Uttara Kannada: ಮುಸ್ಲಿಂ ಕುಟುಂಬದ ಮೇಲೆ ಹಲ್ಲೆ ಪ್ರಕರಣ: ನ್ಯಾಯಕ್ಕಾಗಿ ಮೊರೆಯಿಡುತ್ತಿರುವ ಸಂತ್ರಸ್ತರು!
ಜಿಲ್ಲೆಯ ಕುಮಟಾ ಹೊಳಗದ್ದೆ ಟೋಲ್‌ಗೇಟ್‌ನಲ್ಲಿ ಮಂಗಳೂರಿನ ಮುಸ್ಲಿಂ ಕುಟುಂಬದ ಮೇಲೆ ಹಲ್ಲೆ ಪ್ರಕರಣ ಸಂಬಂಧಿಸಿ ಇದೀಗ ಸಂತ್ರಸ್ತರು ತಮಗೆ ನ್ಯಾಯ ನೀಡಬೇಕಾಗಿ ಮೊರೆಯಿಡುತ್ತಿದ್ದಾರೆ.
ಉತ್ತರ ಕನ್ನಡ (ಫೆ.29): ಜಿಲ್ಲೆಯ ಕುಮಟಾ ಹೊಳಗದ್ದೆ ಟೋಲ್‌ಗೇಟ್‌ನಲ್ಲಿ ಮಂಗಳೂರಿನ ಮುಸ್ಲಿಂ ಕುಟುಂಬದ ಮೇಲೆ ಹಲ್ಲೆ ಪ್ರಕರಣ ಸಂಬಂಧಿಸಿ ಇದೀಗ ಸಂತ್ರಸ್ತರು ತಮಗೆ ನ್ಯಾಯ ನೀಡಬೇಕಾಗಿ ಮೊರೆಯಿಡುತ್ತಿದ್ದಾರೆ. ಹಲ್ಲೆ ನಡೆಸಿದ ಟೋಲ್ ಗೇಟ್ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಂತ್ರಸ್ತ ಕುಟುಂಬಸ್ಥರು, ಸಾಮಾಜಿಕ ಹೋರಾಟಗಾರರು ಹಾಗೂ ಸಂತ್ರಸ್ತರ ಪರ ವಕೀಲರಿಂದ ಆಗ್ರಹ ವ್ಯಕ್ತವಾಗಿದೆ. ಫೆ.16ರಂದು ಕುಮಟಾ ಹೊಳೆಗದ್ದೆ ಟೋಲ್‌ಗೇಟ್ ಮೂಲಕ ಸಾಗುತ್ತಿದ್ದ ಮಂಗಳೂರು ಮೂಲದ ಪ್ರವಾಸಿಗರ ಮೇಲೆ ಹಲ್ಲೆಯಾಗಿತ್ತು.
ಮಂಗಳೂರು ಮೂಲದ ಆಯೇಷಾ, ಅಪ್ರಾಪ್ತೆ ಫಾತಿಮಾ, ಮುಜೀಬ್ ಕೆ., ಮಹಮ್ಮದ್ ರಿಲ್ವಾನ್, ಮಹಮ್ಮದ್ ಆಸಿಫ್ ಕೆ., ಮಹಮ್ಮದ್ ರಿಫಾನ್ ಕೆ., ಮಹಮ್ಮದ್ ಶಾಫಿಲ್ ಯೂಸುಫ್, ನಸೀರ್ ಆಬಿದ್ ಖರೀಮ್, ಮೊಹಿದ್ದೀನ್ ಮುಷ್ತಾಕ್ ಮೇಲೆ ಹಲ್ಲೆಯಾಗಿದ್ದು, ಟೋಲ್ ಸಿಬ್ಬಂದಿ ಸತೀಶ್ ತಿಮ್ಮಪ್ಪ ಪಟಗಾರ್, ಕಿರಣ್ ಜೈವಂತ್ ನಾಯ್ಕ್, ಮಂಜುನಾಥ್ ವಿಠಲ್ ನಾಯ್ಕ್, ನಾಗರಾಜ ಮಹಾದೇವ ನಾಯ್ಕ್ ಮುಂತಾದವರು ತೀವ್ರವಾಗಿ ಹಲ್ಲೆ ನಡೆಸಿದ್ದರು. ಮುಸ್ಲಿಂ ಕುಟುಂಬದ ಮೇಲೆ ಹಲ್ಲೆ ನಡೆಸಿದ್ರೂ ಪೊಲೀಸರು ಈವರೆಗೂ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.
