Mysuru : ವೈದ್ಯರಿಗೆ ಬೇಡಿಕೆಯ ಜತೆಗೆ ಜವಾಬ್ದಾರಿಯೂ ಹೆಚ್ಚಿದೆ

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ವೈದ್ಯರಿಗೆ ಬೇಡಿಕೆ ಹೆಚ್ಚಾಗಿದ್ದು, ನಿಮ್ಮ ಮೇಲಿನ ಜವಾಬ್ದಾರಿಯು ಹೆಚ್ಚಿದೆ ಎಂದು ಆಯುಷ್‌ ಮಂತ್ರಾಲಯದ ಭಾರತೀಯ ವೈದ್ಯ ಪದ್ಧತಿಯ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಡಾ.ಬಿ.ಎಸ್‌. ಪ್ರಸಾದ್‌ ತಿಳಿಸಿದರು.

Along with the demand for doctors, the responsibility has also High snr

 ಮೈಸೂರು (ನ.05):  ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ವೈದ್ಯರಿಗೆ ಬೇಡಿಕೆ ಹೆಚ್ಚಾಗಿದ್ದು, ನಿಮ್ಮ ಮೇಲಿನ ಜವಾಬ್ದಾರಿಯು ಹೆಚ್ಚಿದೆ ಎಂದು ಆಯುಷ್‌ ಮಂತ್ರಾಲಯದ ಭಾರತೀಯ ವೈದ್ಯ ಪದ್ಧತಿಯ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಡಾ.ಬಿ.ಎಸ್‌. ಪ್ರಸಾದ್‌ ತಿಳಿಸಿದರು.

ನಗರದ ಜೆಎಸ್‌ಎಸ್‌ ಆಯುರ್ವೇದ ವೈದ್ಯಕೀಯ (Ayurveda Collage) ಕಾಲೇಜಿನ ವಿಶಿಖಾನುಪ್ರವೇಶ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮುಖ್ಯಭಾಷಣ ಮಾಡಿದರು.

ವೈದ್ಯರು (Doctors) ತರಬೇತಿಯ ವೇಳೆ ಗುಣಮಟ್ಟಮತ್ತು ಜಾರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಭಾರತಕ್ಕೆ ಇತ್ತೀಚಿನ ದಿನಗಳಲ್ಲಿ ವೈದ್ಯರ ಅಗತ್ಯತೆ ಹೆಚ್ಚಿದೆ. ಕಳೆದ 2 ವರ್ಷಗಳಿಂದ ಕೋವಿಡ್‌ ಎಲ್ಲರನ್ನೂ ಕಾಡುವುದರ ಜೊತೆಗೆ ಮುಂಜಾಗ್ರತ ಕ್ರಮ ಹೇಗೆ ತೆಗೆದುಕೊಳ್ಳಬೇಕು ಎಂಬುದನ್ನು ಕಲಿಸಿದೆ. ಆ ನಿಟ್ಟಿನಲ್ಲಿ ನಾವು ಮುನ್ನಡೆಯಬೇಕು ಎಂದರು.

