ಕೊಡಗು ಹಾಸನ ಗಡಿ ಗ್ರಾಮದಲ್ಲಿ ಕಳೆಗಟ್ಟಿದ ಜಾನಪದ ಕಲಾರಂಗು: ಕುಣಿದು ಕುಪ್ಪಳಿಸಿದ ಜನರು

ಕೊಡಗು ಹಾಗೂ ಹಾಸನ ಜಿಲ್ಲೆಗಳ ಗಡಿ ಗ್ರಾಮದಲ್ಲಿ ಜಾನಪದ ಲೋಕವೇ ಅನಾವರಣಗೊಂಡಂತೆ ಇತ್ತು. ರಾಜ್ಯದ ಹಲವು ಭಾಗಗಳಿಂದ ಆಗಮಿಸಿದ ಜಾನಪದ ಕಲಾ ತಂಡಗಳು ಕಲಾ ಪ್ರದರ್ಶನ ನೀಡಿ ನೋಡುಗರ ಮನಸೂರೆಗೊಂಡವು. 

A weedy folk art scene in the border village of Kodagu gvd

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್,  ಕೊಡಗು

ಕೊಡಗು (ಮಾ.20): ಕೊಡಗು ಹಾಗೂ ಹಾಸನ ಜಿಲ್ಲೆಗಳ ಗಡಿ ಗ್ರಾಮದಲ್ಲಿ ಜಾನಪದ ಲೋಕವೇ ಅನಾವರಣಗೊಂಡಂತೆ ಇತ್ತು. ರಾಜ್ಯದ ಹಲವು ಭಾಗಗಳಿಂದ ಆಗಮಿಸಿದ ಜಾನಪದ ಕಲಾ ತಂಡಗಳು ಕಲಾ ಪ್ರದರ್ಶನ ನೀಡಿ ನೋಡುಗರ ಮನಸೂರೆಗೊಂಡವು. ಅತ್ತಿಗನಹಳ್ಳಿ ಸುರೇಶ್ ತಂಡದ ಸುಗ್ಗಿ ಕುಣಿತ, ಚಿಕ್ಕಲ್ಲೂರು ಕೊಮಾರಯ್ಯ ತಂಡದ ಕುಣಿಮಿಣಿ ವಾದ್ಯ, ಕೊಡಗಿನ ಉಮ್ಮತ್ತಾಟ್, ಹಾಸನದ ಟಿ.ಎಸ್.ಲಕ್ಷ್ಮಣ್ ತಂಡದ ಡೊಳ್ಳು ಕುಣಿತ, ಅರಕಲಗೂಡು ಪ್ರದೀಪ್ ವೃಂದದವರ ಕಂಸಾಳೆ ನೃತ್ಯ, ಬೀಕನಹಳ್ಳಿ ಕೆಂಪೇಗೌಡ ತಂಡದ ಕೋಲಾಟ, ಯಡಕೆರೆ ದೇವರಾಜ್ ಅವರ ತಂಬೂರಿ ಪದ, ಪನ್ನಸಮುದ್ರ ಕೊಮಾರಯ್ಯ ತಂಡದ ಚಿಟ್ಟಿಮೇಳ.

ರಾಜಗೆರೆ ಶಿವಣ್ಣ ತಂಡದವರ ಕರಗ ನೃತ್ಯ, ರಾಜಗೆರೆ ಶಿವಮ್ಮ ತಂಡದ ಸೋಮನ ಕುಣಿತ, ನವೀನ್ ತಂಡದ ವೀರಗಾಸೆ, ದಾವಣಗೆರೆ ಶ್ರುತಿ ತಂಡದ ಲಂಬಾಣಿ ನೃತ್ಯ, ಪೂಜಾ ಯುವತಿ ಮಂಡಳಿಯ ಕೋಲಾಟ, ಗಂಧರ್ವ ಯುವಕ ಸಂಘದ ಗೀಗೀ ಪದ ಹಾಗೂ ಗೌಡಳ್ಳಿ ಚಂದ್ರಕಲಾ ತಂಡದವರಿಂದ ರಾಗಿ ಬೀಸುವ ಪದ ಮುಂತಾದ ಹತ್ತಾರು ಜಾನಪದ ಕಲೆಗಳು ಪ್ರದರ್ಶನಗೊಂಡವು. ಪ್ರತಿಭಾನ್ವಿತ ಕಲಾವಿದರು ಜನಪದ ಗೀತೆಗಳನ್ನು ಹಾಡಿದರು. ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎಚ್.ಕೆ.ಕುಮಾರಸ್ವಾಮಿ ಜೀವನ ಜಂಜಾಟ, ನಿತ್ಯದ ಸಂಕಷ್ಟದ ನಡುವೆಯೂ ಮಲೆನಾಡಿಗರು ತಮ್ಮ ಮೂಲ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುತ್ತಿರುವುದಕ್ಕೆ ಮಹಿಳೆಯರೇ ಮುಖ್ಯ ಕಾರಣ ಎಂದು ಹೇಳಿದರು.