ಅಧಿಕಾರ ಗದ್ದುಗೆ ಹತ್ತಲು ಕಾಂಗ್ರೆಸ್‌ನಿಂದ ಶೋಷಿತರ ಮತಗಳ ಬಳಕೆ: ಸಂಸದ ಮುನಿಸ್ವಾಮಿ
ಮುಸ್ಲಿಂ ಕುಟುಂಬದ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆಯಾದ್ರೂ ಪೊಲೀಸರು ಪ್ರಕರಣ ದಾಖಲಿಸಲು ಮೀನಾಮೇಷ ಎಣಿಸುತ್ತಿದ್ರು. ಪುಟಾಣಿ ಮಗು ಹಾಗೂ ಅಪ್ರಾಪ್ತ ಬಾಲಕಿ ಮೇಲೆಯೂ ದೌರ್ಜನ್ಯ ಎಸಗಲಾಗಿದೆ. ಆದರೆ, ಪೋಕ್ಸೋ ಪ್ರಕರಣ ದಾಖಲಿಸಿ ಅಪ್ರಾಪ್ತ ಬಾಲಕಿಗೆ ಕೌನ್ಸಿಲಿಂಗ್ ನಡೆಸುವ ಬದಲು ವೈದ್ಯಾಧಿಕಾರಿ ಹಾಗೂ ಪೊಲೀಸರು ಆರೋಪಿಗಳನ್ನು ಬಿಟ್ಟು ಬಿಟ್ಟಿದ್ದಾರೆ ಎಂದು ದೂರಲಾಗಿದೆ. ಹೊಳೆಗದ್ದೆ ಟೋಲ್‌ಗೇಟ್ ಸಿಬ್ಬಂದಿ ಮಹಿಳೆಯರು, ಪುರುಷರೆನ್ನದೇ ಕೈಯಲ್ಲಿ, ರಾಡ್‌ನಲ್ಲಿ ಹಲ್ಲೆ ನಡೆಸಿದ್ದಾರೆ. ಅಪ್ರಾಪ್ತ ಬಾಲಕಿಯ ಬಟ್ಟೆ ಎಳೆದು, ಹಲ್ಲೆ ನಡೆಸಿ ಆಕೆಯ ಮೈಯಲ್ಲಿ ಚಿನ್ನದ ಆಭರಣಗಳನ್ನು ಕೂಡಾ ಎಳೆದಾಡಿದ್ದಾರೆ. ಪೋಷಕರ ಎದುರಲ್ಲೇ ಯುವಕರ ಬಟ್ಟೆಗಳನ್ನು ಕಳಚಿ ಯರ್ರಾಬಿರ್ರಿ ಹೊಡೆಯಲಾಗಿದೆ.
ದೇಶದ ಹಿತ, ಜನರ ಸಂಕಷ್ಟಕ್ಕೆ ಕೇಂದ್ರ ಸರ್ಕಾರದ ಸ್ಪಂದನೆ: ರೇಣುಕಾಚಾರ್ಯ
ಇಂದಿಗೂ ಟೋಲ್ ಸಿಬ್ಬಂದಿ ತಮ್ಮ ಕಚೇರಿಯಲ್ಲಿ ಇಂದಿಗೂ ರಾಡ್‌ಗಳನ್ನು ಇರಿಸುತ್ತಿದ್ದಾರೆ. ಆದರೆ, ಪೊಲೀಸರು ಯಾವುದೇ ತನಿಖೆಗಳನ್ನು ಕೈಗೊಳ್ಳುತ್ತಿಲ್ಲ. ಟೋಲ್ ಸಿಬ್ಬಂದಿ ಜತೆ ಹಫ್ತಕ್ಕಾಗಿ ಶಾಮೀಲಾಗಿದ್ದಾರೆ ಎಂಬ ಸಂಶಯವಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಟೋಲ್ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ ಪೊಲೀಸರು, ವೈದ್ಯಾಧಿಕಾರಿಗಳ ವಿರುದ್ಧ ಕ್ರಮ ಕೈಕೊಳ್ಳಬೇಕು. ಈಗಾಗಲೇ ಗೃಹ ಸಚಿವರು, ಬೆಂಗಳೂರಿನಲ್ಲಿರುವ ಪೊಲೀಸ್ ಉನ್ನತಾಧಿಕಾರಿಗಳಿಗೆ ಪತ್ರ ಮುಖೇನ ಮನವಿ ಸಲ್ಲಿಸಲಾಗಿದೆ ಎಂದ ಕುಟುಂಬಸ್ಥರು, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.