ಅಮೃತ್ ಯೋಜನೆ ಕಾಮಗಾರಿ ತಾರ್ಕಿಕ ಅಂತ್ಯವಿಲ್ಲ, ಚಿಕ್ಕಮಗಳೂರು ನಗರಸಭೆ ವಿರುದ್ದ ಜನರ ಆಕ್ರೋಶ

ಮಳೆಗಾಲ ಮುಗಿಯುತ್ತಾ ಬಂದಿದ್ದರೂ ಚಿಕ್ಕಮಗಳೂರು ನಗರಸಭಾ ವ್ಯಾಪ್ತಿಯ ಒಳಚರಂಡಿ ಕಾಮಗಾರಿ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ರಸ್ತೆ ಅಗೆಯುವ ಕೆಲಸ, ನಿಂತಿಲ್ಲ, ಗುಂಡಿಗೊಟರುಗಳಿಂದ ಕೂಡಿದ ರಸ್ತೆಯಲ್ಲಿ ಜನರು ತಿರುಗಾಡಬೇಕಾಗಿದ್ದು, ನಗರಸಭೆ ಮತ್ತು ಜನಪ್ರತಿನಿಧಿಗಳಿಗೆ ಹಿಡಿಶಾಪಹಾಕುವುದು ನಿಂತಿಲ್ಲ.

Amrit Yojana work delay people  outrage against Chikkamagaluru Municipal Council gow

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಅ20): ಮಳೆಗಾಲ ಮುಗಿಯುತ್ತಾ ಬಂದಿದ್ದರೂ ಚಿಕ್ಕಮಗಳೂರು ನಗರಸಭಾ ವ್ಯಾಪ್ತಿಯ ಒಳಚರಂಡಿ ಕಾಮಗಾರಿ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದರ ಜೊತೆಗೆ ಮಹತ್ವಕಾಂಕ್ಷೆಯ ಅಮೃತ್ ಯೋಜನೆ ಕಾಮಗಾರಿ ತಾರ್ಕಿಕ ಅಂತ್ಯಕಾಣುತ್ತಿಲ್ಲ. ಮನೆಗಳಿಗೆ ಸಂಪರ್ಕ ಕಲ್ಪಿಸುವ ಚರಂಡಿ ಕೆಲಸ ಕೆಲವೆಡೆ ಬಾಕಿ ಇದ್ದು, ರಸ್ತೆ ಅಗೆಯುವ ಕೆಲಸ, ನಿಂತಿಲ್ಲ, ಗುಂಡಿಗೊಟರುಗಳಿಂದ ಕೂಡಿದ ರಸ್ತೆಯಲ್ಲಿ ಜನರು ತಿರುಗಾಡಬೇಕಾಗಿದ್ದು, ನಗರಸಭೆ ಮತ್ತು ಜನಪ್ರತಿನಿಧಿಗಳಿಗೆ ಹಿಡಿಶಾಪಹಾಕುವುದು ನಿಂತಿಲ್ಲ. ಒಂದನೇ ಹಂತದ ಒಳಚರಂಡಿ ಕಾಮಗಾರಿ ಪೂರ್ಣಗೊಂಡು 2ನೇ ಹಂತದ ಒಳಚರಂಡಿ ವ್ಯವಸ್ಥೆ ಕಲ್ಪಿಸಲು 2025 ನೇ ಇಸವಿಗೆ ಆಗಬಹುದಾದ ಜನಸಂಖ್ಯೆ 2.26ಲಕ್ಷಕ್ಕೆ ಅನುಗುಣವಾಗಿ 57 ಕೋಟಿ ಅಂದಾಜು ತಯಾರಿಸಿ ಅನುಮೋದನೆ ಪಡೆಯಲಾಗಿತ್ತು. ಪರಿಷ್ಕೃತ ಅಂದಾಜು ಮೊತ್ತ 82 ಕೋಟಿ ರೂ.ಗಳಾಗಿತ್ತು.ಪ್ಯಾಕೇಜ್ 1ರಲ್ಲಿ ಗೌರಿಕಾಲುವೆ, ಉಪ್ಪಳ್ಳಿ, ಮಧುವನಬಡಾವಣೆ, ಆದರ್ಶನಗರ, ಜಯನಗರ, ವಿಜಯನಗರ, ಮೂರುಮನೆಹಳ್ಳಿ,ಕೆಂಪನಹಳ್ಳಿ, ಶಂಕರಪುರ, ಟಿಪ್ಪುನಗರ, ಲಕ್ಷ್ಮೀಶನಗರ, ಗಾಂಧಿನಗರ,ಕಲ ಕೋಟೆ, ಕೆಂಪನಹಳ್ಳಿ ಕೊಳವೆಮಾರ್ಗ ಅಳವಡಿಸಲಾಗಿದೆ.  ಗುತ್ತಿಗೆದಾರರ ಅರ್ಧಕ್ಕೆ ಕಾಮಗಾರಿ ಮುಕ್ತಾಯಗೊಳಿಸಿದ್ದರಿಂದ 66.12 ಲಕ್ಷ ದಂಡವಿಧಿಸಲಾಗಿತ್ತು. ಟೆಂಡರ್ದಾರರನ್ನು ರದ್ದುಗೊಳಿಸಲಾಗಿದೆ. ಪ್ಯಾಕೇಜ್ 1ರಲ್ಲಿ ಕೈಗೊಳ್ಳಬೇಕಾದ ಉಳಿಕೆ ಕಾಮಗಾರಿಗೆ ಪ್ರತ್ಯೇಕವಾಗಿ 3 ಪ್ಯಾಕೇಜ್ಗಳಾಗಿ ವಿಂಗಡಿಸಿದ್ದು, ಪ್ರತ್ಯೇಕ ಗುತ್ತಿಗೆದಾರರಿಗೆ ನೀಡಲಾಗಿದೆ.

ಕಾಮಗಾರಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯಾಪ್ತಿಗೆ ಬರುತ್ತಿದ್ದು, ಇದರ ಸಚಿವರೇ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವುದರಿಂದ ಹೆಚ್ಚಿನ ಅನುಭವ ಇರಲಿದೆ. ಆದರೆ ಏನೇ ಮಾಡಿದರೂ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ 3ನೇ ಹಂತದ ಕಾಮಗಾರಿ ನಡೆಯುತ್ತಿದ್ದು, ಒಳಚರಂಡಿ ಯೋಜನೆಯಡಿ ಗೃಹ ಸಂಪರ್ಕ ಕೈಗೊಳ್ಳುವ ಕಾಮಗಾರಿ ನಡೆಯುತ್ತಿದೆ.

Chikkamagaluru ಧರ್ಮಸ್ಥಳದ ಬಾಗಿಲು ಬಡಿದ ನಗರಸಭೆ ವಿವಾದ

ಒಂದು ಅಂದಾಜಿನ ಪ್ರಕಾರ ಶೇ.60ರಷ್ಟು ಕಾಮಗಾರಿ ಮುಕ್ತಾಯಗೊಂಡಿದ್ದು, ಶೇ.40ರಷ್ಟು ಕಾಮಗಾರಿ ಬಾಕಿ ಇದೆ. ಒಟ್ಟು 16ಸಾವಿರ ಮನೆಗಳಿಗೆ ಸಂಪರ್ಕ ಕಲ್ಪಿಸಬೇಕಾಗಿದ್ದು, ಉಳಿದ 8ಸಾವಿರ ಮನೆಗಳಿಗೆ ಸಂಪರ್ಕ ಕಲ್ಪಿಸುವ ಕೆಲಸ ಬಾಕಿ ಇದೆ. ಕಾಮಗಾರಿಯ ವೆಚ್ಚವನ್ನು 26 ಕೋಟಿಗೆ ವಿಸ್ತರಿಸಲಾಗಿದೆ.ಇದೀಗ 5750 ಸಂಖ್ಯೆಯ ಒಳಚರಂಡಿ ಗೃಹ ಸಂಪರ್ಕದ ರಾಮನಹಳ್ಳಿ, ಬಸವನಹಳ್ಳಿ ಸುತ್ತಮುತ್ತ, ಗೌರಿಕಾಲುವೆ, ಉಪ್ಪಳ್ಳಿ, ಆಶಾಕಿರಣಅಂಧಮಕ್ಕಳ ಶಾಲೆ,ಹೊಸಜೈಲ್ ಆವರಣ, ಆಶ್ರಯ ಬಡಾವಣೆ ಯಲ್ಲಿ ಕಲ್ಪಿಸುವ 100 ಸಂಖ್ಯೆಯ ರಿಸಿವಿಂಗ್ಛೇಂಬರ್ ಕಲ್ಪಿಸುವ ಕಾಮಗಾರಿ ಬಾಕಿ ಇದೆ ಎಂದು ಹೇಳಲಾಗುತ್ತಿದೆ.