Vijayanagara: 50 ವಿದ್ಯಾರ್ಥಿಗಳಿದ್ದ ಪ್ರವಾಸದ ಬಸ್‌ನ ಆಕ್ಸಲ್‌ ಕಟ್: ತಪ್ಪಿದ ಭಾರಿ ಅನಾಹುತ

ತೆಕ್ಕಲಕೋಟೆಯ 50 ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ ಖಾಸಗಿ ಬಸ್‌ನ ಆಕ್ಸಲ್‌ ತುಂಡಾಗಿರುವ ಘಟನೆ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಬಳಿ ನಡೆದಿದೆ. 

Axle cut of a tour bus carrying 50 students Major disaster missed sat

ವಿಜಯನಗರ (ಡಿ.17): ಡಿಸೆಂಬರ್‌ ತಿಂಗಳಿಂದ ಫೆಬ್ರವರಿ ತಿಂಗಳು ಚಳಿಗಾಲ ಆಗಿರುವುದರಿಂದ ಪ್ರವಾಸ ಮಾಡಲಿಕ್ಕೆ ಹೇಳಿ ಮಾಡಿಸಿದ ಅವಧಿಯಾಗಿರುತ್ತದೆ. ಹೀಗೆ, ಪ್ರವಾಸಕ್ಕೆ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸು ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಬಳಿ ಆಕ್ಸಲ್‌ ತುಂಡಾಗಿ ಅಪಘಾತವಾಗಿರುವ ಘಟನೆ ನಡೆದಿದೆ. ಚಾಲಕನ ಸಮಯ ಪ್ರಜ್ಞೆಯಿಂದಾಗಿ ದೊಡ್ಡ ಪ್ರಮಾಣದ ಅಪಘಾತ ತಪ್ಪಿದೆ.

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟ ಶಾಲಾ ಮಕ್ಕಳನ್ನು ಶಿಕ್ಷಕರು ಖಾಸಗಿ ಬಸ್‌ನಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಬಸ್‌ನಲ್ಲಿ ೫೦ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರವಾಸಕ್ಕೆ ಹೋಗುತ್ತಿದ್ದರು. ಆದರೆ, ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಬಳಿಯ ರಸ್ತೆಯಲ್ಲಿ ಉಂಟಾಗಿದ್ದ ರಸ್ತೆಗುಂಡಿಗೆ ಬಿದ್ದಿರುವ ಖಾಸಗಿ ಬಸ್‌ನ ಆಕ್ಸಲ್‌ ಕಟ್ ಆಗಿದೆ. ಹಿಂಬದಿಯ ಎರಡೂ ಚಕ್ರಗಳು ಕಳಚಿಕೊಂಡು ಹೋಗಿವೆ. ಆದರೆ, ರಸ್ತೆ ಗುಂಡಿಯ ಬಳಿ ವಾಃನವನ್ನು ನಿಧಾನವಾಗಿ ಚಾಲನೆ ಮಾಡುತ್ತಿದ್ದ ಚಾಲಕನ ಸಮಯ ಪ್ರಜ್ಞೆಯಿಂದ ವಾಹನದ ಆಕ್ಸಲ್‌ ತುಂಡಾದ ಬೆನ್ನಲ್ಲೇ ನಿಲ್ಲಿಸಿದ್ದಾರೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ಅಪಘಾತ ಉಂಟಾಗುವುದನ್ನು ತಪ್ಪಿಸಿದ್ದಾರೆ.

Koppal News: 5 ಸಾವಿರ ಮಕ್ಕಳಿಗೆ ಉಚಿತ ಪ್ರವಾಸ ಭಾಗ್ಯ!

