ಪ್ರವಾದಿ ಬದುಕು ಸರ್ವರಂಗಕ್ಕೆ ಮಾದರಿ: ವೈಎಸ್‌ವಿ ದತ್ತಾ ‘ದೇಶದ ಹಿತಚಿಂತನೆ ಪ್ರವಾದಿ ಮುಹಮ್ಮದ್‌ರ ಚಿಂತನೆಗಳ ಬೆಳಕಿನಲ್ಲಿ’ ವಿಚಾರಗೋಷ್ಠಿ

ಮಂಗಳೂರು (ಅ.10) : ಪ್ರವಾದಿ ಮುಹಮ್ಮದ್‌ ಅವರ ಕ್ರಾಂತಿಕಾರಿ ಬದುಕನ್ನು ಅಧ್ಯಯನ ಮಾಡಿದಾಗ ಪ್ರಸ್ತುತ ಕಾಲಘಟ್ಟದಲ್ಲಿ ಅವರ ಆಗಮನದ ಅಗತ್ಯ ಕಂಡುಬರುತ್ತದೆ. ಅತ್ಯಂತ ಕ್ರೌರ್ಯ ಹೊಂದಿರುವ ಸಮಾಜದಲ್ಲಿ ಸಂದೇಶವಾಹಕರಾಗಿ ಶಿಸ್ತು, ಸಂಯಮದ, ನ್ಯಾಯ ಸತ್ಯಸಂಧತೆಯನ್ನು ಬೋಧಿಸಿದರು. ಏಕದೇವೋಪಾಸನೆಯನ್ನು ಜನರೆಲ್ಲರೂ ಅಳವಡಿಸಿದರೆ ಇಲ್ಲಿ ವೈರತ್ವ, ದ್ವೇಷÜ ಯಾವುದೂ ಉದ್ಭವಿಸದು. ಪ್ರವಾದಿ ಮುಹಮ್ಮದ್‌ ಮಾದರಿ ಬದುಕು ಸವೆಸಿದರು ಎಂದು ಹಿರಿಯ ಚಿಂತಕ, ಮಾಜಿ ಶಾಸಕ ವೈ.ಎಸ್‌.ವಿ.ದತ್ತಾ ಹೇಳಿದರು.

Eid Milad Un Nabi 2022: ಸರಳ ಜೀವನದ ಆದರ್ಶ ದಾರಿ ತೋರಿದ ಪ್ರವಾದಿ

ಜಮಾಅತೆ ಇಸ್ಲಾಮೀ ಸೀರತ್‌ ಅಭಿಯಾನದ ಪ್ರಯುಕ್ತ ಶುಕ್ರವಾರ ಮಂಗಳೂರು ಪುರಭವನದಲ್ಲಿ ಜಮಾಅತೆ ಇಸ್ಲಾಮೀ ಹಿಂದ್‌ ದ.ಕ. ಜಿಲ್ಲೆ ಆಯೋಜಿಸಿದ ‘ದೇಶದ ಹಿತಚಿಂತನೆ ಪ್ರವಾದಿ ಮುಹಮ್ಮದ್‌ (ಸ)ರ ಚಿಂತನೆಗಳ ಬೆಳಕಿನಲ್ಲಿ’ ಎಂಬ ವಿಚಾರ ಗೋಷ್ಠಿಯಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

