Asianet Suvarna News Asianet Suvarna News

ಮಾರಾಠಿ ಭಾಷಾ ಪ್ರೇಮ ಮೆರೆದ ಕಾಂಗ್ರೆಸ್‌ ಶಾಸಕಿ : ಚುನಾವಣಾ ಬಹಿಷ್ಕಾರ ಎಚ್ಚರಿಕೆ

ಕಾಂಗ್ರೆಸ್ ಶಾಸಕಿ ಮರಾಠಿ ಪ್ರೇಮ ಮೆರೆದಿದ್ದು ಅಲ್ಲದೇ ಸರ್ಕಾರಕ್ಕೆ ಎಚ್ಚರಿಕೆಯನ್ನ ನೀಡಿದ್ದಾರೆ. ಏನದು ಎಚ್ಚರಿಕೆ..?

Anjali Nimbalkar Warns Govt On Maratha Reservation snr
Author
Bengaluru, First Published Nov 30, 2020, 8:33 AM IST

ಧಾರವಾಡ (ನ.30):  ಮರಾಠ ಸಮುದಾಯಕ್ಕೆ 2ಎ ಮೀಸಲಾತಿ ನೀಡದಿದ್ದರೆ ಮುಂಬರುವ ಬೆಳಗಾವಿ ಲೋಕಸಭೆ, ಮಸ್ಕಿ, ಗ್ರಾಪಂ, ತಾಪಂ ಚುನಾವಣೆಗಳನ್ನು ಮರಾಠರು ಬಹಿಷ್ಕರಿಸಲಿದ್ದಾರೆ ಎಂದು ಕಾಂಗ್ರೆಸ್‌ ಶಾಸಕಿ ಅಂಜಲಿ ನಿಂಬಾಳಕರ್‌ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇಲ್ಲಿಯ ಮರಾಠಾ ಮಂಡಳದಲ್ಲಿ ‘ಮರಾಠಾ ಕ್ರಾಂತಿ ಮೋರ್ಚಾ’ದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮರಾಠಿಯಲ್ಲಿಯೇ ಮಾತನಾಡಿ ಮಾರಾಠಿ ಭಾಷಾ ಪ್ರೇಮ ಮೆರೆದರು. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಶೈವ- ಲಿಂಗಾಯತರಂತೆ ನಾವೂ ಸಮಾಜದ ಮುಖಂಡರಿಂದ ಮುಖ್ಯಮಂತ್ರಿಗೆ ಪತ್ರ ಬರೆಸುತ್ತೇವೆ. ಏಳು ದಿನಗಳ ಒಳಗಾಗಿ ಮೀಸಲಾತಿ ನಿರ್ಣಯ ಮಾಡಬೇಕು.

ಬೆಳಗಾವಿ ಬೈ ಎಲೆಕ್ಷನ್‌ಗೆ ಸಿದ್ಧತೆ: ಸತೀಶ್ ಜಾರಕಿಹೊಳಿ‌ಗೆ ಜೈ ಎಂದ ಬಿಜೆಪಿ ಕಾರ್ಯಕರ್ತರು ...

ಮೀಸಲಾತಿ ನೀಡಿದರೆ ಮಾತ್ರ ಬರುವ ಚುನಾವಣೆಗಳಲ್ಲಿ ಮತದಾನ ಮಾಡುತ್ತೇವೆ. ಇಲ್ಲದಿದ್ದರೆ ಬೆಳಗಾವಿ, ಮಸ್ಕಿ, ಗ್ರಾಪಂ, ಜಿಪಂ ಸೇರಿದಂತೆ ಎಲ್ಲ ಚುನಾವಣೆಯಲ್ಲಿಯೂ ಬಹಿಷ್ಕಾರ ಹಾಕುತ್ತೇವೆ ಎಂದರು.

ಮರಾಠಿ ಪ್ರೇಮ ತೋರಿದ ಅಂಜಲಿ:  ಖಾನಾಪುರ ಶಾಸಕಿ ಅಂಜಲಿ ನಿಂಬಾಳಕರ್‌ ಮರಾಠಾ ಕ್ರಾಂತಿ ಮೋರ್ಚಾ ಕಾರ್ಯಕಾರಿಣಿ ಸಭೆæಯಲ್ಲಿ ಮಾತನಾಡಿರುವ ಅವರು, ಭಾಷಣದುದ್ದಕ್ಕೂ ಮರಾಠಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದರು. ನನ್ನ ಖಾನಾಪುರ ಕ್ಷೇತ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಮರಾಠಿ ಭಾಷಿಕರು ಹೆಚ್ಚಿದ್ದಾರೆ. ಮಾರವಾಡಿ, ಲಿಂಗಾಯತರು, ಬ್ರಾಹ್ಮಣ ಯಾವುದೇ ಜಾತಿ ಇದ್ದರೂ ಮರಾಠಿ ಭಾಷಿಕರು ಹೆಚ್ಚಿದ್ದಾರೆ. ಅಲ್ಲಿ ಕನ್ನಡ ಮಾತನಾಡಿದರೆ ಯಾರಿಗೂ ಅರ್ಥ ಆಗೋದಿಲ್ಲ. ಇಲ್ಲವಾದರೆ ಬೆಳಗಿನ ವರೆಗೂ ರಾಮಾಯಣ ಕೇಳಿ ರಾಮನಿಗೆ ಸೀತೆ ಏನು ಸಂಬಂಧ? ಎಂದು ಕೇಳುತ್ತಾರೆ ಎಂದರು.

Follow Us:
Download App:
  • android
  • ios