ಅಥಣಿ(ನ.22): ಮಾಧ್ಯಮಗಳು ನಮ್ಮನ್ನು ಅನರ್ಹ ಶಾಸಕರು ಎಂದು ಕರೆಯುತ್ತಿವೆ. ಆದರೆ, ನಾವು ಅನರ್ಹರಲ್ಲ ಎಂದು ಅಥಣಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಅವರು ಹೇಳಿದ್ದಾರೆ. 

ಶುಕ್ರವಾರ ನಗರದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಹೇಶ ಕುಮಟಳ್ಳಿ ಅವರು, ಮಾಧ್ಯಮವದರೆಲ್ಲ ಅನರ್ಹರು.ಅನರ್ಹರು ಅಂತಾ ಕೇಳ್ತಾ ಇದೀರಾ ಸಮ್ಮಿಶ್ರ ಸರ್ಕಾರದಲ್ಲಿ ನಾವಾಗಿಯೇ ಹೊರ ಬಂದವರಾಗಿದ್ದೇವೆ. ನಾವು ಸ್ವತಃ ರಾಜೀನಾಮೆ ಕೊಟ್ಟ ಬಳಿಕ ಸ್ಪೀಕರ್ ಅನರ್ಹ ಮಾಡಿದ್ದಾರೆ. ನಮ್ಮ ಸ್ವಂತ  ನಿರ್ಧಾರದಿಂದ ಸಮ್ಮಿಶ್ರ ಸರ್ಕಾರದಿಂದ ಹೊರಬಂದು ರಾಜೀನಾಮೆ ನೀಡಿದ್ದೆವು ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇದೇ ವೇಳೆ ಡಿಸಿಎಂ ಲಕ್ಷ್ಮಣ ಸವದಿಯನ್ನ ಹಾಡಿ ಹೊಗಳಿದ ಅನರ್ಹ ಶಾಸಕ ಕುಮಟಳ್ಳಿ, ಲಕ್ಷ್ಮಣ ಸವದಿ ಒಬ್ಬ ಸಂಘಟನಾ ಚತುರರಾಗಿದ್ದಾರೆ. ಹೀಗಾಗಿ ನಾವು ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿಯೇ ಚುನಾವಣೆ ಎದುರಿಸ್ತೇವೆ, ಎಲ್ಲ ತಂತ್ರಗಾರಿಕೆ ಲಕ್ಷ್ಮಣ ಸವದಿಯವರದ್ದೆ ಇರುತ್ತೆ ಎಂದು ಹೇಳಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.