Asianet Suvarna News Asianet Suvarna News

ಡಿಕೆಸು ವಿರುದ್ಧ ಆರೋಪ ವಿಚಾರ : ಕೈ ಮುಖಂಡರಿಂದ ವಿಪಕ್ಷಗಳ ವಿರುದ್ಧ ಅಸಮಾಧಾನ

ಶಾಸಕ ಡಾಕ್ಟರ್ ರಂಗನಾಥ್, ಸಂಸದ ಡಿ.ಕೆ. ಸುರೇಶ್ ತಾಲೂಕಿನಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದು ಅವರನ್ನು ಸಹಿಸದ ವಿರೋಧ ಪಕ್ಷಗಳು ಮನಬಂದಂತೆ ಆರೋಪ ಮಾಡುತ್ತಿವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ ಆರೋಪಿಸಿದ್ದಾರೆ.

 Allegations against DK Suresh : Displeasure against the opposition by Congress leaders   snr
Author
First Published Jan 20, 2024, 12:49 PM IST

  ಕುಣಿಗಲ್ :  ಶಾಸಕ ಡಾಕ್ಟರ್ ರಂಗನಾಥ್, ಸಂಸದ ಡಿ.ಕೆ. ಸುರೇಶ್ ತಾಲೂಕಿನಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದು ಅವರನ್ನು ಸಹಿಸದ ವಿರೋಧ ಪಕ್ಷಗಳು ಮನಬಂದಂತೆ ಆರೋಪ ಮಾಡುತ್ತಿವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ ಆರೋಪಿಸಿದ್ದಾರೆ.

ಪಟ್ಟಣದಲ್ಲಿ ಸಂಸದರ ಕಚೇರಿ ಆವರಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಣಿಗಲ್ ನೀರಾವರಿಗೆ ಲಿಂಕ್ ಕೆನಾಲ್ ತಂದಿರುವ ನಮ್ಮ ಶಾಸಕರ ಕಾರ್ಯಕ್ಕೆ ಅಭಿನಂದನೆ ವ್ಯಕ್ತಪಡಿಸುತ್ತೇವೆ, ಅದರಂತೆ ಕುಣಿಗಲ್ ಸ್ಟಡ್ ಫಾರಂ ಯಾವುದೋ ಖಾಸಗಿ ವ್ಯಕ್ತಿಗಳ ಪಾಲಾಗಬಾರದು ಎಂದು ಅದನ್ನು ಸಾರ್ವಜನಿಕರ ಉಪಯೋಗಕ್ಕೆ ಮಾಡಲು ಸಂಸದರು ಮತ್ತು ಶಾಸಕರು ಶ್ರಮಿಸುತ್ತಿದ್ದಾರೆ.

ಈ ಅಭಿವೃದ್ಧಿ ಕಾರ್ಯದಿಂದ ಅಲ್ಲಿನ ಯಾವುದೇ ಮರ ಗಿಡಗಳಿಗೆ ತೊಂದರೆ ಆಗದ ರೀತಿ ಕೆಲಸ ಮಾಡುತ್ತಾರೆ. ಚುನಾವಣೆ ಹಿನ್ನೆಲೆಯಲ್ಲಿ ವಿರೋಧ ಪಕ್ಷದವರು ಸುಮ್ಮನೆ ಅಪಪ್ರಚಾರ ಆರಂಭಿಸಿದ್ದಾರೆ ಎಂದು ಕಿಡಿಕಾರಿದರು.

ಜೆಡಿಎಸ್ ಹಾಗೂ ಬಿಜೆಪಿಯ ಮುಖಂಡರು ಅಧಿಕಾರ ಕಳೆದುಕೊಂಡ ಹತಾಶೆಯಿಂದ ಶಾಸಕರ ಮೇಲೆ ಲಘುವಾಗಿ ಮಾತನಾಡುವ ಅಭ್ಯಾಸ ಆರಂಭಿಸಿದ್ದಾರೆ. ಇದು ಸರಿಯಾದ ಮನಸ್ಥಿತಿ ಅಲ್ಲ. ನಮಗೂ ಕೂಡ ಅದೇ ರೀತಿ ಹೇಳಿಕೆಗಳನ್ನು ಕೊಡಲು ಬರುತ್ತದೆ ಎಂದರು.

ಈ ಸಂದರ್ಭದಲ್ಲಿ ಪುರಸಭಾ ಮಾಜಿ ಅಧ್ಯಕ್ಷ ರಂಗಸ್ವಾಮಿ ಪ್ರಚಾರ ಸಮಿತಿಯ ಅಧ್ಯಕ್ಷ ಶಂಕರ್, ರೆಹಮಾನ ಶರೀಫ್, ಹಾಲುವಾಗಿಲು ಸ್ವಾಮಿ, ಹರೀಶ್ ಮಾತನಾಡಿದರು. ಈ ಸಂದರ್ಭದಲ್ಲಿ ಸೂಳೇ ಕುಪ್ಪೆ ರಾಜಶೇಖರ್, ಚಂದ್ರು ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಈ ಸಂದರ್ಭದಲ್ಲಿ ಇದ್ದರು.

Follow Us:
Download App:
  • android
  • ios