'ನಾವು ರಿಯಾಕ್ಷನ್ ಮಾಡದೇ ಸುಮ್ಮನಿರಲ್ಲ': ಪಬ್ ಪಾರ್ಟಿ ತಡೆ ಸಮರ್ಥಿಸಿದ ಭಜರಂಗದಳ!
ಮಂಗಳೂರಿನಲ್ಲಿ ಇಂಥ ಘಟನೆ ನಡೆದಾಗ ನಾವು ರಿಯಾಕ್ಷನ್ ಮಾಡದೇ ಸುಮ್ಮನಿರಲ್ಲ ಎಂದು ಪಬ್ ದಾಳಿ ಕುರಿತಂತೆ ಭಜರಂಗದಳ ಜಿಲ್ಲಾ ಸಂಚಾಲಕ್ ಪುನೀತ್ ಅತ್ತಾವರ ಎಚ್ಚರಿಕೆ ನೀಡಿದ್ದಾರೆ.
ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಭಜರಂಗದಳ ಜಿಲ್ಲಾ ಸಂಚಾಲಕ್ ಪುನೀತ್ ಅತ್ತಾವರ ಹೇಳಿಕೆ ನೀಡಿದ್ದಾರೆ.
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು (ಜು.26) : ಮಂಗಳೂರಿನ ಪಬ್ ಪಾರ್ಟಿಗೆ ತಡೆಯೊಡ್ಡಿದ್ದ ಘಟನೆಯನ್ನು ಭಜರಂಗದಳ ಸಂಘಟನೆ ಸಮರ್ಥಿಸಿಕೊಂಡಿದ್ದು, ಇಂಥಹ ಘಟನೆ ನಡೆದಾಗ ನಾವು ರಿಯಾಕ್ಷನ್ ಮಾಡದೇ ಸುಮ್ಮನಿರಲ್ಲ ಎಂದು ಭಜರಂಗದಳ ಜಿಲ್ಲಾ ಸಂಚಾಲಕ್ ಪುನೀತ್ ಅತ್ತಾವರ ಎಚ್ಚರಿಕೆ ನೀಡಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಭಜರಂಗದಳ ಜಿಲ್ಲಾ ಸಂಚಾಲಕ್ ಪುನೀತ್ ಅತ್ತಾವರ ಹೇಳಿಕೆ ನೀಡಿದ್ದಾರೆ.
ಅನ್ಯಾಯ ನಡೆದಾಗ ಸುಮ್ಮನೆ ಕೂರಲು ಭಜರಂಗದಳ(Bajarangadala)ದಿಂದ ಸಾಧ್ಯವಿಲ್ಲ. ಇವತ್ತು ಇಂಥಹ ಘಟನೆ ಕಾರಣದಿಂದ ಮಂಗಳೂರಿ(Mangaluru)ಗೆ ಕೆಟ್ಟ ಹೆಸರು ತರಲು ನಾವು ಬಿಡಲ್ಲ. ಭಜರಂಗದಳ ಯಾವತ್ತೂ ಇಂಥ ಚಟುವಟಿಕೆಗಳನ್ನು ಸಹಿಸಲ್ಲ. ಇಂಥಹ ಘಟನೆ ನಡೆದಾಗ ನಾವು ರಿಯಾಕ್ಷನ್(Reaction) ಮಾಡದೇ ಸುಮ್ಮನಿರಲ್ಲ. ಅಲ್ಲಿ ಫೇರ್ ವೆಲ್ ಪಾರ್ಟಿ ನಡೀತಾ ಇತ್ತು, ನಾವು ಪಬ್ ಒಳಗೆ ಹೋಗಿಲ್ಲ. ಅಪ್ರಾಪ್ತ ವಯಸ್ಸಿನ ಮಕ್ಕಳು ಇದ್ದರು, ಇದನ್ನ ತನಿಖೆ ಮಾಡಬೇಕು. ಪೊಲೀಸ್ ಇಲಾಖೆಯ ಡ್ರಗ್ಸ್ ಮುಕ್ತ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಪಬ್ ಗಳನ್ನ ಬಂದ್ ಮಾಡಲು ಮತ್ತು ಸಮಯಕ್ಕೆ ನಿಯಮ ಇದೆ. ಈ ನಿಯಮ ಮೀರಿ ಪಾರ್ಟಿ ಮಾಡಿದ್ರೆ ಅದನ್ನ ನಿಲ್ಲಿಸಲು ಭಜರಂಗದಳ ತಯಾರಿದೆ. ನಾವು ಪಬ್ ಮೇಲೆ ಯಾವುದೇ ರೀತಿಯ ದಾಳಿ ನಡೆಸಿಲ್ಲ. ದಾಳಿ ನಡೆದಿದ್ರೆ ಹಲ್ಲೆ, ದಾಂಧಲೆ ಹಾಗೂ ಅನಾಹುತ ಆಗ್ತಾ ಇತ್ತು. ನಮಗೆ ಬಂದ ಮಾಹಿತಿ ಪ್ರಕಾರ, ಮೊನ್ನೆಯ ಕಾಲೇಜು ವಿಡಿಯೋ ವೈರಲ್ ಆದ ವಿದ್ಯಾರ್ಥಿಗಳೇ ಇದ್ದರು ಅಂತ ಇತ್ತು. ಅಪ್ರಾಪ್ತರು ಇದ್ದ ಕಾರಣ ನಮ್ಮ ಸಂಘಟನೆ ಕಾರ್ಯಕರ್ತರು ಪಬ್‌ನವರ ಜೊತೆ ಮಾತನಾಡಿ ನಿಲ್ಲಿಸಿದ್ದಾರೆ. ಪೊಲೀಸ್ ಇಲಾಖೆಗೆ ಮಾಹಿತಿ ಕೊಟ್ಟೇ ಮಕ್ಕಳನ್ನ ಮನೆಗೆ ಕಳುಹಿಸಲಾಗಿದೆ. ನಾವು ಹೋಗುವ ಮೊದಲೇ ಪೊಲೀಸ್ ಇಲಾಖೆಗೆ ಮಾಹಿತಿ ಕೊಟ್ಟಿದ್ದೇವೆ. ನಾವು ಪೊಲೀಸರು ಬರುವ ಮೊದಲು ನಾವು ಆಕ್ಷನ್ ಮಾಡಿಲ್ಲ ಎಂದರು
Mangalore Pub Attack Case : ಯಾವುದೇ ದಾಳಿ ನಡೆದಿಲ್ಲ; ಕಮಿಷನರ್ ಶಶಿಕುಮಾರ್ ಸ್ಪಷ್ಟನೆ
ಪಬ್ ದಾಳಿ ಮಾಡುವ ಮನಸ್ಸು ಅವರಿಗೆ ಇರಲಿಲ್ಲ, ಅದನ್ನ ಸಂಘಟನೆ ಮಾಡಿಲ್ಲ: ಶಾಸಕ ವೇದವ್ಯಾಸ ಕಾಮತ್
ಪಬ್(Pub) ನಲ್ಲಿ ಕಾಲೇಜು ವಿದ್ಯಾರ್ಥಿಗಳ ಪಾರ್ಟಿಗೆ ಬಜರಂಗದಳ ತಡೆ ವಿಚಾರ ಸಂಬಂಧ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್(MLA Veda vyasa Kamath) ಹೇಳಿಕೆ ನೀಡಿದ್ದು, ಪಬ್ ದಾಳಿ ಮಾಡುವ ಮನಸ್ಸು ಅವರಿಗೆ ಇರಲಿಲ್ಲ, ಅದನ್ನ ಸಂಘಟನೆ ಮಾಡಿಲ್ಲ ಎಂದಿದ್ದಾರೆ. ಪೊಲೀಸ್ ಇಲಾಖೆ(Police Station) ಮೂಲಕ ಅಪ್ರಾಪ್ತ ವಯಸ್ಸಿನವರಿಗೆ ಬುದ್ದಿ ಹೇಳಿದ್ದಾರೆ. ಸಂಘಟನೆಯವರು