Asianet Suvarna News Asianet Suvarna News

Chikkodi: ಅಂಬೇಡ್ಕರ್ ಬಂದು ವಕೀಲಿಕೆ ಮಾಡಿದ್ದ ಕೋರ್ಟ್‌ಗೆ ಕಾಯಕಲ್ಪ: ಹೈಕೋರ್ಟ್ ಮಾದರಿ ಅಭಿವೃದ್ಧಿ

ಅಂಬೇಡ್ಕರ್ ವಾದ ಮಂಡಿಸಿದ್ದ ಕೋರ್ಟ್ ಗೆ ಹೊಸ ಕಾಯಕಲ್ಪ.
 32 ಕೋಟಿ ವೆಚ್ಚದಲ್ಲಿ ತಲೆ ಎತ್ತಲಿದೆ ನ್ಯಾಯಾಲಯ.
ಅಂಬೇಡ್ಕರ್ ಬಂದು ವಾದ ಮಂಡಿಸಿದ್ದ ಹಳೆಯ ಕೋರ್ಟ್ ಹೇಗಿದೆ ಗೊತ್ತಾ.

Ambedkar advocated chikkodi Court Development victory in the civil case sat
Author
First Published Jan 22, 2023, 7:41 PM IST

ವರದಿ- ಮುಷ್ತಾಕ್ ಪೀರ್ಜಾದೆ, ಏಷ್ಯಾನೆಟ್‌ ಸುವರ್ಣ ನ್ಯೂಸ್

ಚಿಕ್ಕೋಡಿ (ಜ.22):  ದೇಶಕ್ಕೆ ಇನ್ನೂ ಸ್ವಾತಂತ್ರ ಸಿಕ್ಕಿರಲಿಲ್ಲ.‌ಆಗ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಕರ್ನಾಟಕದ ಒಂದು ಕೋರ್ಟ್ ಗೆ ಬಂದು ವಾದ ಮಂಡಿಸಿದ್ಧರು. ಸಿವಿಲ್ ವ್ಯಾಜ್ಯ ಒಂದನ್ನು ಬಾಬಾಸಾಹೇಬರೇ ಬಂದು ವಾದಿಸಿ ಗೆಲ್ಲಿಸಿಕೊಟ್ಟಿದ್ದರು. ಅಂದು ಅವರು ಬಂದು ವಾದ ಮಾಡಿದ ಆ ಕೋರ್ಟ್ ಗೆ ಇಂದು ಕಾಯಕಲ್ಪ ಸಿಗುತ್ತಿದೆ. ಅಷ್ಟಕ್ಕೂ ಅಂಬೇಡ್ಕರ್ ಅವರು ಸ್ವತಃ ಬಂದು ವಾದ ಮಾಡಿದ್ದು ಎಲ್ಲಿ ಯಾವುದು ಆ ಕೋರ್ಟ್ ಅಂತೀರಾ ಈ ಸ್ಟೋರಿ ನೋಡಿ. 

ನೂತನ ಕೋರ್ಟ್ ಕಟ್ಟಡಕ್ಕೆ ಅಡಿಗಲ್ಲು ಹಾಕುತ್ತಿರುವ ಗಣ್ಯರು, ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಸಹಸ್ರಾರು ನ್ಯಾಯವಾದಿಗಳು.. ಈ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಇಲ್ಲಿನ ಇದೇ ಕೋರ್ಟ್ ಗೆ ಬಾಂಬೇ ಸರ್ಕಾರವಿದ್ದ (ಪ್ರಾಂತ) ಸಮಯದಲ್ಲಿ ಸ್ವತಃ ಬಾಬಾಸಾಹೇಬ್ ಅಂಬೇಡ್ಕರ್ ಅವರು ಬಂದು ಒಂದು ಸಿವಿಲ್ ವ್ಯಾಜ್ಯವನ್ನು ಬಗೆಹರಿದ್ದರು. 1930ರ ಅವಧಿಯಲ್ಲಿ ಅಂಬೇಡ್ಕರ್‌ ಅವರು ತಮ್ಮ35 ಮಧ್ಯದ ವಯಸ್ಸಿನಲ್ಲಿ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಕುಟುಂಬಕ್ಕೆ ಸಂಬಂಧಿಸಿದ ಸಿವಿಲ್ ವ್ಯಾಜ್ಯವನ್ನು ವಾದ ಮಾಡಿದ್ದರು. ಹೀಗೆ, ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರೇ ಬಂದು ವಕೀಲಿಕೆ ಮಾಡಿದ ರಾಜ್ಯದ ಏಕೈಕ ಕೋರ್ಟ್‌ ಇದಾಗಿದೆ. 

