ಬೆಂಗಳೂರು, [ಜ. 08]  ವಿಧಾನಸೌಧದಲ್ಲಿ ಸಿಕ್ಕ 25.76 ಲಕ್ಷ ರೂ. ಹಣ ಪ್ರಕರಣದ ತನಿಖೆಯನ್ನು ಎಸಿಬಿ ಚುರುಕುಗೊಳಿಸದ್ದು, ಸಚಿವ ಪುಟ್ಟರಂಗಶೆಟ್ಟಿ ಕಚೇರಿ ಸಿಬ್ಬಂದಿ ಮೋಹನ್ ಅವರನ್ನು ಎಸಿಬಿ ಅರೆಸ್ಟ್ ಮಾಡಿದೆ.

ಎಸಿಬಿ ಅಧಿಕಾರಿ ಇಂದು [ಮಂಗಳವಾರ] ಸಂಜೆ ಮೋಹನ್ನನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದು, ಹೀಗಾಗಲೇ ಹಲವರ ಹೆಸರು ಬಾಯ್ಬಿಟ್ಟಿದ್ದಾನೆ.

ಮಾಜಿ ಸಿಎಂ ಆಪ್ತ ಸಚಿವರ ಸಿಬ್ಬಂದಿ ಬಳಿ ವಿಧಾನಸೌಧದಲ್ಲೆ ಲಕ್ಷಗಟ್ಟಲೆ ಹಣ ಪತ್ತೆ

ಮೋಹನ್ ಬಂಧನ ನಂತರ ಪುಟ್ಟರಂಗಶೆಟ್ಟಿ ಎದೆಯಲ್ಲಿ ಢವಢವ ಶುರುವಾಗಿದ್ದು, ಸದ್ಯದಲ್ಲೇ ಎಸಿಬಿ ತನಿಖೆ ಸಚಿವರ ಬುಡಕ್ಕೆ ಬರುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ.

ನಾಳೆ ಅಂದ್ರೆ ಬುಧವಾರ ಎಸಿಬಿ ಅಧಿಕಾರಿಗಳು ಮೋಹನ್ ಅವರನ್ನು ಕೋರ್ಟ್ ಮುಂದೆ ಹಾಜರು ಪಡಿಸಿ ತಮ್ಮ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಮೇಲ್ನೋಟಕ್ಕೆ ಭ್ರಷ್ಟಾಚಾರದಿಂದ ಹಣ ಸಂಗ್ರಹಣೆ ಎಂಬುದು ಸಾಬೀತಾಗಿದ್ದು, ಇದ್ರಿಂದ ಪ್ರಕರಣದ ತನಿಖೆಯನ್ನು ಎಸಿಬಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ.