ವಿಚಾರಣಾಧೀನ ಕೈದಿಯೋರ್ವ ಜೈಲಿನಲ್ಲೇ ಹೃದಯಾಘಾತವಾಗಿ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಹಿರಿಯಡ್ಕ ಸಬ್‌ ಜೈಲಿನಲ್ಲಿ ನಡೆದಿದೆ. ಅನುಪ್ ಶೆಟ್ಟಿ(38), ಮೃತ ದುರ್ದೈವಿ

ಉಡುಪಿ (ಮೇ.11): ವಿಚಾರಣಾಧೀನ ಕೈದಿಯೋರ್ವ ಜೈಲಿನಲ್ಲೇ ಹೃದಯಾಘಾತವಾಗಿ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಹಿರಿಯಡ್ಕ ಸಬ್‌ ಜೈಲಿನಲ್ಲಿ ನಡೆದಿದೆ.

ಅನುಪ್ ಶೆಟ್ಟಿ(38), ಮೃತ ದುರ್ದೈವಿ. ಕುಂದಾಪುರದ ಫೈನಾನ್ಶಿಯರ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಅನೂಪ್ ಶೆಟ್ಟಿ. ಕಳೆದ ಎರಡೂವರೆ ವರ್ಷಗಳಿಂದ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿದ್ದ. ಇಂದು ಸಂಜೆ ವೇಳೆ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿರುವ ಕೈದಿ.

ಮಾಹಿತಿ ತಿಳಿದ ತಕ್ಷಣ ಸಿಬ್ಬಂದಿ ಆಸ್ಪತ್ರೆ ರವಾನಿಸಿದ್ದರು. ಆದರೆ ಆಸ್ಪತ್ರೆಗೆ ದಾಖಲಾಗುವ ಮೊದಲೇ ಕೊನೆಯುಸಿರು. ಕೈದಿ ಅನೂಪ ಶೆಟ್ಟಿ ಮೃತಪಟ್ಟಿರುವ ಸಂಬಂಧ ಉಡುಪಿ ಎಸ್‌ಪಿ ಡಾ. ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.

ಹಾಡಹಗಲೇ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ದುಷ್ಕರ್ಮಿಗಳು ಪರಾರಿ!

ಸಿಡಿಲು ಬಡಿದು ಯುವಕ ಸಾವು

ಕುಷ್ಟಗಿ: ಜಮೀನಿಗೆ ಹೋಗಿ ಯುವಕ ಸಿಡಿಲು ಬಡಿದು ದುರ್ಮರಣಕ್ಕೀಡಾದ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇಮುಕ್ಕಿರ್ತನಾಳ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.

ಕನಕರಾಯ ತಂದೆ ನಾಗಪ್ಪ ಬಿಡನಾಳ್(28) ಮೃತ ಯುವಕ. ಮೃತ ಯುವಕ ಶನಿವಾರ ಸಂಜೆ ಎಂದಿನಂತೆ ಕೃಷಿ ಕೆಲಸಕ್ಕೆ ಜಮೀನಿಗೆ ಹೋಗಿದ್ದಾನೆ. ಕೆಲಸ ಮುಗಿಸಿ ಮನೆಗೆ ವಾಪಸ್ ಆಗುವ ವೇಳೆ ಗುಡುಗು ಸಿಡಿಲು ಗಾಳಿಯೊಂದಿಗೆ ಭಾರೀ ಮಳೆಯಾಗಿದೆ. ಈ ವೇಳೆ ಮಳೆಯಿಂದ ರಕ್ಷಿಸಿಕೊಳ್ಳಲು ಮರದ ಕೆಳಗೆ ನಿಂತಿದ್ದ ಯುವಕನಿಗೆ ಭಾರೀ ಸದ್ದಿನೊಂದಿಗೆ ಬಡಿದಿರುವ ಸಿಡಿಲು. ಸಿಡಿಲಿನ ಹೊಡೆತಕ್ಕೆ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.