ಜನ ಸಾಮಾನ್ಯರಲ್ಲಿನ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಬದಲಾಗುತ್ತಿದೆ. ನಿರಂತರವಾಗಿ ದೊರೆಯುತ್ತಿರುವ ವಿದ್ಯುತ್‌, ಸಾಮಾಜಿಕ ಜಾಲತಾಣ, ಟಿವಿ ಮುಂತಾದ ಮಾಧ್ಯಮಗಳಿಂದಾಗಿ ಮಲಗುವುದು ತಡವಾಗುತ್ತಿದೆ. ಬೆಳಗ್ಗೆ ಏಳುವುದೂ ತಡವಾಗುತ್ತಿದೆ. ಇದರಿಂದಾಗಿ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದು, ಈ ಬದಲಾದ ಜೀವನ ಮತ್ತು ಆಹಾರ ಶೈಲಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಕೇಂದ್ರ ಸರ್ಕಾರದ ಸ್ಕಿಲ್‌ ಇಂಡಿಯಾ ಯೋಜನೆಯಡಿ ವಿದ್ಯಾರ್ಥಿಗಳು ವೀಸಾ ಪಡೆದು ವಿದೇಶಕ್ಕೆ ತೆರಳಲು ಅವಕಾಶವಿದೆ. ಅಲ್ಲಿ ಹೋಗಿ ಆಯುರ್ವೇದ ಅಧ್ಯಯನ ಮತ್ತು ಪ್ರವಾಸೋದ್ಯಮ ಕುರಿತು ತಿಳಿದುಕೊಂಡು ಬನ್ನಿ. ಪಾರಂಪರಿಕ ವೈದ್ಯಕೀಯ ಪದ್ಧತಿ ಮತ್ತು ಆಧುನಿಕ ವೈದ್ಯಕೀಯ ಪದ್ಧತಿ ಎರಡನ್ನೂ ಅಳವಡಿಸಿಕೊಳ್ಳಿ. ಇಂದಿನ ಪದವಿ ಪ್ರದಾನ ಸಮಾರಂಭದಲ್ಲಿ ಹೆಚ್ಚು ಮಂದಿ ಹೆಣ್ಣು ಮಕ್ಕಳೇ ಕಾಣಿಸಿಕೊಳ್ಳುತ್ತಿದ್ದಾರೆ. ತಾವೆಲ್ಲರೂ ಮದುವೆಯಾಗಿ ಮನೆ ಸೇರದೆ, ವೈದ್ಯಕೀಯ ವೃತ್ತಿಯಲ್ಲಿ ಮುಂದುವರೆಯುವಂತೆ ಅವರು ಕಿವಿಮಾತು ಹೇಳಿದರು.

ಜೆಎಸ್‌ಎಸ್‌ ವಿದ್ಯಾಸಂಸ್ಥೆಯು ಉತ್ತಮ ಮೂಲಭೂತ ಸೌಲಭ್ಯದೊಡನೆ, ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಇದಕ್ಕೆ ಆಡಳಿತ ಮಂಡಳಿ ಶ್ರಮಿಸುತ್ತಿದೆ. ಇಂದು ಇಷ್ಟೊಂದು ಮಂದಿ ಪದವಿ ಪಡೆಯುತ್ತಿದ್ದಾರೆ ಎಂದರೆ ನಿಮ್ಮನ್ನು ರೂಪಿಸಲು ಶಿಕ್ಷಕರು ಕಷ್ಟಪಟ್ಟಿದ್ದಾರೆ. ಶಿಕ್ಷಕರ ಶ್ರಮ ಇಲ್ಲದಿದ್ದರೆ ವಿದ್ಯಾರ್ಥಿಗಳು ಏನೂ ಸಾಧಿಸಲಾಗದು, ಆದ್ದರಿಂದ ನಾನು ಶಿಕ್ಷಕರನ್ನು ಪ್ರಶಂಸಿತ್ತೇನೆ ಎಂದರು.

ಕಾರ್ಯಕ್ರಮದಲ್ಲಿ 100 ಮಂದಿಗೆ ಪದವಿ ಪ್ರದಾನ ಮಾಡಲಾಯಿತು. 6 ಮಂದಿಗೆ ವಿಶೇಷ ಬಹುಮಾನ, ಇಬ್ಬರಿಗೆ ಉತ್ತಮ ವಿದ್ಯಾರ್ಥಿ ಪ್ರಶಸ್ತಿ ನೀಡಲಾಯಿತು.  ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ್‌, ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್‌. ಮಹೇಶ್‌, ಪ್ರಾಂಶುಪಾಲ ಡಾ. ಸರ್ಬೇಶ್ವರ್‌ ಕರ್‌ ಇದ್ದರು.

