Asianet Suvarna News Asianet Suvarna News

ಗಂಗಾವತಿ: ಆಕ್ಸಿಜನ್‌ ಸಿಗದೆ ವ್ಯಕ್ತಿ ಸಾವು, ವೈದ್ಯರ ಮೇಲೆ ಹಲ್ಲೆ

* ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ಕುಟುಂಬಸ್ಥರ ಅಕ್ರೋಶ, ಹಲ್ಲೆ
* ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ನಡೆದ ಘಟನೆ
* ವೈದ್ಯರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು
 

Assault on doctor for Patient Dies due to Not Get Oxygen at Gangavati in Koppal grg
Author
Bengaluru, First Published May 16, 2021, 1:28 PM IST

ಗಂಗಾವತಿ(ಮೇ.16):  ತಾಲೂಕಿನ ಆನೆಗೊಂದಿ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೋನಾ ಸೊಂಕಿತ ವ್ಯಕ್ತಿ ಆಕ್ಸಿಜನ್‌ ಸಿಗದೆ ಮೃತಪಟ್ಟಹಿನ್ನೆಲೆಯಲ್ಲಿ ಆಕ್ರೋಶಗೊಂಡ ಆತನ ಕುಂಟಬಸ್ಥರು ಅಲ್ಲಿನ ವೈದ್ಯರ ಮೇಲೆ ಹಲ್ಲೆ ನಡೆಸಿದ ಘಟನೆ ಶನಿವಾರ ಸಂಭವಿಸಿದೆ. ಆನೆಗೊಂದಿಯ ಹನುಮಂತಪ್ಪ ನಾಯಕ (50) ಮೃತಪಟ್ಟ ವ್ಯಕ್ತಿ.

Assault on doctor for Patient Dies due to Not Get Oxygen at Gangavati in Koppal grg

ಇವರಿಗೆ ಕಳೆದ ಮೂರು ದಿನಗಳಿಂದ ಸೋಂಕು ತಗಲಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಗುಣಮುಖರಾಗಿದ್ದರು. ನಂತರ ಉಸಿರಾಟದ ತೊಂದರೆಗೆ ಒಳಗಾಗಿ ತೀವ್ರ ಅಸ್ವಸ್ಥಗೊಂಡಿದ್ದರು. ನಂತರ ಅವರನ್ನು ಆನೆಗೊಂದಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಹೋದಾಗ ಅಲ್ಲಿ ವೈದ್ಯರು ಆಕ್ಸಿಜನ್‌ ಇಲ್ಲ ಗಂಗಾವತಿಗೆ ಕರೆದು ಕೊಂಡು ಹೋಗಿ ಎಂದು ತಿಳಿಸಿದರು. ಆಕ್ಸಿಜನ್‌ ಇದ್ದರೂ ಇಲ್ಲವೆಂದು ಹೇಳುತ್ತಿದ್ದೀರಿ ಎಂದು ಆಸ್ಪತ್ರೆ ಒಳಗೆ ನುಗ್ಗಿ ವೈದ್ಯ ಡಾ. ರವಿಕುಮಾರ ರಾಠೋಡ್‌ ಮೇಲೆ ಹಲ್ಲೆ ನಡೆಸಿ, ಮೈಮೇಲಿನ ಸ್ವೇಟರ್‌ ಹರಿದು ಹಾಕಿ ತಳ್ಳಾಡಿದರು.

"

ಕೊಪ್ಪಳ: 'ಗವಿಮಠ ಶ್ರೀಗಳ ಕಾರ್ಯ ರಾಜ್ಯಕ್ಕೆ ಮಾದರಿ'

ನಂತರ ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಕರೆದು ತರುವಾಗ ಮಾರ್ಗ ಮಧ್ಯೆದಲ್ಲಿ ಸೋಂಕಿತ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾ ಆರೋಗ್ಯ ಕುಟಂಬ ಕಲ್ಯಾಣಾಧಿಕಾರಿ ಲಿಂಗರಾಜ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡಬೇಕು. ಮತ್ತು ಸಾರ್ವಜನಿಕರು ಇಲ್ಲಿನ ಸಿಬ್ಬಂದಿಗೆ ಸಹಕಾರ ನೀಡಬೇಕೆಂದು ಕೋರಿದರು.

Assault on doctor for Patient Dies due to Not Get Oxygen at Gangavati in Koppal grg

ವೈದ್ಯಾಧಿಕಾರಿ ಡಾ. ರವಿಕುಮಾರ ರಾಠೋಡ್‌ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಗಂಗಾವತಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

Follow Us:
Download App:
  • android
  • ios