ಮಂಗಳೂರು (ಸೆ.08): ಪಶ್ಚಿಮ ಕರಾವಳಿಯಲ್ಲಿ ವಿಸ್ಮಯಕಾರಿ ರೀತಿಯಲ್ಲಿ ಮೀನುಗಾರ ಬಚಾವಾಗಿದ್ದಾರೆ. ಸುಮಾರು 36 ಗಂಟೆಗಳ ಕಾಲ  ಸಮುದ್ರದಲ್ಲಿ ಸಿಲುಕಿದ್ದ ವ್ಯಕ್ತಿ  ಕೊನೆಗೆ ಬಚಾವಾಗಿದ್ದಾರೆ. 

 ಮಂಗಳೂರು ಮೀನುಗಾರಿಕಾ ಬಂದರಿನ ಹೊರಟಿದ್ದ ಮೀನುಗಾರ ಉಳ್ಳಾಲದ ಹೊಯ್ಗೆ ಬಜಾರ್ ನಿವಾಸಿ ಸುನಿಲ್ ಡಿಸೋಜಾ ಇಂದು ಬೆಳಿಗ್ಗೆ 8.30 ಕ್ಕೆ ಸಮುದ್ರದಲ್ಲಿ ಪತ್ತೆಯಾಗಿದ್ದಾರೆ. 

ಭಾನುವಾರ ರಾತ್ರಿ  ಸಮುದ್ರ ಪಾಲಾಗಿದ್ದ ಸಣ್ಣ ದೋಣಿಯಲ್ಲಿ ಇದ್ದ ಅವರು ಆಳ ಸಮುದ್ರ ಬೋಟಿಗೆ ಸಣ್ಣ ದೋಣಿಯನ್ನು ಜೋಡಿಸಿಕೊಂಡು ತೆರಳಿದ್ದರು. 

ಕುಮಟಾ: ಮುಳುಗಿದ ಬೋಟ್‌, ಮೀನುಗಾರರ ರಕ್ಷಣೆ, ತಪ್ಪಿದ ಭಾರೀ ಅನಾಹುತ ..

ಬೋಟಿನಿಂದ ಪ್ರತ್ಯೇಕ ಗೊಂಡು ದೋಣಿ ಸಮುದ್ರಪಾಲಾಗಿದ್ದು, ಈ ದೋಣಿಯಲ್ಲಿ ಸುನಿಲ್ ಮಲಗಿದ್ದರು. ಅನ್ನ ಆಹಾರವಿಲ್ಕದೆ 36 ತಾಸು ಸಮುದ್ರದಲ್ಲೇ ಕಳೆದಿದ್ದ ಸುನಿಲ್.  ಇಂದು‌ ಮುಂಜಾನೆ‌ ಮಲ್ಪೆ ಮೀನುಗಾರರಿಗೆ ಸಿಕ್ಕಿದ್ದಾರೆ.  ಸಮುದ್ರ ದಲ್ಲಿ ತೇಲುತ್ತಿದ್ದ ದೋಣಿ ಯಿಂದ ಸುನಿಲ್ ರಕ್ಷಣೆ ಮಾಡಲಾಗಿದೆ.