದು, ಆಯುರ್ವೇದಿಕ್ ವೈದ್ಯನಾಗಿ ಕೆಲಸ ಮಾಡುತ್ತಿದ್ದಾನೆ. ಫೋನ್ ಪರಿಶೀಲನೆ ವೇಳೆ ಮೊಬೈಲ್ ನಲ್ಲಿ ಕೇವಲ ಒಂದೇ ಒಂದು ಪೋಟೋ ಮಾತ್ರ ಸಿಕ್ಕಿದೆ. ಪೊಲೀಸರ ತನಿಖೆಯಲ್ಲಿ ಮಹೇಶ್ ಮೊಬೈಲ್ ಪರಿಶೀಲನೆ ವೇಳೆ ವಿಚಾರ ಬೆಳಕಿಗೆ ಬಂದಿದೆ. ಮೂವರು ಮಹಿಳೆಯರಿರುವ ಒಂದು ಫೋಟೋವನ್ನು ಮಹೇಶ್ ಕ್ಲಿಕ್ ಮಾಡಿದ್ದಾರೆ. ಎನ್‌ಸಿಆರ್ ದಾಖಲಿಸಿದ ಪೊಲೀಸರು ಬಳಿಕ ಕ್ಷಮಾಪತ್ರ ಬರೆಸಿ ಮಹೇಶ್‌ನನ್ನು ಬಿಟ್ಟು ಕಳಿಸಿದ್ದಾರೆ.
ನಮ್ಮ ಮೆಟ್ರೋ ಫೇಸ್-3: ಬೆಂಗಳೂರಿನಲ್ಲಿ 11 ಸಾವಿರಕ್ಕೂ ಅಧಿಕ ಮರದ ಬುಡಕ್ಕೆ ಕೊಡಲಿ!