Asianet Suvarna News Asianet Suvarna News

ತೃತೀಯ ಲಿಂಗಿಗಳಿಗೂ ಬದುಕಲು ಅವಕಾಶ ಕೊಡಿ: ಮಂಜಮ್ಮ ಜೋಗತಿ ಮನವಿ

ತೃತಿಯ ಲಿಂಗಿಗಳನ್ನು ಅವಮಾನಿಸಿ ಹೀಯಾಳಿಸಬೇಡಿ, ಸ್ವತಂತ್ರ ಭಾರತದಲ್ಲಿ ಬದಕಲು ಎಲ್ಲರಿಗೂ ಹಕ್ಕಿದೆ. ಸಮಾಜದಲ್ಲಿ ಎಲ್ಲರಂತೆ ತೃತಿಯ ಲಿಂಗಿಗಳು ಬದಕಲು ಅವಕಾಶ ಮಾಡಿಕೊಡಿ ಎಂದು ಪದ್ಮಶ್ರೀ ಪಶಸ್ತಿ ಪುರಸ್ಕೃತ ಮಂಜಮ್ಮ ಜೋಗತಿ ಮನವಿ ಮಾಡಿದರು. 

Allow Transgenders to Live too Says Manjamma Jogathi At Ramanagara gvd
Author
First Published Jan 5, 2024, 12:46 PM IST

ಕನಕಪುರ (ಜ.05): ತೃತಿಯ ಲಿಂಗಿಗಳನ್ನು ಅವಮಾನಿಸಿ ಹೀಯಾಳಿಸಬೇಡಿ, ಸ್ವತಂತ್ರ ಭಾರತದಲ್ಲಿ ಬದಕಲು ಎಲ್ಲರಿಗೂ ಹಕ್ಕಿದೆ. ಸಮಾಜದಲ್ಲಿ ಎಲ್ಲರಂತೆ ತೃತಿಯ ಲಿಂಗಿಗಳು ಬದಕಲು ಅವಕಾಶ ಮಾಡಿಕೊಡಿ ಎಂದು ಪದ್ಮಶ್ರೀ ಪಶಸ್ತಿ ಪುರಸ್ಕೃತ ಮಂಜಮ್ಮ ಜೋಗತಿ ಮನವಿ ಮಾಡಿದರು. ನಗರದ ರೂರಲ್ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾನೇನು ಹೆಚ್ಚು ವಿದ್ಯಾವಂತಳಲ್ಲ. ನಮ್ಮದು ಬಡಕುಟುಂಬ. ನಾನು ಎಲ್ಲರಂತೆ ಇದ್ದೆ. ಎಸ್ಸೆಸ್ಸೆಲ್ಸಿ ಓದುವಾಗಲೇ ದೇಹದಲ್ಲಿ ಬದಲಾವಣೆಗಳಾದವು. ನನ್ನ ಕುಟುಂಬ ನನ್ನನ್ನು ತಿರಸ್ಕರಿಸಿತು. ಸಮಾಜ ನನ್ನನ್ನು ಹೀಯಾಳಿಸಿ ಅವಮಾನಿಸಿತು. ಈಗ ಅದೇ ಸಮಾಜ ನನ್ನನ್ನು ಗೌರವಿಸುತ್ತಿದೆ ಎಂದರು.

ನಿಮ್ಮ ಸುತ್ತಮುತ್ತಲೂ ಯಾರಾದರೂ ಹೆಣ್ಣಿಂದ ಗಂಡಾಗಿ, ಗಂಡು ಹೆಣ್ಣಾಗಿ ಪರಿವರ್ತನೆ ಯಾಗುತ್ತಿದ್ದರೆ ಗೇಲಿ ಮಾಡಿ ಅವಮಾನಿಸಬೇಡಿ, ಬದಕಲು ಅವಕಾಶ ಮಾಡಿಕೊಡಿ ಅಥವಾ ನಿಮ್ಮ ಕುಟುಂಬದಲ್ಲಿ ನನ್ನಂತೆ ಯಾವುದಾದರು ಮಗು ಹುಟ್ಟಿದರೆ ಹಣ ಆಸ್ತಿ ಮಾಡಬೇಡಿ, ವಿದ್ಯಾಭ್ಯಾಸ ಕೊಡಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ. ಮುಂದೆ ನಿಮ್ಮ ಕೀರ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತಾರೆ. ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಹಂಚಿಕೊಂಡು ಕಣ್ಣಾಲಿಗಳು ತೇವಗೊಂಡು ಗದ್ಗದಿತರಾದರು.

