ಬೆಂಗಳೂರಿನಲ್ಲಿ ಮತ್ತೊಮ್ಮೆ ಕಸದ ನಿರ್ವಹಣೆ ವಿರುದ್ದ ಪ್ರತಿಭಟನೆ
ಚಿಕ್ಕನಾಗಮಂಗಲ ಕಸ ಸಂಸ್ಕರಣ ಘಟಕದ ಎದುರು ಆಮ್ ಆದ್ಮಿ ಪಾರ್ಟಿ ವತಿಯಿಂದ ಪ್ರತಿಭಟನೆ ನಡೆಸಿದರು. ಕಸ ಸಂಸ್ಕರಣೆ ಹೆಸರಿನಲ್ಲಿ ಕೋಟಿಗಟ್ಟಲೆ ಅವ್ಯವಹಾರ ನಡೆಯುತ್ತಿದೆ. ಗ್ರಾಮದ ಜನರು ಕಸದ ವಾಸನೆಯಿಂದ ಈ ಭಾಗದಲ್ಲಿ ವಾಸ ಮಾಡಲು ಸಾಧ್ಯ ಆಗದ ಪರಿಸ್ಥಿತಿ ಎದುರಾಗಿದೆಯೆಂದು ಎಎಪಿ ಮುಖಂಡ ಮೋಹನ್ ದಾಸ್ ಕಿಡಿ ಕಾರಿದರು.
ವರದಿ: ಟಿ.ಮಂಜುನಾಥ, ಹೆಬ್ಬಗೋಡಿ, ಏಷ್ಯಾನೆಟ್ ಸುವರ್ಣನ್ಯೂಸ್
ಬೆಂಗಳೂರು (ಡಿ.20): ಬೆಂಗಳೂರು ಹೈಟೆಕ್ ಸಿಟಿ, ಐಟಿ ಬಿಟಿ ಸಿಟಿ ಆದ್ರೇ ಕಸ ನಿರ್ವಹಣೆಯಲ್ಲಿ ಕಳಪೆಯೆನಿಸಿಕೊಂಡು ಬೆಂಗಳೂರು ಬ್ರ್ಯಾಂಡ್ ಗೆ ಕಪ್ಪು ಚುಕ್ಕೆಯಾಗಿತ್ತು, ಆಗ ಕಸವನ್ನು ಕರಗಿಸಲು ಹೈಟೆಕ್ ಕಸ ಸಂಸ್ಕರಣ ಘಟಕಗಳನ್ನ ಬೆಂಗಳೂರು ಸುತ್ತಮುತ್ತಲೂ ನಿರ್ಮಾಣ ಮಾಡಿದರು, ಆದರೆ ಅದ್ಯಾಕೋ ಇತ್ತೀಚೆಗೆ ಅಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪದೇಪದೇ ಸ್ಥಳಿಯರಿಗೆ ತೊಂದರೆಗಳಾಗುತ್ತಿದ್ದ ಪ್ರತಿಭಟನೆ ಗಲಾಟೆಗಳು ನಡೆಯುತ್ತಲೇ ಇದೆ ಹಾಗಾದ್ರೆ ಯಾವ ಪ್ಲಾಂಟ್ ನಲ್ಲಿ ಅಂತೀರಾ ಈ ಸ್ಟೋರಿ ನೋಡಿ.
