ಕೋಲಾರ(ಮಾ.01):  ಮೂತ್ರ ವಿಸರ್ಜನೆ ಮಾಡಿದ್ದರಿಂದ ಮಂಗಳ ಮುಖಿಯರು ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ರಾಷ್ಟ್ರೀಯ ಹೆದ್ದಾರಿಯ ಅರಾಭಿಕೊತ್ತನೂರು ಬಳಿ ಭಾನುವಾರ ಸಂಜೆ ನಡೆದಿದೆ.

ಚಲುವನಹಳ್ಳಿಯ ಗ್ರಾಮದ ಆಟೋ ಚಾಲಕ ಆಟೋ ನಿಲ್ಲಿಸಿ ಹೆದ್ದಾರಿ ಪಕ್ಕದಲ್ಲಿಯೇ ಇರುವ ಮಂಗಳ ಮುಖಿಯರಿದ್ದ ನಿವಾಸದ ಮುಂದೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಇದರಿಂದ ಮಂಗಳ ಮುಖಿಯರು ತಗಾದೆ ತೆಗೆದಿದ್ದಾರೆ. ಈ ವೇಳೆ ಮಂಗಳ ಮುಖಿಯರು ಮತ್ತು ಚಾಲಕನ ನಡುವೆ ಮಾತಿನ ಚಕಮುಕಿ ನಡೆದು ಮಂಗಳ ಮುಖಿಯರೆಲ್ಲರೂ ಸೇರಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ.

ಚಿಕ್ಕಮಗಳೂರು: ಯೂಟ್ಯೂಬ್‌ ನೋಡಿ ದರೋಡೆಗೆ ಸ್ಕೆಚ್‌..! ...

ಪಕ್ಕದ ಗ್ರಾಮದವನೇ ಆದ ಆಟೋ ಚಾಲಕನು ಫೋನ್‌ ಮಾಡಿ ಗ್ರಾಮದವರನ್ನು ಕರೆಸಿಕೊಂಡಿದ್ದಾನೆ. ಗ್ರಾಮದವರು ಮಂಗಳಮುಖಿಯರೊಂದಿಗೆ ಗಲಾಟೆ ಮಾಡುತ್ತಿದ್ದ ಸುದ್ಧಿ ಕೇಳಿ ಪೋಲಿಸರು ಆಗಮಿಸಿ ಎಲ್ಲರನ್ನೂ ಸಮಾಧಾನಪಡಿಸಿ ಕಳಿಸಿದ್ದಾರೆ. ಈ ಸಂಬಂಧ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಯಾವುದೇ ಕೇಸು ದಾಖಲಾಗಿಲ್ಲ ಎಂದು ಸಬ್‌ಇನ್ಸ್‌ಪೆಕ್ಟರ್‌ ಕಿರಣ್‌ ಕುಮಾರ್‌ ತಿಳಿಸಿದರು.