Asianet Suvarna News Asianet Suvarna News

ಟೇಕಾಫ್‌ಗೆ ಸಿದ್ದವಾಗಿದ್ದ ವಿಮಾನ ಸಂಚಾರ ಮೊಟಕು; Mangaluru Airport ನಲ್ಲಿ 'ಚಾಟಿಂಗ್' ಆತಂಕ!

ಮಂಗಳೂರು ಏರ್ ಪೋರ್ಟ್ ನಲ್ಲಿ ಯುವಕ-ಯುವತಿ ಚಾಟಿಂಗ್ ಅವಾಂತರವೊಂದು ಭಾರೀ ಆತಂಕ ಸೃಷ್ಟಿಸಿದ ಘಟನೆ ನಡೆದಿದ್ದು, ರನ್ ವೇನಲ್ಲಿ ಟೇಕಾಫ್ ಗೆ ಸಿದ್ದವಾಗಿದ್ದ ವಿಮಾನ ಸಂಚಾರ ಸ್ಥಗಿತಗೊಳಿಸಿ ತಪಾಸಣೆ ನಡೆಸಿದ ಘಟನೆ ಇಂದು ನಡೆದಿದೆ

Air traffic was curtailed as it prepared for take-off; Chatting  anxiety at Mangalore Airport rv
Author
Bangalore, First Published Aug 14, 2022, 5:06 PM IST

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ಆ.14)  ಮಂಗಳೂರು ಏರ್ ಪೋರ್ಟ್ ನಲ್ಲಿ ಯುವಕ-ಯುವತಿ ಚಾಟಿಂಗ್ ಅವಾಂತರವೊಂದು ಭಾರೀ ಆತಂಕ ಸೃಷ್ಟಿಸಿದ ಘಟನೆ ನಡೆದಿದ್ದು, ರನ್ ವೇನಲ್ಲಿ ಟೇಕಾಫ್ ಗೆ ಸಿದ್ದವಾಗಿದ್ದ ವಿಮಾನ ಸಂಚಾರ ಸ್ಥಗಿತಗೊಳಿಸಿ ತಪಾಸಣೆ ನಡೆಸಿದ ಘಟನೆ ಇಂದು ನಡೆದಿದೆ. ‌ ಮಂಗಳೂರು ಏರ್ ಪೋರ್ಟ್(Mangaluru Airport) ನಲ್ಲಿ ವಾಟ್ಸಪ್ ಚಾಟ್(Whatsapp Chat) ಆತಂಕಕ್ಕೆ ಕಾರಣವಾಗಿದ್ದು ಭದ್ರತೆ ವಿಚಾರಕ್ಕೆ ಸಂಬಂಧಿಸಿ ಚಾಟ್ ಮಾಡಿದ್ದ ಯುವಕ-ಯುವತಿಯನ್ನು ವಶಕ್ಕೆ ಪಡೆಯಲಾಗಿದೆ. 

ರನ್‌ ವೇ ಸಮೀಪ ಗುಡ್ಡ ಕುಸಿತ: ಮಂಗಳೂರು ಏರ್ ಪೋರ್ಟ್ ರನ್ ವೇ ಸೇಫ್

ಭದ್ರತೆ ಬಗ್ಗೆ ಆತಂಕ ಹುಟ್ಟಿಸುವ ರೀತಿಯಲ್ಲಿ ವಾಟ್ಸಪ್ ಚಾಟ್ ಮಾಡಿದ್ದರು ಎನ್ನಲಾಗಿದೆ. ಮಂಗಳೂರು ಏರ್ ಪೋರ್ಟ್ ಮೂಲಕ ಬೆಂಗಳೂರಿಗೆ ತೆರಳಲು ಯುವತಿಯೊಬ್ಬಳು ಬಂದಿದ್ದು, ಮಂಗಳೂರು ಏರ್ ಪೋರ್ಟ್ ಗೆ ಮುಂಬೈಗೆ ತೆರಳಲು ಮತ್ತೊಬ್ಬ ಯುವಕ ಆಗಮಿಸಿದ್ದ. ಇಬ್ಬರೂ ಪರಿಚಯಸ್ಥರೇ ಆಗಿದ್ದು, ಬೇರೆ ಬೇರೆ ವಿಮಾನದಲ್ಲಿ ಪ್ರಯಾಣಕ್ಕೆ ಸಿದ್ದತೆ ನಡೆಸಿದ್ದರು. ಯುವಕ ಮುಂಬೈ ವಿಮಾನದಲ್ಲಿ ಕೂತಿದ್ದು, ರನ್ ವೇಯಲ್ಲಿ ಟೇಕಾಫ್ ಗೆ  ವಿಮಾನ ಸಿದ್ದವಾಗಿತ್ತು. ಈ ವೇಳೆ ಬೆಂಗಳೂರಿಗೆ ತೆರಳಲು ಏರ್ ಪೋರ್ಟ್ ನಲ್ಲಿ ಕೂತಿದ್ದ ಯುವತಿ ಜೊತೆ ಯುವಕ ಚಾಟಿಂಗ್ ನಲ್ಲಿ ನಿರತವಾಗಿದ್ದ. ಚಾಟಿಂಗ್ ನಲ್ಲಿ ಭದ್ರತೆಗೆ ಅಪಾಯವೊಡ್ಡುವ ವಿಚಾರಗಳ ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಯುವತಿಯ ಚಾಟಿಂಗ್ ಗಮನಿಸಿ ಪ್ರಯಾಣಿಕರೊಬ್ಬರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.‌  ಮಾಹಿತಿ ಪಡೆದು ಮುಂಬೈ ವಿಮಾನ ತಡೆದು ಪ್ರಯಾಣಿಕರನ್ನು ಇಳಿಸಿ ತಪಾಸಣೆ ನಡೆಸಲಾಗಿದೆ.  ಸದ್ಯ ಯುವಕ ಮತ್ತು ಯುವತಿ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗಿದ್ದು, ವಿಚಾರಣೆ ವೇಳೆ ತಮಾಷೆಗಾಗಿ ಮಾಡಿದ್ದಾಗಿ ಜೋಡಿ ಹೇಳಿಕೆ ನೀಡಿದ್ದಾರೆ.