Chikkodi: 25 ಸರ್ಕಾರಿ ಶಾಲೆಗಳಿಗೆ ಡಿಜಿಟಲ್‌ ಬೋರ್ಡ್‌ ಕೊಟ್ಟ ಖಾಸಗಿ ಶಾಲೆ ಮಾಲೀಕ: ಮಾದರಿ ಕಾರ್ಯ

ಅಂಬೇಡ್ಕರ್ ಬಂದಿದ್ದ ಕೋರ್ಟ್‌ಗೆ ಕಾಯಕಲ್ಪ: ಈಗ ಅದೇ ಕೋರ್ಟ್ ಗೆ ಕಾಯಕಲ್ಪ ಸಿಗುತ್ತಿದೆ. ಕೋರ್ಟ್ ಕಟ್ಟಡಕ್ಕೆ ಅಡಿಗಲ್ಲು ಹಾಕಿದ ಸಚಿವ ಗೋವಿಂದ ಕಾರಜೋಳ ಹೇಳುವುದು ಹೀಗೆ. ಇನ್ನು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ್ ಜೊಲ್ಲೆ ಸೇರಿದಂತೆ ಕರ್ನಾಟಕ ಹೈ ಕೋರ್ಟ್ ನ ಮುಖ್ಯ ನ್ಯಾಯಾಧೀಶರಾದ ಪ್ರಸನ್ನ ಬಿ ವರಾಳೆ,ಬ ವೀರಭದ್ರಪ್ಪ, ನ್ಯಾಯಮೂರ್ತಿಗಳಾದ ಸಚಿನ್ ಮಗದುಮ್, ಕೆ ಎಸ್ ಹೇಮಲತಾ ಅನೀಲ್ ಕಟ್ಟಿ ಸೇರಿದಂತೆ ವಿವಿಧ ನ್ಯಾಯವಾದಿಗಳು ‌ಈ ಕಾರ್ಯಕ್ಕೆ ಸಾಕ್ಷಿಯಾಗಿದ್ದರು.‌ 

ನೇತ್ರದಾನ ವಾಗ್ದಾನ, ಎನ್‌ಎಸ್‌ಎಸ್ ವಿಭಾಗೀಯ ಅಧಿಕಾರಿ ಪ್ರೊ.ಅಂಬೋರೆ ಶ್ಲಾಘನೆ

ಅಂಬೇಡ್ಕರ್‌ ವಾದಿಸಿರುವ ರಾಜ್ಯದ ಏಕೈಕ ಕೋರ್ಟ್‌: ಕರ್ನಾಟಕದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬಂದು ವಾದಿಸಿದ ಏಕೈಕ  ಕೋರ್ಟ್ ಚಿಕ್ಕೋಡಿಯ ಕೋರ್ಟ್ ಆಗಿದ್ದು ಅವರು ಓಡಾಡಿ ವಾದ ಮಾಡಿದ್ದ ನ್ಯಾಯಾಲಯಕ್ಕೆ ಕಾಯಕಲ್ಪ ಸಿಗುತ್ತಿರುವುದು ಖುಷಿ ತಂದಿದೆ ಅಂತಾರೆ ಚಿಕ್ಕೋಡಿಯ ನ್ಯಾಯವಾದಿಗಳು. ಒಟ್ಟಿನಲ್ಲಿ ಬಹುದಿನಗಳ ಬೇಡಿಕೆಯಾಗಿದ್ದ ಹೊಸ ಕೋರ್ಟ್ ಕಟ್ಟಡ ಕಾಮಗಾರಿಗೆ ಸರ್ಕಾರ ಮಂಜೂರಾತಿ ನೀಡಿದ್ದು ನಿನ್ನೆಯಷ್ಟೆ ಅಡಿಗಲ್ಲೂ ಸಹ ಆಗಿದೆ. ಇನ್ನು ಬರೊಬ್ಬರಿ ೧೮ ತಿಂಗಳ ಅವಧಿಯಲ್ಲಿ ಚಿಕ್ಕೋಡಿಯಲ್ಲಿ ಹೊಸ ಕೋರ್ಟ್ ನಿರ್ಮಾಣವಾಗಲಿದೆ.

Follow Us:
Download App:
  • android
  • ios