ಕೊಪ್ಪಳ: ಆಕಸ್ಮಿಕ ಬೆಂಕಿ; 20 ಲಕ್ಷ ರೂ. ಮೌಲ್ಯದ 4 ಎಕರೆ ತೋಟಗಾರಿಕೆ ಬೆಳೆ ನಾಶ
ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ನಾಲ್ಕು ಎಕರೆ ತೋಟಗಾರಿಕೆ ಬೆಳೆ ಸುಟ್ಟು ಭಸ್ಮವಾದ ಘಟನೆ ಕುಷ್ಟಗಿ ತಾಲೂಕಿನ ಎಂ ಬಸಾಪುರ ಬಳಿ ನಡೆದಿದೆ. ಇಲಕಲ್ ಮೂಲದ ಚನ್ನಬಸಪ್ಪ ಲೆಕ್ಕಿಹಾಳ, ಮನೋಹರ್‌ಗೆ ಸೇರಿದ್ದ ತೋಟ, ಸುಟ್ಟುಭಸ್ಮವಾಗಿರುವ ತೋಟವನ್ನು ಕಂಡು ಕಂಗಾಲಾಗಿರುವ ರೈತ ಚನ್ನಬಸಪ್ಪ.
ಕೊಪ್ಪಳ (ಫೆ.12) : ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ನಾಲ್ಕು ಎಕರೆ ತೋಟಗಾರಿಕೆ ಬೆಳೆ ಸುಟ್ಟು ಭಸ್ಮವಾದ ಘಟನೆ ಕುಷ್ಟಗಿ ತಾಲೂಕಿನ ಎಂ ಬಸಾಪುರ ಬಳಿ ನಡೆದಿದೆ.
ಇಲಕಲ್ ಮೂಲದ ಚನ್ನಬಸಪ್ಪ ಲೆಕ್ಕಿಹಾಳ(Channabasappa lekkihal), ಮನೋಹರ ಕರವಾ ಎಂಬುವವರಿಗೆ ಸೇರಿದ್ದ ತೋಟ. ನಾಲ್ಕು ಎಕರೆ ತೋಟದಲ್ಲಿ ಸುಮಾರು 20 ಲಕ್ಷ ರೂ ಮೌಲ್ಯದ ಹೆಬ್ಬೇವು(Hebbevu),ಮಹಾಗನಿ(Mahagani), ಸಪೋಟಾ, ಮಿಡಿಮಾವು ಬೆಳೆಲಾಗಿತ್ತು. ಕಟಾವಿಗೆ ಬಂದಿದ್ದ ಸಪೋಟಾ ಹಾಗೂ ಮಿಡಿಮಾವು ಬೆಂಕಿಗೆ ಸಂಪೂರ್ಣ ನಾಶವಾಗಿದೆ. ತೋಟಕ್ಕೆ ಬೆಂಕಿ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ಆತಂಕಕ್ಕೆ ಒಳಗಾದ ರೈತ. ಅಪಾರ ಪ್ರಮಾಣದ ಬೆಳೆನಾಶದಿಂದ ಕಂಗಾಲಾಗಿರುವ ರೈತ ಚನ್ನಬಸಪ್ಪ.
Gadag: ಅನ್ನದಾತ ಬಾಳಲ್ಲಿ ಬಂಗಾರವಾಗಬೇಕಿದ್ದ ಬಾಳೆ ಬೆಂಕಿಗಾಹುತಿ!
ಬೆಂಕಿ ಕಿಡಿಗೇಡಿಗಳು ಹಚ್ಚಿದ್ದ, ಆಕಸ್ಮಿಕ ತಗುಲಿದ್ದ ಎಂಬ ಬಗ್ಗೆ ತಿಳಿದಿಲ್ಲ. ತೋಟಕ್ಕೆ ಬೆಂಕಿ ಬಿದ್ದ ಘಟನೆ ಬಳಿಕ ಅಗ್ನಿಶಾಮಕ್ಕೆ ಕರೆದ ಮಾಡಿರುವ ಚನ್ನಬಸಪ್ಪ. ತೋಟದ ಬದುವಿಗುಂಟ ವ್ಯಾಪಿಸಿದ್ದ ಬೆಂಕಿ. ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆಯಿತಾದರೂ ವ್ಯಾಪಕವಾಗಿ ಬೆಂಕಿ ತಗುಲಿದ್ದರಿಂದ ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ವಿಫಲವಾಗಿ ತೋಟ ಸುಟ್ಟು ಭಸ್ಮವಾಗಿದೆ.
ಬಾಳೆ ತೋಟ, ಬಣವಿಗೆ ಆಕಸ್ಮಿಕ ಬೆಂಕಿ
ಮುಂಡಗೋಡ: ತಾಲೂಕಿನ ಕರಗಿನಕೊಪ್ಪ ಗ್ರಾಮದಲ್ಲಿ ಶನಿವಾರ ಸಂಜೆ ಬಾಳೆ ತೋಟ ಮತ್ತು ಹುಲ್ಲಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರು. ಹಾನಿ ಸಂಭವಿಸಿದೆ. ಶಿವಕ್ಕ ಈಶ್ವರ ಲಮಾಣಿ ಹಾಗೂ ಲಕ್ಷ್ಮಣ ಶಿವಪ್ಪ ಲಮಾಣಿ ಎಂಬವರಿಗೆ 2 ಎಕರೆ ಬಾಳೆ ತೋಟ ಮತ್ತು ಭತ್ತದ ಬಣವೆಗೆ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ.
ಮಗುವಿನಂತೆ ಬೆಳೆಸಿದ್ದ ದ್ರಾಕ್ಷಿ ಬೆಳೆಗೆ ತಪ್ಪು ಔಷಧ ಸಿಂಪಡಣೆ: ಬೆಳೆ ನಾಶಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ರೈತ
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಮುಂಡಗೋಡ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದು, ಆಗಬಹುದಾದ ಮತ್ತಷ್ಟುಹಾನಿ ತಪ್ಪಿಸಿದ್ದಾರೆ. ಪ್ರಭಾರಿ ಅಗ್ನಿಶಾಮಕ ಠಾಣಾಧಿಕಾರಿ ಚಂದ್ರಪ್ಪ ಲಮಾಣಿ, ಅಡಿವೆಪ್ಪ ಕುರುವಿನಕೊಪ್ಪ, ಸೋಮಶೇಖರ ಜೀವಣ್ಣವರ, ರಾಜೇಶ ಸವಣೂರ ಹಾಗೂ ವಿಷ್ಣು ಗುಲ್ಯಾನವರ ಅಗ್ನಿ ನಂದಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.