Asianet Suvarna News Asianet Suvarna News

ಆಸ್ಪತ್ರೆಯಿಂದ ಡಿಸ್ಚಾರ್ಜಾದ ಸಾತ್ವಿಕ್‌ಗೆ ವೈದ್ಯರಿಂದ ಟೆಡ್ಡಿಬೆರ್ ಗಿಫ್ಟ್ !

20 ಗಂಟೆಗಳ ಕಾಲ ಕೊಳವೆ ಬಾವಿಯಲ್ಲಿ ಸಿಲುಕಿ ಜೀವನ್ಮರಣ ಹೋರಾಟ ನಡೆಸಿ ವಿಧಿಯನ್ನ ಗೆದ್ದು ಬಂದಿದ್ದ ಸಾತ್ವಿಕ್‌ನನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು ಸಾತ್ವಿಕ 48 ಗಂಟೆ ನಿಗಾ ಘಟಕದಲ್ಲಿ ಚಿಕಿತ್ಸೆ ಬಳಿಕ ಇಂದು ಡಿಸ್ಚಾರ್ಜ್ ಆಗುವ ವೇಳೆ ಜಿಲ್ಲಾಸ್ಪತ್ರೆಯ ತಜ್ಞವೈದ್ಯರು, ಸಿಬ್ಬಂದಿ ಒಟ್ಟುಗೂಡಿ ಬೀಳ್ಕೊಟ್ಟಿದ್ದು ವಿಶೇಷವಾಗಿತ್ತು. ಸಾತ್ವಿಕ್ ಗೆ ತರಹೇವಾರಿ ಗಿಫ್ಟ್ ನೀಡಿ ಬೀಳ್ಕೊಟ್ಟಿದ್ದು ಇನ್ನು ವಿಶೇಷವಾಗಿತ್ತು

A teddy bear gift from doctor toatvik Satish Mujagond discharged from the hospital vijayapur rav
Author
First Published Apr 6, 2024, 10:06 PM IST

- ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಏ.6): ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಹೊಸದಾಗಿ ಕೊರೆದ ಕೊಳವೆ ಬಾವಿದ್ದ ಬಾಲಕ ಸಾತ್ವಿಕ್ ಸತೀಶ ಮುಜಗೊಂಡ ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ‌. 20 ಗಂಟೆಗಳ ಕಾಲ ಕೊಳವೆ ಬಾವಿಯಲ್ಲಿ ಸಿಲುಕಿ ಜೀವನ್ಮರಣ ಹೋರಾಟ ನಡೆಸಿ ವಿಧಿಯನ್ನ ಗೆದ್ದು ಬಂದಿದ್ದ ಸಾತ್ವಿಕ್‌ನನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. 48 ಗಂಟೆಗಳ ಅಬ್ಸರ್ವೆಶನ್ ಬಳಿಕ ಈಗ ತಜ್ಞ ವೈದ್ಯರು ಸಾತ್ವಿಕ್‌ನನ್ನ ಡಿಶ್ಚಾರ್ಜ್ ಮಾಡಿ ಕಳುಹಿಸಿದ್ದಾರೆ.

ಸಾತ್ವಿಕ್‌ಗೆ ವೈದ್ಯರಿಂದ ಟೆಡ್ಡಿಬೇರ್ ಗಿಫ್ಟ್!

