ನಗರದ ಭಾರತೀಯ ವಾಯುನೆಲೆ ತರಬೇತಿ ಕೇಂದ್ರದಲ್ಲಿ ಸಿಬ್ಬಂದಿಯೊಬ್ಬ ಕುತ್ತಿಗೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಹರಿಯಾಣ ಮೂಲದ ಸಂದೀಪ್‌ಕುಮಾರ್ (29) ಆತ್ಮಹತ್ಯೆ ಮಾಡಕೊಂಡ ಸಿಬ್ಬಂದಿ ಭಾರತೀಯ ವಾಯುನೆಲೆ ತರಬೇತಿ ಕೇಂದ್ರದಲ್ಲಿ ಏರ್‌ಮೆನ್ ಆಗಿ ಸೇವೆ ಸಲ್ಲಿಸುತ್ತಿದ್ದರು
ಬೆಳಗಾವಿ (ಆ.31): ನಗರದ ಭಾರತೀಯ ವಾಯುನೆಲೆ ತರಬೇತಿ ಕೇಂದ್ರದಲ್ಲಿ ಸಿಬ್ಬಂದಿಯೊಬ್ಬ ಕುತ್ತಿಗೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ನಡೆದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹರಿಯಾಣ ಮೂಲದ ಸಂದೀಪ್‌ಕುಮಾರ್ (29) ಆತ್ಮಹತ್ಯೆ ಮಾಡಕೊಂಡ ಸಿಬ್ಬಂದಿ. ಸಾಂಬ್ರಾ ಗ್ರಾಮದಲ್ಲಿರುವ ಭಾರತೀಯ ವಾಯುನೆಲೆ ತರಬೇತಿ ಕೇಂದ್ರದಲ್ಲಿ ಏರ್‌ಮೆನ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಹೆಂಡತಿ ಭಾಷಣ ಕೇಳಲಾರದೆ ಪೊಲೀಸ್ ಚೌಕಿಗೆ ಬೆಂಕಿ ಇಟ್ಟು ಬೇಕಂತಲೇ ಅರೆಸ್ಟ್ ಆದ!
ಕರ್ತವ್ಯದಲ್ಲಿರುವಾಗಲೇ ತನ್ನ ಬಳಿಯಿದ್ದ ರೈಫಲ್‌ದಿಂದ ಕುತ್ತಿಗೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಘಟನಾ ಸ್ಥಳಕ್ಕೆ ಮಾರಿಹಾಳ ಠಾಣೆಯ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