ಈ ಮೂಲಕ ಪೊಲೀಸ್ ಇಲಾಖೆ ಜೊತೆ ಹೋಗಿದ್ದಾರೆ. ವಿದ್ಯಾರ್ಥಿಗಳು ಯಾವತ್ತೂ ಮನೆಯವರ ಒಪ್ಪಿಗೆ ಜೊತೆ ಈ ಕೆಲಸ ಮಾಡಲ್ಲ. ಮನೆಯವರು ಸಂಘಟನೆಯವರ ಗಮನಕ್ಕೆ ಇಂಥದ್ದನ್ನ ತಂದಿದ್ದಾರೆ. ಹೀಗಾಗಿ ದುಷ್ಟಟಕ್ಕೆ ಬಲಿಯಾದಾಗ ವಿಎಚ್ ಪಿ ಹೋಗಿ ಮನವಿ ಮಾಡಬೇಕೆಂದಿಲ್ಲ. ಆದರೆ ಜವಾಬ್ದಾರಿಯಿಂದ ವಿಎಚ್ ಪಿಯವರು ಪೊಲೀಸರ ಮೂಲಕ ಹೋಗಿದ್ದಾರೆ. ಅವರಿಗೆ ಘಟನೆ ಮಾಡಬೇಕಿದ್ದಾರೆ ಪೊಲೀಸರಿಗೆ ಮುಂಚಿತವಾಗಿ ತಿಳಿಸ್ತಾ ಇರಲಿಲ್ಲ. ಲವ್ ಜಿಹಾದ್, ಡ್ರಗ್ ಚಟಕ್ಕೆ ಬಲಿಯಾಗೋ ವಾತಾವರಣ ಸೃಷ್ಟಿಯಾಗಬಾರದು. ವಿದ್ಯಾರ್ಥಿಗಳು ಈ ಬಗ್ಗೆ ಗಮನ ಹರಿಸಬೇಕು, ಮನೆಯವರ ಕಷ್ಟ ಅರಿಯಬೇಕು. ಯಾವುದೇ ಕಾನೂನು ಬಾಹಿರ ಚಟುವಟಿಕೆ ಆದಾಗ ಕಮಿಷನರ್ ಗೆ ತಿಳಿಸ್ತೇನೆ. ಅಪ್ರಾಪ್ತ ವಿದ್ಯಾರ್ಥಿಗಳ ಕಾನೂನು ಬಾಹಿರ ಚಟುವಟಿಕೆ ವಿರುದ್ದ ಪೊಲೀಸರ ಗಮನಕ್ಕೆ ತರ್ತೇನೆ ಎಂದಿದ್ದಾರೆ.
ಇಸ್ಲಾಮಿಕ್ ಮೂಲಭೂತವಾದಿಗಳ ಬೆದರಿಕೆ ಇರುವವರಿಗೆ ಬಜರಂಗದಳದ ಸಹಾಯವಾಣಿ!
ಇದಕ್ಕೂ ಮೊದಲು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಭೇಟಿಯಾದ ವಿಎಚ್ ಪಿ ಮುಖಂಡರು, ಘಟನೆ ಸಂಬಂಧ ಶಾಸಕ ವೇದವ್ಯಾಸ ಕಾಮತ್ ಗೆ ವಿವರಣೆ ನೀಡಿದ್ದಾರೆ. ಕರ್ನಾಟಕ ದಕ್ಷಿಣ ಪ್ರಾಂತ ವಿಶ್ವಹಿಂದೂ ಪರಿಷತ್ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಸೇರಿ ಹಿಂದೂ ಮುಖಂಡರು ಭಾಗಿಯಾಗಿದ್ದರು. ಅವಧಿ ಮೀರಿ ಕಾರ್ಯಾಚರಿಸುತ್ತಿರುವ ಪಬ್ ಗಳ ಮೇಲೆ ಕ್ರಮಕ್ಕೆ ಆಗ್ರಹಿಸಿದ ಹಿಂದೂ ಮುಖಂಡರು, ಡ್ರಗ್ ಧಂದೆ ಮತ್ತು ಕಾಲೇಜು ವಿದ್ಯಾರ್ಥಿಗಳ ಮೇಲೆ ಕಣ್ಣಿಡಲು ಮನವಿ ಮಾಡಿದ್ದಾರೆ.