ಕೇಂದ್ರ ಸರ್ಕಾರದ ಯೋಜನೆಗಳು ಕಡುಬಡವರಿಗೂ ದೊರೆಯಲಿ: ಸಚಿವ ಕ್ರಿಶನ್‌ ಪಾಲ್‌

ಸಮಯಕ್ಕೆ ಬಹಳ ಮೌಲ್ಯವಿದೆ, ಸಮಯಕ್ಕೆ ಯಾರು ಗೌರವ ಕೊಡುತ್ತೀರೋ ಅವರಿಗೆ ಮುಂದೊಂದು ದಿನ ಸಮಯವೇ ಗೌರವ ತಂದು ಕೊಡುತ್ತದೆ. ಸಮಯ ಪ್ರಜ್ಞೆ ಇರಬೇಕು. ಅದು ನನ್ನಲಿ ಇದ್ದುದ್ದರಿಂದ ಹಳ್ಳಿಯಿಂದ ದಿಲ್ಲಿಯ ಪಾರ್ಲಿಮೆಂಟ್‌ಗೆ ಕರೆತಂದು ಪದ್ಮಶ್ರೀ ಪ್ರಶಸ್ತಿಯನ್ನು ತಂದು ಕೊಟ್ಟಿದೆ. ನನ್ನ ಸಾಧನೆ ಓದಿನಿಂದಲ್ಲ ನಾನು ಕಲಿತ ಜೋಗತಿ ಕಲೆಯಿಂದ ಸಾಧ್ಯವಾಗಿದೆ. ಪ್ರತಿಯೊಬ್ಬ ಪೋಷಕರು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು ಎಂದು ಶ್ರಮ ಪಡುತ್ತಿರುತ್ತಾರೆ. ನಿಮಗೆ ಗೊತ್ತಿರುವುದಿಲ್ಲ ಯಾರನ್ನು ಯಾರು ಗುರುತಿಸುವುದಿಲ್ಲ. ನಾವು ಮಾಡುವ ಕೆಲಸದಲ್ಲಿ ನಮ್ಮನ್ನು ನಾವೇ ಗುರುತಿಸಿಕೊಳ್ಳುವ ಕೆಲಸ ಮಾಡಬೇಕು ಎಂದರು.

ಜೀವನದಲ್ಲಿ ಶ್ರದ್ಧೆಯಿಂದ ನಿಷ್ಠೆಯಿಂದ ಓದಿದಾಗ ಮಾತ್ರ ಮುಂದೆ ಬರಬಹುದು. ನಾನ್ಯಾವ ಕಾಲೇಜು ಮೆಟ್ಟಿಲನ್ನು ಹತ್ತಲಿಲ್ಲ. ಆದರೆ ನಾನು ಕಲಿತ ಕಲೆ ನೂರಾರು ಕಾಲೇಜುಗಳ ಮೆಟ್ಟಿಲನ್ನು ಹತ್ತಿಸಿದೆ. ನಾನ್ಯಾವ ಎಂಬಿಬಿಎಸ್, ಪಿಎಚ್‌ಡಿ ಮಾಡಿಲ್ಲ ಗುಲ್ಬರ್ಗದ ಶರಣ ಬಸಪ್ಪ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಕೊಟ್ಟಿದ್ದಾರೆ. 2014 ರಲ್ಲಿ ಮಂಜಮ್ಮ ಜೋಗತಿ, ಮತ್ತು ನಡುವೆ ಸುಳಿವ ಹೆಣ್ಣು, ಪುಸ್ತಕಗಳು ಕರ್ನಾಟಕದ 8 ವಿವಿ ಯಲ್ಲಿ ಡಿಗ್ರಿ ಮಕ್ಕಳಿಗೆ ಪಠ್ಯಗಳಾಗಿವೆ, ಮೊಬೈಲ್ ನಿಂದ ದೂರವಿರಿ ಕನ್ನಡ ಪುಸ್ತಕಗಳನ್ನು ಓದಿ ನನ್ನಂತೆ ನೀವು ಸಹ ಸಾಧನೆ ಮಾಡಬಹುದು ಎಂದರು.