ವಿಮಾನದಲ್ಲಿ ಸಿಗರೇಟ್‌ ಸೇದಿದ ಸೋಷಿಯಲ್‌ ಮೀಡಿಯಾ ಸ್ಟಾರ್‌: ವಿಡಿಯೋ ವೈರಲ್..!

ಭದ್ರತೆಗೆ ಸವಾಲೊಡ್ಡುವ ಚಾಟಿಂಗ್!

ಯುವಕ-ಯುವತಿ ಪರಸ್ಪರ ಮಾಡಿದ್ದ ಚಾಟ್ ನಲ್ಲಿ ವಿಮಾನದ ಭದ್ರತೆಗೆ ಆತಂಕ ಒಡ್ಡುವ ಸಂದೇಶಗಳು ಇತ್ತು ಎನ್ನಲಾಗಿದೆ. ಇದನ್ನ ಸಹಪ್ರಯಾಣಿಕರೊಬ್ಬರು ಗಮನಿಸಿ ಸಿಐಎಸ್ ಎಫ್((CISF) ಭದ್ರತಾ ಪಡೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಯುವತಿ ವಶಕ್ಕೆ ಪಡೆದು ಬೋರ್ಡಿಂಗ್ ಏರಿಯಾದಲ್ಲಿ ವಿಚಾರಣೆ ನಡೆಸಲಾಗಿದೆ. ಮೊಬೈಲ್ ವಶಕ್ಕೆ ಪಡೆದು ಚಾಟಿಂಗ್ ಗಮನಿಸಿದಾಗ ಯುವಕನ ಜೊತೆ ಭದ್ರತೆಗೆ ಅಪಾಯ ಒಡ್ಡುವ ಸಂದೇಶ ರವಾನೆಯಾಗಿತ್ತು. ಇನ್ನು ಯುವತಿ ಮೆಸೇಜ್ ಮಾಡಿದ್ದ ಯುವಕ ಅದೇ ಏರ್ ಪೋರ್ಟ್ ನಿಂದ ಮುಂಬೈಗೆ ಪ್ರಯಾಣಿಸುವ ವಿಮಾನದಲ್ಲಿ ಇದ್ದಾನೆ ಅಂದಾಗ ಆತಂಕ ಮತ್ತಷ್ಟು ಹೆಚ್ಚಾಗಿದೆ. ಆದರೆ ಅದಾಗಲೇ ಆ ಮುಂಬೈ ವಿಮಾನ ಬೋರ್ಡಿಂಗ್ ಪೂರ್ಣಗೊಳಿಸಿ ನೇರವಾಗಿ ರನ್ ವೇ ಎಂಟ್ರಿಯಾಗಿ ಟೇಕಾಫ್ ಗೆ ಕೆಲವೇ ಕ್ಷಣಗಳು ಉಳಿದಿತ್ತು. ಆದರೆ ತಕ್ಷಣ ಎಟಿಸಿಗೆ ಸಂದೇಶ ರವಾನಿಸಿದ ಸಿಐಎಸ್ ಎಫ್ ಟೀಂ ಟೇಕಾಫ್ ಗೆ ಸ್ಥಗಿತಗೊಳಿಸಲು ಸೂಚನೆ ನೀಡಿದೆ.  ಬಳಿಕ ಮುಂಬೈ ವಿಮಾನದ ಪ್ರಯಾಣಿಕರ ಇಳಿಸಿ ತೀವ್ರ ತಪಾಸಣೆ ನಡೆಸಲಾಗಿದೆ. ಅಲ್ಲದೇ ಯುವಕನನ್ನೂ ವಶಕ್ಕೆ ಪಡೆಯಲಾಗಿದೆ. ಈತ ಮಂಗಳೂರಿನಿಂದ ಮುಂಬೈಗೆ ಪ್ರಯಾಣಿಸ್ತಾ ಇದ್ದ. ಯುವತಿ ಬೆಂಗಳೂರಿಗೆ ತೆರಳಿ ಚೆನ್ನೈ ಪ್ರಯಾಣಕ್ಕೆ ಮುಂದಾಗಿದ್ದಳು.

Follow Us:
Download App:
  • android
  • ios