ಕೆಪಿಸಿಸಿ ರಾಜ್ಯ ವಕ್ತಾರ ನಿಕೇತ್‌ ರಾಜ್‌ ಮೌರ್ಯ ಮಾತನಾಡಿ, ಪ್ರವಾದಿ ಮುಹಮ್ಮದ್‌ರ ಬಗ್ಗೆ ಅಪಪ್ರಚಾರ ವನ್ನು ಮಾಡುತ್ತಿದ್ದಾರೆ. ಅವರು ಬದುಕಿದ್ದಾಗಲೂ ಅಪಪ್ರಚಾರ ಮಾಡಿದ್ದರು. ಆದರೆ ಅವೆಲ್ಲವನ್ನೂ ಮಾನವೀಯ ಮೌಲ್ಯಗಳ ಗುಣಗಳ ಮೂಲಕ ಎದುರಿಸಿದರು. ಮನುಷ್ಯ ಕುಲವೊಂದೇ ಎಂಬುದನ್ನು ಪ್ರವಾದಿಗಳು ಸಾರಿದರು. ಭಾರತದಂತಹ ದೇಶ ಮುನ್ನಡೆಸಲು ಎಲ್ಲರೂ ಜೊತೆಗೂಡಿದರೆ ಮಾತ್ರ ಸಾಧ್ಯ. ಭಾರತೀಯರು ಇದನ್ನು ಅರ್ಥೈಸಿಕೊಂಡು ಪ್ರವಾದಿಯ ಸಂದೇಶಗಳು ಜನರ ಮನಮುಟ್ಟಬೇಕಾಗಿದೆ. ಇದನ್ನು ಗುಡಿ ಮಸೀದಿಗಳಿಗೆ ಸೀಮಿತಗೊಳಿಸಬಾರದು ಎಂದರು.

ಮುಖ್ಯ ಅತಿಥಿ ಕ್ಲಿಫರ್ಡ್‌ ಫರ್ನಾಂಡಿಸ್‌ ಮಾತನಾಡಿ, ನಾವು ಪರರ ಹಿತ ಬಯಸುವವರಾಗಬೇಕು. ಪ್ರವಾದಿಗಳು ಮಾನವೀಯ ಬದುಕು ಸವೆಸಿದರು. ಅವರು ದಾರಿ ದೀಪಗಳು. ದೇವನ ಸಂದೇಶ ಆಲಿಸಿ ಪಾಲಿಸಬೇಕು ಎಂದು ಹೇಳಿದರು. ಜಮಾಅತೆ ಇಸ್ಲಾಮೀ ಕರ್ನಾಟಕ ರಾಜ್ಯಾಧ್ಯಕ್ಷ ಡಾ. ಮುಹಮ್ಮದ್‌ ಸಾದ್‌ ಬೆಳ್ಗಾಮೀ ಅಧ್ಯಕ್ಷತೆ ವಹಿಸಿದ್ದರು. ಪ್ರವಾದಿ ಮುಹಮ್ಮದ್‌(ಸ) ಸಮಗ್ರ ವ್ಯಕ್ತಿತ್ವ ಎಂಬ ಕೃತಿಯನ್ನು ವೈ.ಎಸ್‌ವಿ ದತ್ತಾ ಹಾಗೂ ಪ್ರವಾದಿ ಮುಹಮ್ಮದ್‌ (ಸ) ವಿವಾಹಗಳು ಮತ್ತು ವಿಮರ್ಶೆಗಳು ಎಂಬ ಕೃತಿಯನ್ನು ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರು ಲೋಕಾರ್ಪಣೆಗೊಳಿಸಿದರು.

Chikkamagaluru: ಮಣೇವು ಕುಣಿತಕ್ಕೆ ಹೆಜ್ಜೆ ಹಾಕಿದ ವೈಎಸ್‌ವಿ ದತ್ತಾ!

ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್‌ ಕುಂಞಿ ವಿಷಯ ಮಂಡಿಸಿದರು. ಅಬ್ದುಲ್‌ ಲತೀಫ್‌ ಆಲಿಯಾ ಕಿರಾಅತ್‌ ಪಠಿಸಿದರು. ಜಮಾತೆ ಇಸ್ಲಾಮಿ ದ.ಕ.ಜಿಲ್ಲಾ ಸಂಚಾಲಕ ಆಮೀನ್‌ ಅಹ್ಸನ್‌ ಸ್ವಾಗತಿಸಿದರು. ಅಭಿಯಾನದ ಸಂಚಾಲಕ ಅಬ್ದುಲ್‌ ಗಫäರ್‍ ಕುಳಾಯಿ ವಂದಿಸಿದರು. ಜಮಾಲುದ್ದೀನ್‌ ಹಿಂದಿ ಮತ್ತು ಲುಬ್ನಾ ಝಕಿಯ್ಯ ನಿರೂಪಿಸಿದರು.