Asianet Suvarna News Asianet Suvarna News

ಅಕ್ಟೋಬರ್‌ನಲ್ಲಿ ಸಾರ್ವಕಾಲಿಕ ದಾಖಲೆ ಬಿಸಿಲು: 32.8 ಡಿಗ್ರಿ ಸೆಲ್ಶಿಯಸ್‌ ದಾಖಲು

ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಗರಿಷ್ಠ ಉಷ್ಣಾಂಶ 32.8 ಡಿಗ್ರಿ ಸೆಲ್ಶಿಯಸ್‌ ದಾಖಲಾಗುವ ಮೂಲಕ ಹೊಸ ಸಾರ್ವಕಾಲಿಕ ದಾಖಲೆ ಸೃಷ್ಟಿಯಾಗಿದೆ.

All time record Maximum temperature in October Record 32 8 degrees Celsius gvd
Author
First Published Oct 3, 2024, 8:42 AM IST | Last Updated Oct 3, 2024, 8:42 AM IST

ಬೆಂಗಳೂರು (ಅ.03): ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಗರಿಷ್ಠ ಉಷ್ಣಾಂಶ 32.8 ಡಿಗ್ರಿ ಸೆಲ್ಶಿಯಸ್‌ ದಾಖಲಾಗುವ ಮೂಲಕ ಹೊಸ ಸಾರ್ವಕಾಲಿಕ ದಾಖಲೆ ಸೃಷ್ಟಿಯಾಗಿದೆ. ಹವಾಮಾನ ಇಲಾಖೆಯಿಂದ ದಾಖಲಾತಿ ಆರಂಭಗೊಂಡ ಬಳಿಕ ಈವರೆಗೆ ಅಕ್ಟೋಬರ್‌ನಲ್ಲಿ 32.8 ಡಿಗ್ರಿ ಸೆಲ್ಶಿಯಸ್‌ ಗರಿಷ್ಢ ಉಷ್ಣಾಂಶ ದಾಖಲಾಗಿರಲಿಲ್ಲ. ಇದೇ ಮೊದಲ ಬಾರಿಗೆ ಈ ಪ್ರಮಾಣದ ಗರಿಷ್ಠ ಉಷ್ಣಾಂಶ ನಗರದಲ್ಲಿ ದಾಖಲಾಗಿದ್ದು, ಅಕ್ಟೋಬರ್‌ನ ವಾಡಿಕೆ ಉಷ್ಣಾಂಶ 28 ಡಿಗ್ರಿ ಸೆ. ಆಗಿದೆ. ಆದರೆ ವಾಡಿಕೆ ಪ್ರಮಾಣಕ್ಕಿಂತ 4 ಡಿಗ್ರಿ ಸೆ. ಅಧಿಕ ಉಷ್ಣಾಂಶ ಬುಧವಾರ ದಾಖಲಾಗಿದೆ.

ಈ ಹಿಂದೆ 2002ರ ಅಕ್ಟೋಬರ್‌ 4ರಂದು ದಾಖಲಾದ 32.4 ಡಿಗ್ರಿ ಸೆ. ಗರಿಷ್ಠ ಉಷ್ಣಾಂಶ ಸಾರ್ವಕಾಲಿಕ ದಾಖಲೆಯ ಉಷ್ಣಾಂಶತವಾಗಿತ್ತು ಎಂದು ಹವಾಮಾನ ಇಲಾಖೆಯ ಅಂಕಿ ಅಂಶಗಳು ದೃಢಪಡಿಸಿವೆ. ಇನ್ನು ಬುಧವಾರ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 32 ಡಿಗ್ರಿ ಸೆ., ಎಚ್‌ಎಎಲ್‌ನಲ್ಲಿ 32.2, ಜಿಕೆವಿಕೆಯಲ್ಲಿ 31.2 ಡಿಗ್ರಿ ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಕಳೆದ ಮಂಗಳವಾರ (ಅ.1) 32 ಡಿಗ್ರಿ ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿತ್ತು.

ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸುವುದು ಅನಿವಾರ್ಯ: ಸಚಿವ ಈಶ್ವರ್‌ ಖಂಡ್ರೆ

ಈ ಹಿಂದಿನ ವರ್ಷದಲ್ಲಿ ಅಕ್ಟೋಬರ್‌ನಲ್ಲಿ ದಾಖಲಾದ ಗರಿಷ್ಠ ಉಷ್ಣಾಂಶ ವಿವರ
ವರ್ಷ ಗರಿಷ್ಠ ಉಷ್ಣಾಂಶ

2020(ಅ.7) 31.3
2019 (ಅ.15) 30.7
2018 (ಅ.13) 31.5
2017(ಅ.25) 31.3
2016(ಅ.4 ಮತ್ತು 30) 32.0
2015(ಅ.15) 32.1
2014(ಅ.6) 31.7
2013(ಅ.15) 30.8
2012(ಅ.6) 32.3
2011(ಅ.6ಮತ್ತು 10) 31.0
2002(ಅ.4) 32.4 (ಸಾರ್ವಕಾಲಿಕ ದಾಖಲೆ)

Latest Videos
Follow Us:
Download App:
  • android
  • ios