ವಿಜಯಪುರ-ಕಲಬುರಗಿಯಲ್ಲಿ ಮತ್ತೆ ಭೂಕಂಪನ: ಆತಂಕದಲ್ಲಿ ಜನತೆ

*  ವಿಜಯಪುರ ಜಿಲ್ಲೆಯ ಮಸೂತಿ, ಮಲಘಾಣ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ನಡುಗಿದ ಭೂಮಿ 
*  ಕಲಬುರಗಿ ಜಿಲ್ಲೆಯ ಹಲಚೇರಾ, ಗಡಿಕೇಶ್ವರ ಗ್ರಾಮಗಳಲ್ಲಿ ಮತ್ತೆ ಲಘು ಭೂಕಂಪನ
*  ಕಳೆದ ಹಲವು ದಿನಗಳಿಂದ ಭೂಮಿಯಿಂದ ಕೇಳಿಬರುತ್ತಿರುವ ಭಾರಿ ಶಬ್ಧ

Again Earthquake at Vijayapura Kalaburagi grg

ವಿಜಯಪುರ/ಕಲಬುರಗಿ(ಅ.10):  ಇಂದು(ಭಾನುವಾರ) ವಿಜಯಪುರ(Vijayapura) ಹಾಗೂ ಕಲಬುರಗಿ(Kalaburagi) ಜಿಲ್ಲೆಯಲ್ಲಿ ಮತ್ತೆ‌ ಭೂಕಂಪನವಾಗಿದೆ. ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಮಸೂತಿ, ಮಲಘಾಣ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಭೂಮಿ ನಡುಗಿದ ಅನುಭವವಾಗಿದೆ. 

ನಸುಕಿನ ಜಾವ 5.15 ಕ್ಕೆ ಹಾಗೂ 7.15 ಕ್ಕೆ ಭೂಕಂಪನವಾಗಿದೆ(Earthquake). ಜಿಲ್ಲೆಯಲ್ಲಿ ಸರಣಿ ಭೂಕಂಪನದಿಂದ ಜನರಲ್ಲಿ ಭಯ ಆವರಿಸಿದೆ. ಹೀಗಾಗಿ ಯಾವಾಗ ಏನಾಗುತ್ತೋ ಎಂಬ ಆತಂಕದಲ್ಲೇ ಜನರು ಕಾಲ‌ ಕಳೆಯುತ್ತಿದ್ದಾರೆ. ಅ.5 ರಂದು ಕೂಡ 2.9 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿತ್ತು. ಈಗ ಮತ್ತೆ ಭೂಕಂಪನದ ಅನುಭವವಾಗಿದೆ. ಇದರಿಂದ ಜನರು ಆತಂಕದಲ್ಲಿದ್ದಾರೆ. 

Kalaburagi| ಚಿಂಚೋಳಿ : ತಿಂಗಳಲ್ಲಿ 2ನೇ ಸಲ ಭೂಕಂಪನ

ಕಲಬುರಗಿಯಲ್ಲೂ ಭೂಕಂಪನ

ಕಲಬುರಗಿ ಜಿಲ್ಲೆ ಚಿಂಚೋಳಿ(Chincholi) ತಾಲೂಕಿನ ಹಲಚೇರಾ, ಗಡಿಕೇಶ್ವರ ಗ್ರಾಮಗಳಲ್ಲಿ ಮತ್ತೆ ಲಘು ಭೂಕಂಪನವಾಗಿದೆ. ಭೂಮಿಯಿಂದ ಭಾರೀ ಸ್ಫೋಟಕ‌‌ ಶಬ್ಧದೊಂದಿಗೆ‌ ಭೂಕಂಪನ ಸಂಭವಿಸಿದೆ. ಇಂದು ಬೆಳಗ್ಗೆ 6 ಗಂಟೆಗೆ ಭೂಮಿಯಿಂದ ಹೊರಬಂದ ಭಾರಿ ಶಬ್ಧದಿಂದ(Sound) ಭೂಮಿ ಕಂಪಿಸಿದೆ. 

ಕಳೆದ ಹಲವು ದಿನಗಳಿಂದ ಭೂಮಿಯಿಂದ ಭಾರಿ ಶಬ್ಧ ಕೇಳಿಬರುತ್ತಿದೆ. ಗ್ರಾಮಸ್ಥರ ದೀರ್ಘ ಕಾಲದ ಸಮಸ್ಯೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಭೂಮಿಯಿಂದ ಕೇಳಿಬರುವ ಭಯಾನಕ ಶಬ್ಧದಿಂದ ರಾತ್ರಿಯಿಡಿ ಬೀದಿ ಬೀದಿಗಳಲ್ಲಿ ಜನರು ಕಾಲ ಕಳೆಯುತ್ತಿದ್ದಾರೆ. ಭೂಕಂಪನದ ಅನುಭವದಿಂದ ರಾತ್ರಿ ಮನೆಯಿಂದ ಜನರು ಹೊರಗಡೆ ಓಡಿ ಬಂದಿದ್ದಾರೆ. 

Latest Videos
Follow Us:
Download App:
  • android
  • ios