ಆರ್‌ ಇಎಸ್ ಅಧ್ಯಕ್ಷ ಶ್ರೀಕಂಠು ಮಾತನಾಡಿ, ಎಸ್. ಕರಿಯಪ್ಪನವರು ಕಟ್ಟಿದ ಸಂಸ್ಥೆ ಸರಿಯಾದ ದಾರಿಯಲ್ಲಿ ತೆಗೆದುಕೊಂಡು ಹೊಗಬೇಕು ಎಂಬ ಸಂಕಲ್ಪ ಮಾಡಿ ನಾವು ಬಂದಿದ್ದೇವೆ. ಕರಿಯಪ್ಪ ನವರ ಆಶಯದಂತೆ ನಮ್ಮ ಮಕ್ಕಳಿಗೆ ಅವಶ್ಯಕತೆ, ಸ್ಪರ್ಧಾತ್ಮಕತೆಗೆ ತಕ್ಕಂತೆ ಶಿಕ್ಷಣ ಕೊಡಬೇಕು ಈ ಹಿಂದೆ ಡಿಗ್ರಿ ಮಾಡಿಕೊಂಡಿದ್ದರೆ ಉದ್ಯೋಗ ಸಿಗುತ್ತಿತ್ತು ಈಗ ಕಾಲ ಬದಲಾಗಿದೆ ಡಿಗ್ರಿ ಪಡೆದು ಉದ್ಯೋಗ ಮಾಡುವ ಕಾಲ ಇದಲ್ಲ ಎಂಬಿಬಿಎಸ್, ಎಂಜಿನಿಯರಿಂಗ್ ಹೊರತುಪಡಿಸಿ ಮುಂದಿನ ದಿಗಳಲ್ಲಿ ಕೌಶಲ್ಯಾಧಾರಿತ ಉದ್ಯೋಗ ಅವಕಾಶಗಳು ಹೆಚ್ಚು ಸೃಷ್ಟಿಯಾಗುತ್ತವೆ. ಹಾಗಾಗಿ ಕೌಶಲ್ಯಾಭಿವೃದ್ಧಿ ತರಬೇತಿ ಕೋಡಬೇಕು ಎಂದು ತಿರ್ಮಾನಿಸಿದ್ದೇವೆ. 

ದೇಶಕ್ಕೆ ಕಾಂಗ್ರೆಸ್ ಭದ್ರ ಬುನಾದಿ ಹಾಕಿಕೊಟ್ಟಿದೆ: ಸಚಿವ ರಾಮಲಿಂಗಾರೆಡ್ಡಿ

ಕೇಂದ್ರ ಸರ್ಕಾರದಿಂದ ಜಿಲ್ಲೆಗೊಂದು ತರಬೇತಿ ಕೇಂದ್ರ ಸಿಗಲಿದೆ ನಮ್ಮ ಸಂಸ್ಥೆಯಲ್ಲೇ ಜಿಲ್ಲಾ ಮಟ್ಟದ ಕೌಶಲ್ಯಾಭಿವೃದ್ದಿ ತರಬೇತಿ ನೀಡುವ ಕೆಲಸ ಆರಂಭವಾಗಲಿದೆ ಎಂದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಆರ್‌ಇಎಸ್ ಸಂಸ್ಥೆಯ ಕಾರ್ಯದರ್ಶಿ ಪುಟ್ಟಸ್ವಾಮಿ, ಜಂಟಿ ಕಾರ್ಯದರ್ಶಿ ಸೂರ್ಯ ನಾರಾಯಣಗೌಡ, ಖಜಾಂಚಿ ಮಂಜುನಾಥ್, ನಿರ್ದೇಶಕ ಕೆ.ಬಿ.ನಾಗರಾಜು, ಶಿವಕುಮಾರ್, ರಾಮೇಗೌಡ, ಪದವಿ ಕಾಲೇಜಿನ ಪ್ರಾಂಶುಪಾಲ ಗದಿಗೆಪ್ಪ ಹಿತ್ತಲಮನಿ, ರೂರಲ್ ಕಾಲೇಜು ಪ್ರಾಂಶುಪಾಲ ಪ್ರೊ.ಎಂ.ಟಿ.ಬಾಲಕೃಷ್ಣ, ಪ್ರಾಧ್ಯಾಪಕ ದೇವರಾಜು ಸೇರಿದಂತೆ ಬೋಧಕ ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Follow Us:
Download App:
  • android
  • ios