Asianet Suvarna News Asianet Suvarna News

ಕೊರೋನಾ ಅಟ್ಟಹಾಸ: ಮೈಸೂರಿನಲ್ಲಿ ಮತ್ತೆ ಮಾರ್ಕೆಟ್‌ ಬಂದ್‌..!

ಜೂನ್ 25ರಿಂದ ನಾಲ್ಕು ದಿನಗಳ ಕಾಲ ಮಾರುಕಟ್ಟೆ ಬಂದ್| ಕೊರೋನಾ ಹರಡುವಿಕೆಯನ್ನ ತಡೆಯಲು ಜಿಲ್ಲಾಡಳಿತದಿಂದ ಈ ಕ್ರಮ| ಇದಲ್ಲದೆ ನಗರದ 5 ಪ್ರದೇಶಗಳಲ್ಲಿ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಳ್ಳಲು ಜಿಲ್ಲಾಡಳಿತ ನಿರ್ಧಾರ| 

Again Market Shut Down due tom Coronavirus Cases in Mysuru
Author
Bengaluru, First Published Jun 24, 2020, 2:27 PM IST

ಮೈಸೂರು(ಜೂ.24): ಕೊರೋನಾ ವೈರಸ್‌ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದ ದೇವರಾಜ ಮಾರುಕಟ್ಟೆ, ಸಂತೆ ಪೇಟೆ, ಶಿವರಾಂಪೇಟೆ, ಮನ್ನಾರ್ಸ್ ಮಾರ್ಕೆಟ್, ಬೋಟಿ ಬಜಾರ್‌ಗಳನ್ನ ಬಂದ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಈ ಸಂಬಂಧ ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಅವರು ಆದೇಶವೊಂದನ್ನ ಹೊರಡಿಸಿದ್ದಾರೆ.

ನಾಳೆಯಿಂದ(ಜೂನ್ 25) ರಿಂದ ನಾಲ್ಕು ದಿನಗಳ ಕಾಲ ಬಂದ್ ಆಗಿರಲಿದೆ. ಕೊರೋನಾ ಹರಡುವಿಕೆಯನ್ನ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಈ ಕ್ರಮಕೈಗೊಂಡಿದೆ. ಇದಲ್ಲದೆ ನಗರದ 5 ಪ್ರದೇಶಗಳಲ್ಲಿ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. 

Again Market Shut Down due tom Coronavirus Cases in Mysuru

ಮೈಸೂರು: ಪೇದೆಗೆ ಅಂಟಿದ ಕೊರೋನಾ, ಅಡಿಷನಲ್‌ SP ಸ್ನೇಹಾ ಸೇರಿ 22 ಮಂದಿ ಕ್ವಾರಂಟೈನ್‌

ನಗರದ ಹೃದಯ ಭಾಗದಲ್ಲಿ ಮಹಾಮಾರಿ ಸೋಂಕು ದಾಳಿ ಇಟ್ಟಿರುವ ಹಿನ್ನಲೆಯಲ್ಲಿ ಈ ಆದೇಶವನ್ನ ಹೊರಡಿಸಲಾಗಿದೆ. ಜನರ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಪ್ರತಿ ದಿನ ನಗರದ ಹಾಗೂ ಜಿಲ್ಲೆಯ ವ್ಯಾಪಾರಸ್ಥರು, ಸಾರ್ವಜನಿಕರು ಕೊರೋನಾ ಕ್ರಮಗಳನ್ನ ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಲಾಗಿದೆ. ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನ ಪಾಲನೆ ಮಾಡದಿದ್ದಲ್ಲಿ ಅಂತಹ ಉದ್ದಿಮೆಗಳನ್ನ ಮುಚ್ಚಲಾಗುತ್ತದೆ ಎಂದು ಜಿಲ್ಲಾಡಳಿತ ಖಡಕ್‌ ಎಚ್ಚರಿಕೆ ರವಾನಿಸಿದೆ.
 

Follow Us:
Download App:
  • android
  • ios