ರಸ್ತೆ ಗುಂಡಿ ಮುಚ್ಚದ ಸರ್ಕಾರ: ಇನ್ನು ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ರಸ್ತೆಯಲ್ಲಿ ದೊಡ್ಡ ಪ್ರಮಾಣದ ಗುಂಡಿಗಳು ಇದ್ದರೂ ಇದನ್ನು ಮುಚ್ಚುವಲ್ಲಿ ಸರ್ಕಾರ ವಿಫಲವಾಗಿದೆ. ಹಂಪಿ, ಹೊಸಪೇಟೆ ಸೇರಿ ಹಲವು ಪ್ರವಾಸಿ ಸ್ಥಳಗಳಿಗೆ ಹೋಗಲು ಈ ಮಾರ್ಗವು ಪ್ರಮುಖ ರಸ್ತೆಯಾಗಿದ್ದರೂ ಅಭಿವೃದ್ಧಿ ಆಗುತ್ತಿಲ್ಲ. ಇನ್ನು ಬೈಕ್‌ ವಾರರು ಸೇರಿ ಹಲವು ವಾಹನ ಸವಾರರು ಇಲ್ಲಿ ಬಿದ್ದು ಗಾಯಗೊಂಡಿದ್ದರು. ಆದರೆ, ಇಂದು ಬೆಳಗ್ಗೆ 50 ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ದೊಡ್ಡ ಬಸ್ಸು ರಸ್ತೆಗುಂಡಿಗೆ ಬಿದ್ದು ಇನ್ನೇನು ಮೇಲೆ ಬರಬೇಕು ಎನ್ನುವಷ್ಟರಲ್ಲಿ ಆಕ್ಸಲ್‌ ಕಟ್‌ ಆಗಿದೆ. ಕೂಡಲೇ ಡ್ರೈವರ್‌ ವಾಹನ ನಿಲ್ಲಿಸಿದ್ದರಿಂದ ದೊಡ್ಡ ಪ್ರಮಾಣದ ಅನಾಹುತ ತಪ್ಪಿದೆ. ಎಲ್ಲ ಮಕ್ಕಳು ಮತ್ತು ಶಿಕ್ಷಕರು ಬಸ್‌ನಿಂದ ಇಳಿದು ಬೇರೆ ವಾಹನವನ್ನು ಹತ್ತಿ ಪ್ರವಾಸಕ್ಕೆ ಹೋಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

 

ತುಮಕೂರು ಬಳಿ ಭೀಕರ ಅಪಘಾತ: ಬ್ರಿಡ್ಜ್‌ನಿಂದ ಕೆಳಗೆ ಬಿದ್ದ ಕಾರು; ಸ್ಥಳದಲ್ಲೇ ಮೂವರು ಸಾವು!

ಪ್ರವಾಸಕ್ಕೂ ಮುನ್ನ ಎಚ್ಚರವಿರಲಿ: ಇನ್ನು ಡಿಸೆಂಬರ್‌ ತಿಂಗಳು ಆರಂಭವಾಯಿತೆಂದರೆ ಶಿಕ್ಷಣ ಸಂಸ್ಥೆಗಳಿಂದ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದೊಯ್ಯುವ ಪ್ರಮಾಣ ಹೆಚ್ಚಳವಾಗುತ್ತದೆ. ಹೀಗೆ ಪ್ರವಾಸಕ್ಕೆ ಹೋಗುವ ಮುನ್ನ ನಿಯಂತ್ರಣದಲ್ಲಿ ಇರುವ ವಾಹನಗಳನ್ನು ಬುಕ್‌ ಮಾಡಿಕೊಂಡು ಹೋಗುವುದು ಒಳಿತು. ಕಡಿಮೆ ಹಣಕ್ಕೆ ವಾಹನ ಲಭ್ಯವಾಗುತ್ತದೆ ಎಂದು ಹಳೆಯ ಬಸ್ ಅಥವಾ ವಾಹನಗಳನ್ನು ಬುಕ್‌ ಮಾಡಿದಲ್ಲಿ ಅದರಿಂದ ದೊಡ್ಡ ಅನಾಹುತವೇ ಆಗಬಹುದು. ಇನ್ನು ಘಟ್ಟಗಳ ಪ್ರದೇಶಲ್ಲಿ ಹೋಗುವಾಗ ವಾಹನಗಳ ಚಾಲಕರು ಮತ್ತಯ ಉತ್ತಮ ಕಂಡಿಷನ್‌ನಲ್ಲಿ ಇರುವ ವಾಹನ ಅಗತ್ಯವಾಗಿರುತ್ತದೆ. ಈ ಬಗ್ಗೆ ಶಿಕ್ಷಕರು ಸೇರಿ ಪ್ರವಾಸ ಆಯೋಜನೆ ಮಾಡುವವರು ಗಮನಹರಿಸಬೇಕು.

Latest Videos
Follow Us:
Download App:
  • android
  • ios