ಕೋರಮಂಗಲ ಅಪಘಾತ ಪ್ರಕರಣ: 'ಗಣೇಶನ ಹಬ್ಬಕ್ಕೆ ಹುಬ್ಳಿಗೆ ಬರ್ತೀನಿ ಎಂದಿದ್ದ'

*   ರೋಹಿತ್‌ನನ್ನ ನೆನೆದು ಕಣ್ಣೀರಾದರು ಚಿಕ್ಕಮ್ಮ 
*   ಚಿಕ್ಕ ವಯಸ್ಸಿನಲ್ಲಿಯೇ ಅಪ್ಪ- ಅಮ್ಮನನ್ನು ಕಳೆದುಕೊಂಡಿದ್ದ ರೋಹಿತ್‌
*   ಉದ್ಯೋಗ ಸಂಪಾದನೆ ಎಂದು ಹೆಚ್ಚಿನ ಕನಸು ಇಟ್ಟುಕೊಂಡಿದ್ದ ರೋಹಿತ್‌ 

Aunt Share Her Memories With Dead Rohit grg

ಹುಬ್ಬಳ್ಳಿ(ಸೆ.01):  ವಾರದ ಹಿಂದಷ್ಟೇ ವಿಡಿಯೋ ಕಾಲ್‌ ಮಾಡಿದ್ದ ರೋಹಿತ್‌ ಗಣೇಶ ಚತುರ್ಥಿಗೆ ಬರ್ತಿನಿ ಎಂದಿದ್ದ. ಆದರೆ, ಇಷ್ಟರಲ್ಲೆ ಹೀಗಾಗಿದೆ.

ಬೆಂಗಳೂರಿನ ಕೋರಮಂಗಲದಲ್ಲಿ ಸೋಮವಾರ ತಡರಾತ್ರಿ ನಡೆದ ಕಾರು ಅಪಘಾತದಲ್ಲಿ ಏಳು ಜನರು ಮೃತಪಟ್ಟಿದ್ದು, ಅವರಲ್ಲಿ ಇಲ್ಲಿನ ರೋಹಿತ್‌ ಕೂಡ ಒಬ್ಬರು. ಚಿಕ್ಕಮ್ಮ ಹೀಗೆ ಕಣ್ಣೀರಾದರು.

ಕೋರಮಂಗಲದಲ್ಲಿ ಭೀಕರ ಅಪಘಾತ: ಹೊಸೂರು ಶಾಸಕರ ಮಗ, ಸೊಸೆ ಸೇರಿ 7 ಸಾವು!

ಅಪ್ಪ- ಅಮ್ಮನನ್ನು ಚಿಕ್ಕ ವಯಸ್ಸಿನಲ್ಲಿಯೇ ಕಳೆದುಕೊಂಡಿದ್ದ ರೋಹಿತ್‌, ಹುಬ್ಬಳ್ಳಿಯ ನೇಕಾರ ನಗರದ ಛಬ್ಬಿ ಪ್ಲಾಟ್‌ನಲ್ಲಿರುವ ಚಿಕ್ಕಪ್ಪನ ಕುಟುಂಬದ ಜೊತೆ ಬೆಳೆದಿದ್ದರು. ಪಿಯುಸಿ ಶಿಕ್ಷಣ ಪೂರ್ಣಗೊಳಿಸಿದ್ದ ಅವರು, ವರ್ಷದ ಹಿಂದಷ್ಟೇ ಬೆಂಗಳೂರಿಗೆ ಹೋಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ರೋಹಿತ್‌ಗೆ ಅಪ್ಪ- ಅಮ್ಮ ಇರಲಿಲ್ಲ ಅವನನ್ನು ನಾವೇ ಬೆಳೆಸಿದ್ದೆವು. ಅವನ ಕಿರಿಯ ಸಹೋದರ ನಾಲ್ಕು ವರ್ಷಗಳ ಹಿಂದೆ ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದ. ಅಣ್ಣ ಟೈಲರಿಂಗ್‌ ವೃತ್ತಿ ಮಾಡುತ್ತಿದ್ದಾನೆ. ವಾರದ ಹಿಂದಷ್ಟೇ ವಿಡಿಯೊ ಕಾಲ್‌ ಮಾಡಿ ನಮ್ಮೊಂದಿಗೆ ಮಾತನಾಡಿದ್ದ ರೋಹಿತ್‌, ಗಣೇಶ ಹಬ್ಬಕ್ಕೆ ಬರುತ್ತೇನೆ ಎಂದಿದ್ದ ಎಂದು ಚಿಕ್ಕಮ್ಮ ದಿವ್ಯಾ ಲದ್ವಾ ಕಣ್ಣೀರಾದರು. ಉದ್ಯೋಗ ಸಂಪಾದನೆ ಎಂದು ಹೆಚ್ಚಿನ ಕನಸು ಇಟ್ಟುಕೊಂಡಿದ್ದ ಎಂದವರು ಹೇಳಿದರು.
 

Latest Videos
Follow Us:
Download App:
  • android
  • ios