ಸಿದ್ದರಾಮಯ್ಯ ಗೆದ್ದ ಕ್ಷೇತ್ರಕ್ಕೆ ಒಳ್ಳೆಯದನ್ನ ಮಾಡಲಿ: ಸಚಿವ ಮುರುಗೇಶ್‌ ನಿರಾಣಿ

ಸೋಮವಾರಪೇಟೆ ತಾಲ್ಲೂಕಿನ ಈಚಲಬೀಡು ಗ್ರಾಮದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಮತ್ತು ಮಲೆನಾಡು ಜಾನಪದ ಉತ್ಸವ ಸಮಿತಿ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಮಲೆನಾಡು ಜಾನಪದ ಉತ್ಸವವನ್ನು ಮೊರದಲ್ಲಿ ಭತ್ತ ಸುರಿದು ದೀಪ ಬೆಳಗಿಸುವ ಮೂಲಕ ರಾಶಿ ಪೂಜೆ ಸಲ್ಲಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಇನ್ನೊಬ್ಬರನ್ನು ತಿದ್ದುವ ಬದಲು ನಾವು ತಿದ್ದಿಕೊಳ್ಳೋಣ ಎಂಬ ಸತ್ಯವನ್ನು ಅರಿತು ಜನಪದ ಕಲೆಗಳನ್ನು ಉಳಿಸುವ ಕೆಲಸ ಮಾಡಬೇಕಿದೆ. ತನ್ನದೇ ಶ್ರೇಷ್ಠತೆ, ಪಾವಿತ್ರತ್ಯೆ ಹೊಂದಿರುವ ಜನಪದ ಕಲೆಗಳಿಗೆ ಸರಿಸಾಟಿ ಇಲ್ಲ. ಅದೇ ನಮ್ಮ ನಾಡಿನ ಮಣ್ಣಿನ ಗುಣ. ನುಡಿ, ನಡೆ ಮಾತ್ರವಲ್ಲದೇ ಕಲಾ ಪ್ರಾವಿಣ್ಯತೆಯಲ್ಲಿ ಜಾನಪದ ಸದಾ ಕಾಲ ಹಸಿರಾಗಿರುತ್ತದೆ. 

ಆದರೆ ಅವುಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಪ್ರಯತ್ನಗಳು ಹೆಚ್ಚಾಗಬೇಕು ಎಂದರು. ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಹಿ.ಶಿ.ರಾಮಚಂದೇಗೌಡ ಮಾತನಾಡಿ, ಭದ್ರತೆ ನೀಡದ ನಾಗರಿಕತೆಗಿಂತ ಶತಮಾನಗಳಿಂದ ನಡೆದು ಬಂದಿರುವ ಜಾನಪದ ಸಂಸ್ಕೃತಿ ವಿಭಿನ್ನವಾಗಿದ್ದು ಮಹಿಳೆಯರಿಂದ ಅದು ಇನ್ನೂ ಉಳಿದಿದೆ. ಶಾಂತಿ, ಸೌಹಾರ್ದತೆ ಅವರಲ್ಲಿ ನೆಲೆಯಾಗಿರುವುದೇ ಅದಕ್ಕೆ ಕಾರಣ. ಇದರ ಜತೆಗೆ ಜಗತ್ತನ್ನೇ ಆವರಿಸಿರುವ ಕಾರ್ಪೋರೇಟ್ ಸಂಸ್ಥೆಗಳು ಮುಂದಿನ ದಿನಗಳಲ್ಲಿ ಕೃಷಿ ರಂಗಕ್ಕೂ ಕಾಲಿಟ್ಟರೆ ರೈತರ ಸ್ಥಿತಿ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದನ್ನು ಈಗಿನಿಂದಲೇ ಆಲೋಚಿಸಬೇಕು ಎಂದು ಆತಂಕ ವ್ಯಕ್ತಪಡಿಸಿದರು.

ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಮಾತನಾಡಿ, ಭತ್ತ ಬೆಳೆಯುವ ಪ್ರಮಾಣ ಕಡಿಮೆಯಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ದೇಶದಲ್ಲಿ ಆಹಾರದ ಕೊರತೆ ಎದುರಿಸಬೇಕಾಗುತ್ತದೆ. ಈಗಾಗಲೇ ಚೀನಾದಿಂದ ಪ್ಲಾಸ್ಟಿಕ್ ಅಕ್ಕಿ ಲಗ್ಗೆ ಇಡುತ್ತಿದ್ದು ಮತ್ತಷ್ಟು ಆತಂಕ ಎದುರಿಸಬೇಕಾಗುತ್ತದೆ. ರೈತರು ತಾವು ಮಾಡುವ ಕೆಲಸಗಳ ಬಗ್ಗೆ ಕೀಳರಿಮೆ ಪಡಬಾರದು. ಅದು ಅತ್ಯಂತ ಶ್ರೇಷ್ಠ ಕಾಯಕ ಎಂಬುದನ್ನು ನಂಬಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಶ್ರದ್ಧೆಯಿಂದ ಕೃಷಿ ಕೈಗೊಂಡರೆ ಯಶಸ್ಸು ಖಂಡಿತ ಸಿಕ್ಕೇ ಸಿಗುತ್ತದೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ಸಂಸ್ಕೃತಿ ಕಲಿಸುವ ಜಾನಪದವನ್ನು ಉಳಿಸಿದರೆ ಮಾತ್ರ ನಮ್ಮ ಮಣ್ಣಿನ ಸೊಗಡನ್ನು ಉಳಿಸಲು ಸಾಧ್ಯ. ಜನಪದ ಕಲೆ, ಸಂಸ್ಕೃತಿ ಉಳಿಸುವ ಕೆಲಸಗಳನ್ನು ಸರ್ಕಾರ ಮಾಡಬೇಕು. ಆ ಕೆಲಸವನ್ನು  ಎಚ್.ಎಲ್. ನಾಗೇಗೌಡರು ಮಾಡಲು ಮುಂದಾಗಿ, ಸ್ನೇಹಿತರು ಕೊಟ್ಟ ಧನ ಸಹಾಯ ಬಳಸಿ 1979 ರಲ್ಲಿ ಜಾನಪದ ಪರಿಷತ್ತು ಸ್ಥಾಪಿಸಿದ್ದರು. ಇಂತಹ ಮನಸ್ಥಿತಿ ಹಳ್ಳಿ ಹಳ್ಳಿಗಳಲ್ಲೂ ಮೂಡಬೇಕು. ಶಿಸ್ತು, ಜೀವನ ಮೌಲ್ಯ, ಸಂಸ್ಕೃತಿ ಸೇರಿ ಎಲ್ಲವನ್ನೂ ಕಲಿಸುವ ನಮ್ಮ ಜನಪದ ಅಳಿವಿಲ್ಲದಂತೆ ಮುನ್ನಡೆಯಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಜಾನಪದ ಪರಿಷ್ತ ಹಾಸನ ಜಿಲ್ಲಾಧ್ಯಕ್ಷ ಡಾ. ಹಂಪನಹಳ್ಳಿ ತಿಮ್ಮೇಗೌಡ ಅವರು, ಮಲೆನಾಡಿನ ಉಡುಗೆ, ಆಹಾರ ಪದ್ದತಿ ಕಣ್ಮರೆಯಾಗಿದೆ. ಸುಗ್ಗಿ ಕುಣಿತ, ಕುಣಿಮಿಣಿ ವಾದ್ಯ ಹಿನ್ನೆಡೆಯಾಗಿದೆ. ಅವರುಗಳ ಮರು ನೆನಪಿಗಾಗಿ ಆಯೋಜಿಸಿದ್ದ ಮಲೆನಾಡು ಜಾನಪದ ಉತ್ಸವಕ್ಕೆ ಈ ಭಾಗದ ಜನರು ತೋರಿಸಿದ ಉತ್ಸಾಹ ಅತೀವ್ರ ಸಂತಸ ಮೂಡಿಸಿದೆ. ರಾಜ್ಯಮಟ್ಟದ ಸಮಾರಂಭಕ್ಕೆ ಯಾವುದೇ ಕೊರತೆ ಇಲ್ಲದಂತೆ ಏರ್ಪಾಡಾಗಿದೆ. ಮಹಿಳೆಯರು, ಯುವಕರು, ಗ್ರಾಮದ ಹಿಡಿಯರು ಆಸಕ್ತಿಯಿಂದ ಹಬ್ಬದ ಸಂಭ್ರಮ ಸೃಷ್ಟಿಸಿದ್ದಾರೆ. ಇದು ಈ ಮಣ್ಣಿನ ಸೊಗಡು ಎಂಬುದನ್ನು ನಾವು ಕಂಡಿದ್ದೇವೆ ಎಂದರು. 