ಕಳೆದ ವರ್ಷ ಅಧಿಕಾರಿಗಳನ್ನು ಕೇಳಿದರೆ ಏರ್ಪಿಲ್ ಅಂತ್ಯಕ್ಕೆ ಕಾಮಗಾರಿ ಮುಗಿಯುತ್ತದೆ ಎಂದು ಹೇಳಲಾಗಿತ್ತು. ಏಪ್ರಿಲ್ನಲ್ಲಿ ಕೇಳಿದರೆ ಸೆಪ್ಟೆಂಬರ್ ಅಂತ್ಯಕ್ಕೆ ಮುಗಿಯಲಿದೆ ಎಂದು ಹೇಳಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ನಡೆಸಿದ ಸೆಪ್ಟೆಂಬರ್ 28ಕ್ಕೆ ನಡೆದ ಕೆಡಿಪಿ ಸಭೆಯಲ್ಲಿ ಡಿಸೆಂಬರ್ ಅಂತ್ಯಕ್ಕೆ ಮುಗಿಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಅಕ್ರಮ ವಲಸಿಗರ ವಿರುದ್ಧ Chikkamagaluru ನಗರಸಭೆ ಸಮರ, ಮನೆ ನೆಲಸಮ

ನಗರದಲ್ಲಿ ಒಳಚರಂಡಿ ಕಾಮಗಾರಿ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ:
ಒಳಚರಂಡಿ ಕಾಮಗಾರಿ ಮುಕ್ತಾಯವಾಗದ ಹಿನ್ನಲೆಯಲ್ಲಿ ರಸ್ತೆ ಅಗೆಯುವ ತಪ್ಪಂಗಿಲ್ಲದಂತಾಗಿದೆ. ಒಟ್ಟಾರೆಯಾಗಿ ಒಳಚರಂಡಿ ಕಾಮಗಾರಿ ಮುಗಿಯದೆ ರಸ್ತೆ ಡಾಂಬರೀಕರಣವಾಗದೆ ಸುಗಮ ಸಂಚಾರ ಅಸಾಧ್ಯವಾಗಿದೆ. ಮಹತ್ವಾಕಾಂಕ್ಷೆಯ ಯೋಜನೆಗಳಾದ ಒಳಚರಂಡಿ ಮತ್ತು ದಿನದ 24 ಗಂಟೆ ಕುಡಿಯುವ ನೀರು ನೀಡುವ ಅಮೃತ್ ಯೋಜನೆಗಳು ತಾರ್ಕಿಕ ಅಂತ್ಯಕಾಣದಾಗಿವೆ.ಒಳಚರಂಡಿಕಾಮಗಾರಿ ಶೇ.60 ರಷ್ಟು ಪೂರ್ಣಗೊಂಡಿದ್ದು, ಶೇ.40ರಷ್ಟು ಪ್ರಗತಿಯಲ್ಲಿ 16ಸಾವಿರ ಮನೆಗಳಿಗೆ ಒಳಚರಂಡಿ ಸಂಪರ್ಕ ಕಲ್ಪಿಸಬೇಕಾಗಿದ್ದು, 8ಸಾವಿರ ಮನೆಗಳಿಗೆ ಸಂಪರ್ಕ ಕಲ್ಪಿಸುವ ಕೆಲಸ ಬಾಕಿ ಉಳಿದಿದೆ ಎನ್ನುವುದು ನಗರಸಭೆ ಆಯುಕ್ತ ಬಸವರಾಜ್ ಮಾತಾಗಿದೆ.

Latest Videos
Follow Us:
Download App:
  • android
  • ios