ತುರ್ತು ಚಿಕಿತ್ಸೆಗಳಿಗೆ  ದಾಖಲೆ ಅಗತ್ಯವಿಲ್ಲ

 ಬೆಂಗಳೂರು :  ‘ಯಾವುದೇ ರೋಗಿ ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಬಂದಾಗ ಯಾವ ದಾಖಲೆಗಳೂ ಮುಖ್ಯವಲ್ಲ. ಮೊದಲು ಚಿಕಿತ್ಸೆ ನೀಡಬೇಕು’ ಎಂದು ಆರೋಗ್ಯ ಸಚಿವ ಡಾ

ಕೆ. ಸುಧಾಕರ್‌ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ‘ಆಸ್ಪತ್ರೆಗಳಲ್ಲಿ ವೈದ್ಯರು, ವೈದ್ಯಾಧಿಕಾರಿಗಳು ಅಮಾನವೀಯವಾಗಿ ನಡೆದುಕೊಂಡರೆ ಕೆಲಸದಿಂದಲೇ ವಜಾ ಮಾಡುವ ಕಾನೂನು ಜಾರಿಗೊಳಿಸಲು ಚರ್ಚಿಸಲಾಗುತ್ತಿದ್ದು, ಮುಂದಿನ ಅಧಿವೇಶನದಲ್ಲಿಯೇ ಅಗತ್ಯ ಕಾನೂನು ತಿದ್ದುಪಡಿ ಮಾಡಲಾಗುವುದು’ ಎಂದು ಘೋಷಿಸಿದ್ದಾರೆ.

ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ತಾಯಿ ಹಾಗೂ ನವಜಾತ ಶಿಶುಗಳ ಮರಣದ ದುರ್ಘಟನೆ ಕುರಿತು ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ‘ರೋಗಿ ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಬಂದಾಗ ಯಾವ ದಾಖಲೆಗಳೂ ಮುಖ್ಯವಲ್ಲ. ತಾಯಿ ಕಾರ್ಡ್‌, ಆಧಾರ್‌ ಕಾರ್ಡ್‌ಗಳನ್ನು ಚಿಕಿತ್ಸೆ ನೀಡಿದ ಬಳಿಕವೂ ಕೇಳಬಹುದು. ಈ ಬಗ್ಗೆ ಹಿಂದಿನಿಂದಲೂ ಸೂಚನೆ ಇದೆ’ ಎಂದು ಸ್ಪಷ್ಟಪಡಿಸಿದರು.

‘ಖಾಸಗಿ ಆಸ್ಪತ್ರೆಗಳಲ್ಲಿ 76 ತುರ್ತು ಸೇವೆಗಳನ್ನು ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಯೋಜನೆಗೆ ಜೋಡಿಸಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಈ ಸೇವೆಗಳು ಇಲ್ಲವಾದರೆ, ಖಾಸಗಿ ಆಸ್ಪತ್ರೆಯಲ್ಲಿ ಪಡೆಯಬಹುದು. ಆಗ ಸರ್ಕಾರವೇ ವೆಚ್ಚ ಭರಿಸುತ್ತದೆ. ಈ ರೀತಿಯ ಘಟನೆ ಎಂದೂ ಮರುಕಳಿಸಬಾರದು. ಅದಕ್ಕಾಗಿ ಎಲ್ಲಾ ಕ್ರಮಗಳನ್ನು ವಹಿಸಲಾಗಿದೆ’ ಎಂದರು.

ಅಮಾನತು ಬದಲು ವಜಾ ಶಿಕ್ಷೆ:

‘ತುಮಕೂರಿನಲ್ಲಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಇಂತಹ ಘಟನೆಗಳು ನಡೆದಾಗ ಕೇವಲ ಅಮಾನತು ಮಾಡಿದರೆ ಸಾಲದು. ಅಂತಹವರನ್ನು ಕೆಲಸದಿಂದಲೇ ವಜಾ ಮಾಡಬೇಕು. ಈ ನಿಟ್ಟಿನಲ್ಲಿ ಕಾನೂನಿನಲ್ಲಿ ಬದಲಾವಣೆ ತರಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಲಾಗುವುದು. ಮುಂದಿನ ಅಧಿವೇಶನದಲ್ಲೇ ಕಾನೂನು ತಿದ್ದುಪಡಿ ತರಲಾಗುವುದು’ ಎಂದರು.

Latest Videos
Follow Us:
Download App:
  • android
  • ios