ಸಾತ್ವಿಕ (Satvik Satish Mujagond) ಡಿಸ್ಚಾರ್ಜ್ ಆಗುವ ವೇಳೆ ಜಿಲ್ಲಾಸ್ಪತ್ರೆಯ ತಜ್ಞವೈದ್ಯರು, ಸಿಬ್ಬಂದಿ ಒಟ್ಟುಗೂಡಿ ಬೀಳ್ಕೊಟ್ಟಿದ್ದು ವಿಶೇಷವಾಗಿತ್ತು. ಸಾತ್ವಿಕ್ ಗೆ ತರಹೇವಾರಿ ಗಿಫ್ಟ್ ನೀಡಿ ಬೀಳ್ಕೊಟ್ಟಿದ್ದು ಇನ್ನು ವಿಶೇಷವಾಗಿತ್ತು. ಸಾತ್ವಿಕ್‌ಗೆ ಇಷ್ಟವಾದ ಟೆಡ್ಡಿಬೆರ್‌ನ್ನ ಗಿಫ್ಟ್ ನೀಡಲಾಯಿತು. ಜೊತೆಗೆ ಬಲೂನ್, ಚಾಕೊಲೇಟ್ ನೀಡಿ ಸಾತ್ವಿಕ್‌ನನ್ನ ವೈದ್ಯರು ಪ್ರೀತಿಯಿಂದ ಕಂಡರು. ಇನ್ನು ಮಗನನ್ನ ಎತ್ತಿಕೊಂಡು ತಂದೆ ಸತೀಶ್ ಹಾಗೂ ತಾಯಿ ಪೂಜಾ ನಗುನಗುತ್ತಲೆ ಆಸ್ಪತ್ರೆಯಿಂದ ಹೊರಡಿದರು. ಇತ್ತ ಜಿಲ್ಲಾಸ್ಪತ್ರೆ ಸರ್ಜನ್ ಶಿವಾನಂದ ಮಾಸ್ತಿಹೊಳಿ ಹಾಗೂ ಡಿಹೆಚ್‌ಓ ಬಸವರಾಜ್ ಹುಬ್ಬಳ್ಳಿ ಸಾತ್ವಿಕ್‌ನನ್ನ ಮುದ್ದು ಮಾಡಿ ಬೀಳ್ಕೊಟ್ಟರು..

 

ಲಚ್ಯಾಣದಲ್ಲಿ ಸಾವು ಗೆದ್ದ 2 ವರ್ಷದ ಸಾತ್ವಿಕ್; ರಂಜಾನ್ ನಡುವೆಯೂ ದಂಡವತ್ ಹಾಕಿ ಹರಕೆ ತೀರಿಸಿದ ಮುಸ್ಲಿಂ ಯುವಕ!

ಡಿಶ್ಚಾರ್ಜ್ ಆಗಿ ಲಚ್ಯಾಣದ ಗುರುಗಳ ಗದ್ದುಗೆ ದರ್ಶನ!

ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆದ ಸುಧೀರ್ಘ 20 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ಫಲವಾಗಿ ಬದುಕುಳಿದು ಆರೈಕೆಗಾಗಿ ನಗರದ ಸರ್ಕಾರಿ ಜಿಲ್ಲಾಸ್ಪತ್ರೆಗೆ ಗುರುವಾರ ದಾಖಲಾಗಿ ಸಂಪೂರ್ಣವಾಗಿ ಚೇತರಿಸಿಕೊಂಡು ಶನಿವಾರ ಸಂಜೆ ಡಿಸ್ಚಾರ್ಜ ಆದ ಬಳಿಕ ಹುಟ್ಟೂರು ಲಚ್ಯಾಣದ ಆರಾದ್ಯ ದೇವ ಪವಾಡ ಪುರುಷ ಶ್ರೀ ಸಿದ್ಧಲಿಂಗ ಮಹಾರಾಜರ ದರ್ಶನ ಪಡೆದು ನೋಡುಗರಲ್ಲಿ ಸಂತಸ ಮೂಡಿಸಿದ್ದಾನೆ.

ಲಚ್ಯಾಣದಲ್ಲಿ ಪಟಾಕಿ ಸಿಡಿಸಿ ಭರ್ಜರಿ ಸ್ವಾಗತ!

