ಉಡುಪಿ(ಜೂ.10): ರಾಯಚೂರಿನಲ್ಲಿ ಕ್ವಾರಂಟೈನ್‌ನಲ್ಲಿದ್ದ ಗರ್ಭಿಣಿಗೆ ಗರ್ಭಪಾತ ನಡೆದಿರುವುದಕ್ಕೆ ವೈದ್ಯರ ಕರ್ತವ್ಯಲೋಪವೇ ಕಾರಣ ಎಂದು ತಿಳಿದು ಬಂದಿದೆ. ಆದ್ದರಿಂದ ಆ ವೈದ್ಯರನ್ನು ಅಮಾನತುಗೊಳಿಸುವಂತೆ ಅಲ್ಲಿನ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಈ ಕುರಿತು ಬೆಳಗ್ಗೆ ‘ಸುವರ್ಣ ನ್ಯೂಸ್‌’ ನೋಡಿ ವಿಚಾರ ತಿಳಿದುಕೊಂಡೆ, ರಾಯಚೂರಿನ ಆರೋಗ್ಯಾಧಿಕಾರಿಯಿಂದ ಮಾಹಿತಿ ಪಡೆದಿದ್ದೇನೆ. ಆಕೆಗೆ ಪಿಟ್ಸ್‌ ಬಂದಿತ್ತು. ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ದಕ್ಷಿಣ ಕನ್ನಡದಲ್ಲಿ ದ್ವಿಶತಕ ದಾಟಿದ ಸೋಂಕಿತರ ಸಂಖ್ಯೆ

ಆದರೆ ತಡವಾಗಿ ಚಿಕಿತ್ಸೆ ನೀಡಿದ ಕಾರಣಕ್ಕೆ ಅಕೆಯ ಗರ್ಭಪಾತವಾಗಿದೆ. ಕ್ವಾರಂಟೈನ್‌ ಅಥವಾ ಕಂಟೈನ್ಮೆಂಟ್‌ನಲ್ಲಿರುವ ಗರ್ಭಿಣಿಯರ ಕಾಳಜಿಯನ್ನು ಸರ್ಕಾರ ವಹಿಸಲಿದೆ. ಇಂತಹ ಪ್ರಕರಣ ಮರುಕಳಿಸದಂತೆ ಕ್ರಮ ಕೈಗೊಳ್ಳುತ್ತೇವೆ. ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಗಳಲ್ಲಿ 24 ಗಂಟೆ ಪರೀಕ್ಷೆಗೆ ವೈದ್ಯರ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.