ಉಪ್ಪಿನಂಗಡಿ(ಜು.12): ಪುತ್ತೂರು ತಾಲೂಕಿನ ಕೋಡಿಂಬಾಡಿಯಲ್ಲಿ ತಡರಾತ್ರಿ ಗೃಹಿಣಿಯೋರ್ವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ಉಪ್ಪಿನಂಗಡಿ ಆರೋಗ್ಯ ಕವಚ ವಾಹನದಲ್ಲಿ ಮಂಗಳೂರು ಲೇಡಿಗೋಶನ್‌ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನದಲ್ಲಿ ಹಾದಿಯ ಮಧ್ಯೆ ಅಂಬುಲೆನ್ಸ್‌ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಆಂಬುಲೆನ್ಸ್‌ ಶುಶ್ರೂಶಕ ಅವಿನಾಶ ಎಚ್‌. ಎಂ., ಚಾಲಕ ಭೀಮನ ಗೌಡ ಸೇರಿಕೊಂಡು ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಲೇಡಿಗೋಶನ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.

ಕಲಬುರಗಿ: ಕ್ವಾರಂಟೈನ್‌ನಲ್ಲಿದ್ದ ಅಪ್ರಾಪ್ತ ಬಾಲಕಿಗೆ ಹೆರಿಗೆ

ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸೀಲ್‌ಡೌನ್‌ ಆಗಿದ್ದರಿಂದ ಗರ್ಭಿಣಿಯೊಬ್ಬಳಿಗೆ 108 ಆ್ಯಂಬುಲೆನ್ಸ್‌ನಲ್ಲಿಯೇ ಹೆರಿಗೆಯಾದ ಘಟನೆ ವಿಜಯಪುರ ಜಿಲ್ಲೆಯ ನೀಡಗುಂದಿ ತಾಲೂಕಿನಲ್ಲಿ ನಡೆದಿತ್ತು. 

ನಿಡಗುಂದಿ ತಾಲೂಕಿನ ಬೇನಾಳ ಆರ್‌.ಎಸ್‌ ಗ್ರಾಮದ ಸವಿತಾ ರಮೇಶ ತಳವಾರ ಗಂಡು ಮಗುವಿಗೆ ಜನ್ಮ ನೀಡಿದ್ದು, ಇಬ್ಬರೂ ಆರೋಗ್ಯದಿಂದ ಇದ್ದಾರೆ ಎಂದು ವೈದ್ಯರು ತಿಳಿಸಿದ್ದರು.