Asianet Suvarna News Asianet Suvarna News

ಮೈಸೂರು ಪಾಲಿಕೆಯ ವಿರುದ್ಧ ಗಂಭೀರ ಆರೋಪ

ಮೈಸೂರು ಮಹಾ ನಗರ ಪಾಲಿಕೆಯು ಹಲವಾರು ಬಡಾವಣೆಗಳ ಮನೆ, ನಿವೇಶನಗಳ ಖಾತೆ ವರ್ಗಾವಣೆ ಮಾಡಿಕೊಡುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ, ತೀವ್ರ ತೊಂದರೆಯುಂಟಾಗುತ್ತಿದೆ ಎಂದು ಮಾಜಿ ಮೇಯರ್ ಬಿ.ಎಲ್. ಭೈರಪ್ಪ ಆರೋಪಿಸಿದರು.

A serious allegation against the Mysore Corporation snr
Author
First Published Nov 27, 2023, 10:21 AM IST

 ಮೈಸೂರು :  ಮೈಸೂರು ಮಹಾ ನಗರ ಪಾಲಿಕೆಯು ಹಲವಾರು ಬಡಾವಣೆಗಳ ಮನೆ, ನಿವೇಶನಗಳ ಖಾತೆ ವರ್ಗಾವಣೆ ಮಾಡಿಕೊಡುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ, ತೀವ್ರ ತೊಂದರೆಯುಂಟಾಗುತ್ತಿದೆ ಎಂದು ಮಾಜಿ ಮೇಯರ್ ಬಿ.ಎಲ್. ಭೈರಪ್ಪ ಆರೋಪಿಸಿದರು.

ಜೆ.ಪಿ.ನಗರದ ಸಿದ್ಧಲಿಂಗೇಶ್ವರ ಬಡಾವಣೆ, ಕಂದಾಯ ಕಾಲೋನಿ, ಬ್ಯಾಂಕ್ ಬಡಾವಣೆಗಳು ರೂಪುಗೊಂಡು 30 ವರ್ಷ ದಾಟಿದೆ. ಇಲ್ಲಿನ ವಯಸ್ಸಾದ ಕೆಲವು ನಾಗರೀಕರು ಮನೆ, ನಿವೇಶನಗಳನ್ನು ತಮ್ಮ ಮಕ್ಕಳಿಗೆ ವರ್ಗಾಯಿಸಲು ಬಯಸಿದಲ್ಲಿ ಇಲ್ಲವೇ ಸಾಲ, ಬ್ಯಾಂಕಿಗೆ ಅಡಮಾನ ಮಾಡಲು ಬಯಸಿದಲ್ಲಿ ಖಾತೆ ಬದಲಾಗಬೇಕಾದದ್ದು ಅನಿವಾರ್ಯವಾಗಿದೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ತಂದೆ ತನ್ನ ಮಕ್ಕಳಿಗೆ ಮನೆ ವಿಲ್ ಮಾಡಿ ನಿಧನರಾದಲ್ಲಿ ಅದರ ಖಾತೆ ಬದಲು ಮಾಡಲು ಮೈಸೂರು ನಗಾರಾಭಿವೃದ್ಧಿ ಕಚೇರಿಯಿಂದ ಬೈಫರ್ಕೇಶನ್ ಮಾಡಿಸಿಕೊಂಡು ಬರಲು ತಿಳಿಸುತ್ತಿರುವುದು ಅರ್ಥಹೀನ ನಿರ್ಧಾರವಾಗಿದೆ. 30 ವರ್ಷಗಳಿಂದ ಕಂದಾಯ ಕಟ್ಟಿಸಿಕೊಳ್ಳುತ್ತಿರುವ ಪಾಲಿಕೆಯು ಈಗ ಈ ವರಸೆ ತೆಗೆದಿರುವುದರಿಂದ ಸಾರ್ವಜನಿಕರು ಮತ್ತು ಮನೆಗಳನ್ನು ಕಟ್ಟಿ ಮಾರುವವರಿಗೂ ಸಂಕಷ್ಟ ಎದುರಾಗಿದ್ದು, ಇದು ಪಾಲಿಕೆಯ ವಿವೇಚನಾ ರಹಿತ ಜನವಿರೋಧಿ ನಿಲುವಾಗಿದೆ ಎಂದು ಅವರು ಕಿಡಿಕಾರಿದರು.

ಇವು ರೆವಿನ್ಯೂ ಜಾಗದಲ್ಲಿ ನಿರ್ಮಾಣವಾದ ಬಡಾವಣೆಗಳಲ್ಲ, ಸುಪ್ರೀಂಕೋರ್ಟ್ ಕೂಡ 30 ವರ್ಷ ದಾಟಿದ ಮನೆ ಅದು ಯಾವುದೇ ಜಾಗದಲ್ಲಿರಲಿ ಅದನ್ನು ಮಾಲಿಕನದೆಂದು ನಿರ್ಧರಿಸಬೇಕು ಎಂದು ಸೂಚಿಸಿರುವಾಗ, ಪಾಲಿಕೆಯವರು ಕಾನೂನು ಬದ್ಧ ಮನೆಗಳ ಖಾತೆಯನ್ನು ಬದಲಿಸಲೂ ಕುಂಟು ನೆಪಗಳನ್ನು ಹೇಳುತ್ತಿರುವುದು ನ್ಯಾಯ ವಿರೋಧಿ ನೀತಿಯಾಗಿದೆ. ಇದರಿಂದ 1000 ಹೆಚ್ಚು ಆಸ್ತಿಗಳ ಮಾಲೀಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

ಬೆಂಗಳೂರಿನಲ್ಲಿ ಬಿ ಖಾತೆ ಆಸ್ತಿಗಳನ್ನು ಮಾರಾಟ ಮಾಡಲು ಅಲ್ಲಿನ ಬಿಬಿಎಂಪಿ ಅನುಮತಿ ನೀಡಿರುವಾಗ ಮೈಸೂರಿನ ಮಹಾ ನಗರಪಾಲಿಕೆಯ ಈ ಹೊಸ ವರಸೆ ಅರ್ಥವಾಗುತ್ತಿಲ್ಲ. ಇದನ್ನು ಜನ ಪ್ರತಿನಿಧಿಗಳು ಏಕೆ ಪ್ರಶ್ನಿಸುತ್ತಿಲ್ಲ. ಸರ್ಕಾರಕ್ಕೆ ಯಾಕೆ ಅರ್ಥವಾಗುತ್ತಿಲ್ಲ. ಸಚಿವರು ಹಾಗೂ ಪಾಲಿಕೆ ಈ ಸಮಸ್ಯೆ ನಿವಾರಿಸಬೇಕು ಎಂದು ಅವರು ಒತ್ತಾಯಿಸಿದರು.

ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಬೆಂಗಳೂರು ನಗರ ರೀತಿ ಇತರೆಡಯೂ ಎ ಖಾತೆಗಳನ್ನು ಬಿ ಖಾತೆ ಮಾಡುವುದಾಗಿ ಚಿಂತನೆ ನಡೆದಿದೆ ಎಂದು ತಿಳಿಸಿರುವುದು ಸರಿಯಲ್ಲ. ನಗರದ ಎ ಖಾತೆಗಳನ್ನು ಅದೇ ರೀತಿ ಮುಂದುವರಿಸಬೇಕು ಎಂದು ಅವರು ಆಗ್ರಹಿಸಿದರು.

Follow Us:
Download App:
  • android
  • ios