ಸೀಮೆ ಸುಣ್ಣದಲ್ಲಿ ಅರಳಿದ ರಾಷ್ಟ್ರಪಿತ ಗಾಂಧೀಜಿ

ಚಾಕ್ ಪೀಸಲ್ಲಿ ಕಲಾವಿದರೋರ್ವರು ಮಹಾತ್ಮ ಗಾಂಧೀಜಿ ಅವರನ್ನು ಅರಳಿಸಿದ್ದಾರೆ.ಭದ್ರವಾತಿಯ ಕಲಾವಿದರ ಕೈ ಚಳಕದಿಂದ ಗಾಂಧಿ ಚಾಕ್ ಪೀಸಲ್ಲಿ ಮೂಡಿದ್ದಾರೆ.

Artist Created Mahatma Gandhi in Chalk piece in Bhadravati

ಭದ್ರಾವತಿ [ ಅ.03]: ಇಂಡಿಯಾ ಗಿನ್ನೆಸ್ ಬುಕ್ ರೆಕಾರ್ಡ್ ದಾಖಲೆಯ ಹಳೇನಗರದ ಸೂಕ್ಷ್ಮ ಕೆತ್ತನೆಗಳ ಕಲಾವಿದ ವರುಣ್ ಆಚಾರ್ ಗಾಂಧಿ ಜಯಂತಿ ಅಂಗವಾಗಿ ಸೀಮೆಸುಣ್ಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಕಲಾಕೃತಿ ರಚಿಸಿದ್ದಾರೆ. 

ವರುಣ್ ಆಚಾರ್ ಇತ್ತೀಚೆಗೆ ಬೆಂಕಿಕಡ್ಡಿ ಬಳಸಿ ಅತಿ ಚಿಕ್ಕದಾದ ಲಂಡನ್ ಸೇತುವೆ ನಿರ್ಮಿಸಿ ಇಂಡಿಯಾ ಗಿನ್ನೆಸ್ ಬುಕ್ ರೆಕಾರ್ಡ್‌ಗೆ ಪಾತ್ರರಾಗಿದ್ದು, ರಾಷ್ಟ್ರೀಯ ಹಬ್ಬ, ನಾಡಹಬ್ಬ ಸೇರಿದಂತೆ ಹಬ್ಬ ಹರಿದಿನಗಳು, ಗಣ್ಯ ವ್ಯಕ್ತಿಗಳ ಜನ್ಮದಿನಗಳಂದು ವಿಶೇಷ ಕಲಾಕತಿಗಳನ್ನು ರಚಿಸುವ ಹವ್ಯಾಸ ರೂಢಿಸಿಕೊಂಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪದವೀಧರರಾದ ವರುಣ್ ಖಾಸಗಿ ಸಹಕಾರ ಸಂಘವೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ನೂರಾರು ಸೂಕ್ಷ್ಮ ಕಲಾಕತಿಗಳನ್ನು ರಚಿಸಿ ಗಮನ ಸೆಳೆದಿದ್ದಾರೆ.

Latest Videos
Follow Us:
Download App:
  • android
  • ios