BMTC Electric Bus: ಬಿಎಂಟಿಸಿಗೆ ಮತ್ತೆ 300 ಎಲೆಕ್ಟ್ರಿಕ್ ಬಸ್ ಖರೀದಿ
* ಅಶೋಕಾ ಲೇಲ್ಯಾಂಡ್ ಕಂಪನಿಯಿಂದ ಗುತ್ತಿಗೆ
* ಪ್ರತಿ ಕಿ.ಮೀ.ಗೆ 48 ಒಪ್ಪಂದ
* ಹೊರ ವಲಯಗಳಲ್ಲಿ ಕಾರ್ಯಾಚರಣೆ
ಬೆಂಗಳೂರು(ಮೇ.24): ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮದಿಂದ (ಎನ್‌ಟಿಪಿಸಿ) ಗುತ್ತಿಗೆ ಪಡೆದಿರುವ 90 ವಿದ್ಯುತ್ ಬಸ್‌ಗಳು ಸಂಪೂರ್ಣವಾಗಿ ರಸ್ತೆಗಿಳಿಯುವ ಮುನ್ನವೇ ಅಶೋಕಾ ಲೇಲ್ಯಾಂಡ್ ಕಂಪೆನಿಯಿಂದ ಮತ್ತೆ 300 ವಿದ್ಯುತ್ ಬಸ್‌ಗಳ ಗುತ್ತಿಗೆ ಪಡೆಯಲು ಬಿಎಂಟಿಸಿ ನಿರ್ಧರಿಸಿದೆ.
ಅಶೋಕಾ ಲೇಲ್ಯಾಂಡ್ ಒದಗಿಸುತ್ತಿರುವ ಎಲ್ಲ ಬಸ್‌ಗಳಿಗೂ ಚಾಲಕರನ್ನು ಕಂಪನಿಯೇ ಒದಗಿಸಲಿದೆ. ಬಿಎಂಟಿಸಿಯಿಂದ ಕೇವಲ ನಿರ್ವಾಹಕರನ್ನು ನಿಯೋಜಿಸಲಿದೆ. ಈ ಬಸ್‌ಗಳು ಪ್ರತಿ ದಿನ 225 ಕಿಲೋಮೀಟರ್ ಕನಿಷ್ಟಪ್ರಯಾಣಿಸಿದರೆ ಮಾತ್ರ ಪ್ರತಿ ಕಿಲೋಮೀಟರ್‌ಗೆ 48 ರು.ಗಳಂತೆ ನೀಡುವುದಾಗಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಬಸ್‌ಗಳು ನಿಗದಿತ ಪ್ರಮಾಣಕ್ಕಿಂತ ಕಡಿಮೆ ದೂರ ಕ್ರಮಿಸಿದಲ್ಲಿ ಅಷ್ಟಕ್ಕೆ ಮಾತ್ರ ಹಣ ಸಂದಾಯ ಮಾಡುವಂತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅಷ್ಟೇ ಅಲ್ಲ ಈ ನಿಯಮದಂತೆ ಬಸ್‌ಗಳು ಕಾರ್ಯಚರಣೆ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ.
ಡೀಸೆಲ್ ಹೊರೆ: ಎಲೆಕ್ಟ್ರಿಕ್ ಬಸ್‌ಗಳತ್ತ ಬಿಎಂಟಿಸಿ ಚಿತ್ತ
ಹೊರ ವಲಯಗಳಲ್ಲಿ ಕಾರ್ಯಾಚರಣೆ
ಅಶೋಕಾ ಲೇಲ್ಯಾಂಡ್ ಕಂಪೆನಿಯ ಬಸ್‌ಗಳನ್ನು ನಗರದ ಹೊರ ವಲಯದ ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡುವುದಕ್ಕೆ ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಯಲಹಂಕ, ಬಿಡದಿ ಮತ್ತು ಅತ್ತಿಬೆಲೆ ಡಿಪೋಗಳಲ್ಲಿ ವಿದ್ಯುತ್ ಚಾರ್ಜಿಂಗ್ ಘಟಕಗಳನ್ನು ಪ್ರಾರಂಭಿಸಲಾಗುತ್ತಿದೆ. ಅದರ ವೆಚ್ಚವನ್ನು ಅಶೋಕಾ ಲೇಲ್ಯಾಂಡ್ ಕಂಪನಿಯೇ ಭರಿಸುತ್ತಿದೆ. ಕಂಪೆನಿಯ ವೈಫಲ್ಯದಿಂದ ಬಸ್‌ಗಳ ಸೂಕ್ತ ರೀತಿ ಸಂಚಾರ ಮಾಡದಿದ್ದಲ್ಲಿ ದಂಡ ವಿಧಿಸಲಾಗುವುದು ಎಂದು ಮುಖ್ಯ ಯಾಂತ್ರಿಕ ಎಂಜಿನಿಯರ್‌ಎಂ.ಎನ್. ಶ್ರೀನಿವಾಸ್ ಮಾಹಿತಿ ನೀಡಿದರು.