ಒಂದು ಕಾಲದಲ್ಲಿ ಹಸುಗಳು ನೀರು ಕುಡಿಯುತ್ತಿದ್ದ ಕುಂಟೆ ಇಂದು ಅಕ್ಷರಶಃ ವಿಷಯುಕ್ತ ಮಲೀನ ಕುಂಟೆಯಾಗಿದೆ, ಈ ಕಲುಷಿತ ನೀರನ್ನು ತೋರಿಸುತ್ತಾ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿರಲು ಕಾರಣವೇ ಬೆಂಗಳೂರು ಕಸವನ್ನು ಸಂಸ್ಕರಣೆ ಮಾಡುವ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಚಿಕ್ಕನಾಗಮಂಗಲ ಕಸ ಸಂಸ್ಕರಣ ಘಟಕದ ಅಧಿಕಾರಿಗಳ ಬೇಜವಾಬ್ದಾರಿ, ಅದೆಷ್ಟೇ ಬಾರಿ ಪ್ರತಿಭಟನೆ ನಡೆಸಿದರು ತಲೆಕೆಡಿಸಿಕೊಳ್ಳದ ಇಲ್ಲಿನ ಅಧಿಕಾರಿಗಳ ವಿರುದ್ಧ ಇಂದು ಚಿಕ್ಕನಾಗಮಂಗಲ ಕಸ ಸಂಸ್ಕರಣ ಘಟಕದ ಎದುರು ಆಮ್ ಆದ್ಮಿ ಪಾರ್ಟಿ ವತಿಯಿಂದ ಪ್ರತಿಭಟನೆ ನಡೆಸಿದರು. ಕಸ ಸಂಸ್ಕರಣೆ ಹೆಸರಿನಲ್ಲಿ ಕೋಟಿಗಟ್ಟಲೆ ಅವ್ಯವಹಾರ ನಡೆಯುತ್ತಿದೆ. ಗ್ರಾಮದ ಜನರು ಕಸದ ವಾಸನೆಯಿಂದ ಈ ಭಾಗದಲ್ಲಿ ವಾಸ ಮಾಡಲು ಸಾಧ್ಯ ಆಗದ ಪರಿಸ್ಥಿತಿ ಎದುರಾಗಿದೆಯೆಂದು ಎಎಪಿ ಮುಖಂಡ ಮೋಹನ್ ದಾಸ್ ಕಿಡಿ ಕಾರಿದರು.
ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ನೋಡಲ್ ಅಧಿಕಾರಿಯ ನೇಮಕ
ಚಿಕ್ಕನಾಗಮಂಗಲ ವ್ಯಾಪ್ತಿಯಲ್ಲಿನ ಕೆರೆ ಕುಂಟೆಗಳಿಗೆ ಕಲುಷಿತ ನೀರು ಹರಿಯುತ್ತಿದೆ ಇಲ್ಲಿನ ಅಧಿಕಾರಿಗಳನ್ನು ಕೇಳಿದರೆ ಉಡಾಫೆ ಉತ್ತರವನ್ನು ನೀಡುತ್ತಾರೆ, ಸ್ಥಳೀಯವಾಗಿ ಜನ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಇಷ್ಟಾದರೂ ಸಹ ಇಲ್ಲಿನ ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದು ಇಲ್ಲಿ ಕೆಲಸ ಮಾಡುವ ವ್ಯವಸ್ಥಾಪಕರು ಹಾಗೂ ನಿರ್ದೇಶಕರುಗಳು ಇಲ್ಲೇ ಮನೆ ಮಾಡಿಕೊಂಡು ಸ್ಥಳೀಯರ ಕಷ್ಟ ಏನು ಎನ್ನುವುದು ಅರ್ಥ ಆಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಬಿಎಂಪಿ ಕಸದ ಪ್ಲಾಂಟ್ ಎದುರು ಎಎಪಿ ಪಕ್ಷದ ಮುಖಂಡರು ಪ್ರತಿಭಟನೆ ಮಾಡಿದ ಎಎಪಿ ತಾಲೂಕು ಅಧ್ಯಕ್ಷ ಮುನೇಶ್ ಆಕ್ರೋಶ ವ್ಯಕ್ತಪಡಿಸಿದರು.
Road Patholes: ಹೊಸ ವರ್ಷಕ್ಕೆ Bengaluru city ಗುಂಡಿ ಮುಕ್ತ!
ಪ್ರತಿಭಟನಾ ಸ್ಥಳಕ್ಕೆ ಬಿಬಿಎಂಪಿ ಕಮಿಷನರ್ ಬರಬೇಕು ಎಂದು ಕೊಟ್ಟು ಹಿಡಿದಾಗ ಸ್ಥಳಕ್ಕೆ ಆಗಮಿಸಿದ ಘಟಕದ ಪ್ಲಾಂಟ್ ವ್ಯವಸ್ಥಾಪಕ ವಿಶ್ವನಾಥ್ ಆದಷ್ಟು ಬೇಗ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಪ್ರತಿಭಟನೆ ಮಾಡುತ್ತಿರುವವರು ನೀಡಿರುವ ಮನವಿ ಪತ್ರದಲ್ಲಿರುವ ಸಮಸ್ಯೆಗಳ ಬಗ್ಗೆ ನಿವಾರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ, ಆದರೆ ಎಷ್ಟರ ಮಟ್ಟಿಗೆ ಇದು ಪರಿಹಾರ ಆಗುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.