ಶಿರಸಿ (ಮಾ.09)  : ಮಾರಿಕಾಂಬಾ ದೇವಿ ಜಾತ್ರೆಯಲ್ಲಿ ಹಾಕಲಾಗಿದ್ದ ಬಾವಿಯಲ್ಲಿ ಸಾಹಸ ಪ್ರದರ್ಶನದಲ್ಲಿ ಅವಘಡವೊಂದು ನಡೆದಿದೆ. 

ಕಳೆದ ಶನಿವಾರ ರಾತ್ರಿ ನಗರದ ಕೋಣನಬಿಡಕಿಯಲ್ಲಿ ಹಾಕಲಾಗಿದ್ದ ಬಾವಿಯಲ್ಲಿ ಕಾರ್ ಬೈಕ್ ರೇಸ್ ಶೋದಲ್ಲಿ ಕಾರೊಂದರ ಎಂಜಿನ್ ಸಮಸ್ಯೆಯಿಂದ ಇನ್ನೊಂದು ಕಾರಿಗೆ ತಗುಲಿ ನಿಂತು ಪಕ್ಕದ ಕಾರಿಗೆ ಬಡಿದು ಅಲ್ಲೇ ಮಗುಚಿ ಬಿದ್ದಿದೆ.

ಶಿರಸಿ ಜಾತ್ರೆಗೆ ಹೋಗೋಣ ಬಾ...ಜನಸಾಗರ ಅಂದ್ರೆ ಇದೆ ತಾನೆ!

ಕಾರು ಚಾಲಕನ ಮೇಲೆ ಬಿದ್ದರೂ ಆತ ಹಾಗೂ ಅವನ ಪಕ್ಕದಲ್ಲಿ ಕುಳಿತ ಇನ್ನೊಬ್ಬರಿಗೆ ಯಾವುದೇ ತೊಂದರೆ ಆಗಿಲ್ಲ. ಈ ಘಟನೆಯಲ್ಲಿ ಇನ್ನೊಂದು ಕಾರಿನ ಚಾಲಕನ ಚಾಕಚಕ್ಯತೆಯಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. 

ಬಳಿಕ ಬಾವಿಯಲ್ಲಿ ರೇಸ್ ಶೋ ಮುಂದುವರಿಸಲಾಗಿದೆ.