ಗದಗ (ಜ.30): ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಅವರ ಪುತ್ರನ ಮದುವೆ ನಗರದಲ್ಲಿ ನೆರವೇರಿದೆ. ಗದಗ ನಗರದ ಗುಗ್ಗರಿ ಕುಟುಂಬದ ಜ್ಯೋತಿ ಅವರನ್ನು ದೊಡ್ಡಣ್ಣ ಅವರ ಸುಪುತ್ರ ಸುಗುರೇಶ ವರಿಸಿದ್ದಾರೆ. 

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಈ ಮದುವೆ ನಡೆದಿದೆ. ಮದುವೆಯಲ್ಲಿ ದೊಡ್ಡಣ್ಣ ಅವರ ಕುಟುಂಬಸ್ಥರು ಭಾಗಿಯಾಗಿದ್ದಾರೆ. ಮದುವೆ ಮನೆಯಲ್ಲಿ ಎರಡೂ ಕುಟುಂಬಗಳ ಸದಸ್ಯರು ಸಂತಸದಿಂದ ಪಾಲ್ಗೊಂಡಿದ್ದರು. 

ಬಾತ್‌ರೂಮಿನಲ್ಲಿ ಕೋಟಿ ಕೋಟಿ ಹಣ: ದೊಡ್ಡಣ್ಣ ಅಳಿಯ ಬಂಧನ

ಸ್ಯಾಂಡಲ್‌ವುಡ್‌ನ ಹಿರಿಯ ನಟ ದೊಡ್ಡನ ಅವರ ಪುತ್ರನ ಮದುವೆಯಲ್ಲಿ ನಟಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರಿಷ್ ಹಾಗೂ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ ಸೇರಿ ನಾಡಿನ ವಿವಿಧ ಮಠಾಧೀಶರು, ಚಲನಚಿತ್ರ ನಟರು, ಗಣ್ಯರು ಪಾಲ್ಗೊಂಡಿದ್ದರು. 

"

ಜನವರಿ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಬಗ್ಗೆ ಮಾತನಾಡಿದ  ದೊಡ್ಡಣ್ಣ, ನನ್ನ ಮಗನ ಮದುವೆ ಬಹಳ ಸಿಂಪಲ್ ಆಗಿ ಮಾಡಿದ್ದೇವೆ. ಉತ್ತರ ಕರ್ನಾಟಕದ ಜನರು ಹೃದಯವಂತರು, ಅವರ ಮಾತು ಸಿಹಿ. ಹೀಗಾಗಿ ಇಲ್ಲಿಯೇ ಮದುವೆ ಮಾಡಲಾಗಿದೆ. ಈ ಭಾಗದ ಹೆಣ್ಣು ಮಗಳು ನಮ್ಮ ನಮೆ ಬೆಳಗೋಕೆ ಬಂದಿರುವುದು ನನಗೆ ಸಂತಸ ತಂದಿದೆ ಎಂದು ಹೆಳಿದ್ಧಾರೆ. 

ಮಾಹಿತಿ ಬಿಟ್ಟುಕೊಡದ ಪಾಲಕರು

ಗದಗನಲ್ಲಿ ವ್ಯಾಪಾರಸ್ಥರಾಗಿರುವ ಹಾಗೂ ಹಲವು ಉದ್ದಿಮೆಗಳನ್ನು ನಡೆಸುತ್ತಿರುವ ಅಂದಾನಪ್ಪ ಗುಗ್ಗರಿ ಅವರ ಪುತ್ರಿ ಜ್ಯೋತಿಯೊಂದಿಗೆ, ದೊಡ್ಡಣ್ಣ ಅವರ ಪುತ್ರ ಸುಗುರೇಶ್ ಅವರ ವಿವಾಹ ನೆರವೇರಿತು. ಇದು ಪ್ರೇಮ ವಿವಾಹವೋ ಅಥವಾ ಹಿರಿಯ ನಿಶ್ಚಯಿಸಿದ ವಿವಾಹವೋ ಎನ್ನುವ ಗುಟ್ಟನ್ನು ಮಾತ್ರ ಕುಟುಂಬಸ್ಥರು ಬಿಟ್ಟುಕೊಟ್ಟಿಲ್ಲ. ಗುರುವಾರ ಮದುವೆ ಪ್ರಾರಂಭವಾಗುವವರೆಗೂ ಗದಗನಲ್ಲಿಯೇ ದೊಡ್ಡಣ್ಣ ಅವರ ಮಗನ ಮದುವೆ ನಡೆಯುತ್ತದೆ ಎನ್ನುವುದು ಕೂಡ ಯಾರಿಗೂ ಗೊತ್ತಿರಲಿಲ್ಲ. ಅಷ್ಟೊಂದು ಸರಳವಾಗಿ ಮದುವೆಯನ್ನು ಹಿರಿಯ ನಟ ದೊಡ್ಡಣ್ಣ ನೆರವೇರಿಸಿದ್ದು, ಗದಗ ನಗರದಲ್ಲಿ ಕಲಾವಿದ ಕುಟುಂಬದ ಮದುವೆ ನಡೆದಿರುವುದು ಇದೇ ಮೊದಲ ಬಾರಿಗೆ ಎನ್ನುವುದು ಗಮನಾರ್ಹ ಸಂಗತಿಯಾಗಿದೆ.