Asianet Suvarna News Asianet Suvarna News

ದಲಿತರ ಮೇಲೆ ಜಾತಿ ನಿಂದನೆ, ಹಲ್ಲೆ ಪ್ರಕರಣ ಆರೋಪಿಗಳನ್ನು ಬಂಧಿಸಿ: ಮಾಜಿ ಸಚಿವ ಎನ್.ಮಹೇಶ್

ತಾಲೂಕಿನ ಕೆಂಚನಹಳ್ಳಿಯಲ್ಲಿ ನಡೆದಿರುವ ಜಾತಿ ನಿಂದನೆ ಮತ್ತು ಹಲ್ಲೆ ಪ್ರಕರಣದ ಪ್ರಮುಖ ಆರೋಪಿಗಳನ್ನು ತಕ್ಷಣ ಬಂಧಿಸಿ ಸಂತ್ರಸ್ತ ಕುಂಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಮಾಜಿ ಸಚಿವ ಎನ್.ಮಹೇಶ್ ಆಗ್ರಹಿಸಿದರು. 

Arrest the accused in the case of caste abuse and assault on Dalits Says Ex Minister N Mahesh gvd
Author
First Published Aug 3, 2024, 7:55 PM IST | Last Updated Aug 5, 2024, 1:29 PM IST

ಪಾಂಡವಪುರ (ಆ.03): ತಾಲೂಕಿನ ಕೆಂಚನಹಳ್ಳಿಯಲ್ಲಿ ನಡೆದಿರುವ ಜಾತಿ ನಿಂದನೆ ಮತ್ತು ಹಲ್ಲೆ ಪ್ರಕರಣದ ಪ್ರಮುಖ ಆರೋಪಿಗಳನ್ನು ತಕ್ಷಣ ಬಂಧಿಸಿ ಸಂತ್ರಸ್ತ ಕುಂಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಮಾಜಿ ಸಚಿವ ಎನ್.ಮಹೇಶ್ ಆಗ್ರಹಿಸಿದರು. ಹಲ್ಲೆಗೊಳಗಾದ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರಿಂದ ಮಾಹಿತಿ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ರಕ್ಷಣೆ ಮಾಡುತ್ತಿರುವ ಶ್ರೀರಂಗಪಟ್ಟಣ ವಿಭಾಗದ ಡಿವೈಎಸ್ಪಿ ಮುರುಳಿ ಅವರನ್ನು ತಕ್ಷಣ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು. ಜಮೀನು ವಿಚಾರವಾಗಿ ಸವರ್ಣಿಯರಾದ ಚೆಲುವೇಗೌಡ, ಯೇಗೇಶ್, ಲೋಕೇಶ್, ಬೆಟ್ಟೇಗೌಡ, ಪ್ರಸನ್ನಕುಮಾರ್, ಚಂದ್ರು ಅದೇ ಗ್ರಾಮದ ಪರಿಶಿಷ್ಟ ಜನಾಂಗದ ಶಂಕರ, ಸಾವಿತ್ರಿ, ತ್ರಿವೇಣಿ, ಧನಲಕ್ಷ್ಮೀ, ಸಣ್ಣಮ್ಮ, ಐಶ್ವರ್ಯ ಎಂಬುವವರ ಮೇಲೆ ಜುಲೈ 27ರಂದು ಮಾರಣಾಂತಿಕ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಕಿಡಿಕಾರಿದರು.

ಕೆಆರ್‌ಎಸ್‌ ಜಲಾಶಯದಲ್ಲಿ ಹೆಚ್ಚಾದ ನೀರು: ಪಕ್ಕದಲ್ಲೇ ಮಳೆ ಕೊರತೆಯಿಂದ ಕೆರೆಗಳು ಖಾಲಿ ಖಾಲಿ!

ಗೃಹಸಚಿವರಿಗೆ ದೂರು: ದೌರ್ಜನ್ಯ ಮತ್ತು ಪರಿಶಿಷ್ಟ ಜಾತಿ ಸಮುದಾಯದವರಿಗೆ ಹಾಕಿರುವ ಬೆದರಿಕೆ ಮತ್ತು ಜಾತಿ ನಿಂದನೆ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ಶ್ರೀರಂಗಪಟ್ಟಣ ಉಪವಿಭಾಗದ ಡಿವೈಎಸ್ಪಿ ಮುರುಳಿ ಅವರನ್ನು ಪ್ರಶ್ನಿಸಿದರೆ ಕಾನೂನು ರೀತ್ಯಾ ಅಪರಾಧ ವಿಚಾರಣೆ ಪೂರ್ಣಗೊಂಡ ಬಳಿಕ ಆರೋಪಿಗಳನ್ನು ಬಂಧಿಸುವುದಾಗಿ ಉದ್ದಟತನದ ಮಾತುಗಳನ್ನಾಡುತ್ತಾರೆ ಎಂದು ಕಿಡಿಕಾರಿದರು.

ನಾನು ಕೂಡ ಸಚಿವನ್ನಾಗಿ ಕೆಲಸ ಮಾಡಿದ್ದೇನೆ. ಕಾನೂನು ನನಗೂ ಗೊತ್ತಿದೆ. 2013ರ ಕಾಯ್ದೆ ಪ್ರಕಾರ ಜಾತಿ ನಿಂದನೆಗೆ ಮಾಡಿದ ಆರೋಪಿಗಳ ಬಂಧನಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಆರೋಪಿ ಕೇವಲ ಜಾತಿ ನಿಂದನೆ ಮಾಡಿಲ್ಲ. ಜತೆಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಇದನ್ನು ಅರಿತು ಪೊಲೀಸರು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಗೃಹಮಂತ್ರಿ ಪರಮೇಶ್ವರ್ ಅವರಿಗೆ ದೂರು ಹೇಳಲಾಗಿದೆ. 

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ದಲಿತರ ಮೇಲೆ ದೌರ್ಜನ್ಯ ಹೆಚ್ಚಳ: ಮಾಜಿ ಶಾಸಕ ಅನ್ನದಾನಿ

ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ತಾಲೂಕಿನಾದ್ಯಂತ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ದಲಿತ ಮುಖಂಡರಾದ ನಲ್ಲಹಳ್ಳಿ ಸುರೇಶ್, ಬೊಮ್ಮರಾಜು, ಟಿ.ಎಸ್.ಛತ್ರ ಜವರಪ್ಪ, ವಡ್ಡರಹಳ್ಳಿ ಕೆಂಪರಾಜು, ಅರಳಕುಪ್ಪೆ ಪ್ರಶಾಂತ್, ಛಲವಾದಿ ಸಂಘಟನೆ ಜಿಲ್ಲಾ ಮುಖಂಡ ಸುರೇಶ್, ಬಿಜೆಪಿ ಎಸ್‌ಸ್ಸಿ ಮೋರ್ಚಾದ ಪರಮಾನಂದ, ಮಾಚಹಳ್ಳಿ ಮಹೇಶ್, ನವೀನ್ ಮೌರ್ಯ ಇತರರು ಇದ್ದರು.

Latest Videos
Follow Us:
Download App:
  • android
  • ios