ಈ ಬಾಲಕನನ್ನು ಜಿಲ್ಲಾಸ್ಪತ್ರೆಯಿಂದ ಪೊಲೀಸ್ ಭದ್ರತೆ, ಅಂಬುಲೆನ್ಸ ಮೂಲಕ ತವರು ಗ್ರಾಮಕ್ಕೆ ಮಗುವನ್ನು ಕರೆತರುತ್ತಿರುವ ಸುದ್ದಿ ತಿಳಿದ ಗ್ರಾಮಸ್ಥರು ಕೂಡಲೇ ಮಠಕ್ಕೆ ಧಾವಿಸಿ ಮಗುವಿನ ದಾರಿಯನ್ನೆ ಕಾಯುತ್ತಿದ್ದರು. ಕೆಲ ಸಮಯದ ಬಳಿಕ ಇಂಡಿ ಮಾರ್ಗದ ಮೂಲಕ ಮಗುವನ್ನು ಮಠಕ್ಕೆ ತರುತ್ತಿದ್ದಂತೆ ಗ್ರಾಮಸ್ಥರು ಪಟಾಕ್ಷಿ ಹಾರಿಸಿ ಸಂಭ್ರಮಿಸಿ, ಶರಣೋ ಶಂಕರ ಸಿದ್ಧಲಿಂಗ ಮಹಾರಾಜ ಕೀ ಜೈ ಎಂದು ಜೈಕಾರ ಹಾಕಿದರು.  ಬಳಿಕ ಮಠದ ಮಹಾದ್ವಾರ ಬಾಗಿನಿನಲ್ಲಿ ಮಗುವಿಗೆ ಆರತಿ ಬೆಳಗಿ, ಸಿಡುಗಾಯಿ ಒಡೆದು ಬಾಲಕನನ್ನು ಸ್ವಾಗತಿಸಲಾಯಿತು. ಬಳಿಕ ಮಠ ಒಳ ಪ್ರವೇಶಿಸಿ ಶ್ರೀ ಸಿದ್ದಲಿಂಗನ ದರ್ಶನ ಮಾಡಿಸಲಾಯಿತು. 

 

ಫಲಿಸಿದ ಸಾವಿರಾರು ಜನರ ಪ್ರಾರ್ಥನೆ, ಬೋರ್‌ವೆಲ್‌ನಿಂದ ಮೃತ್ಯುಂಜಯನಾಗಿ ಹೊರಬಂದ ಸಾತ್ವಿಕ್

ಲಚ್ಯಾಣದ ಸಿದ್ದಲಿಂಗ ಅಜ್ಜನ ಭಕ್ತರಲ್ಲಿ ಸಂತಸ!

ಮಗು ಸಿದ್ದಲಿಂಗನ ದರ್ಶನ ಮಾಡುತ್ತಿದಂತೆ ನೆರೆದ ಭಕ್ತರ ಸಂಭ್ರಮ ಮುಗಲು ಮುಟ್ಟಿತು. ಈ ಸಂದರ್ಭದಲ್ಲಿ ಬಾಲಕನ ಸಮ್ಮುಖದಲ್ಲಿ ಸಿದ್ದಲಿಂಗನಿಗೆ ಭಕ್ತರು ಪೂಜೆ ಸಲ್ಲಿಸಿ ಮಗುವಿಗೆ ಮಠದಲ್ಲಿನ ಸಾಧು ಸಂತರು ವಿಭೂತಿ, ಪ್ರಸಾದ ಹಚ್ಚಿ ತೀರ್ಥ ಬಾಯಿಗೆ ಹಾಕುವದರ ಮೂಲಕ ಮಗು ನೂರು ವರ್ಷ ಬಾಳಲಿ ಎಂದು ಭಕ್ತರು ಹಾರೈಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಸಂತಸಪಟ್ಟರು. ಬಳಿಕ ನಡೆದ ಸಭೆಯಲ್ಲಿ ಆರೋಗ್ಯ ಇಲಾಖೆಯ 108 ವಾಹನ ಸಿಬ್ಬಂದಿಯನ್ನು ಮಠದ ವತಿಯಿಂದ ಸನ್ಮಾನಿಸಲಾಯಿತು.

Follow Us:
Download App:
  • android
  • ios