ಬಿಜೆಪಿ ಆಡಳಿತದಿಂದ ಮಾತ್ರ ದೇಶದ ಉನ್ನತಿ: ಮಾಜಿ ಡಿಸಿಎಂ ಲಕ್ಷ್ಮಣ ಸವದಿ

ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಯೋಗಿ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್, ಕಲಾವಿದ ಮೇಟಿಕೆರೆ ಹಿರಿಯಣ್ಣ, ಮಲೆನಾಡು ಜಾನಪದ ಉತ್ಸವ ಸಮಿತಿ ಅಧ್ಯಕ್ಷ ಆರ್.ಪಿ. ಲಕ್ಷ್ಮಣ್, ಈಚಲಬೀಡು ಗ್ರಾಮಾಭಿವೃದ್ಧಿ ಸಂಘದ ಅಧ್ಯಕ್ಷ ದೊಡ್ಡೇಗೌಡ ಮತ್ತಿತರರು ಇದ್ದರು. ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ ಮಾಡಲಾಯಿತು. ನ್ಯಾಯಾಧೀಶೆ ಪ್ರತಿಭಾ ರೈ, ಹಿರಿಯ ನಾಗರಿಕ, ಈ.ಸಿ.ಕೃಷ್ಣೇಗೌಡ, ಉದ್ಯಮಿಗಳಾದ ಮಧುಸೂಧನ್, ಎಂ.ಟಿ.ಪ್ರದೀಪ್, ಸಾಹಿತಿ ಲಾವಣ್ಯಾ ಮೋಹನ್, ಸುಗ್ಗಿ ಕುಣಿತ ಕಲಾವಿದ ಸಿ.ಕೆ.ಸುಬ್ಬೇಗೌಡ, ವೈದ್ಯ ಡಾ. ಎ.ಎಸ್. ರಾಮಚಂದ್ರ, ಮಾದರಿ ಕೃಷಿಕ ಕೆ.ಜಿ. ರಾಮಚಂದ್ರ, ಎಸ್.ಆರ್. ಕುಮಾರ್, ಮಾಜಿ ಸೈನಿಕ ಕಾಮನಹಳ್ಳಿ ಬೆಳ್ಳಿಗೌಡ, ರೈತ ಮುಖಂಡ ಎಚ್.ಬಿ.ರಾಮೇಗೌಡ ಅವರನ್ನು ಸನ್ಮಾನಿಸಲಾಯಿತು.

Latest Videos
Follow Us:
Download App:
  • android
  • ios