ಉತ್ತರ ಕನ್ನಡ: ನಾಯಿಯೊಂದಿಗೆ ಆಟವಾಡುತ್ತಾ ಬಾವಿಗೆ ಬಿದ್ದ ಬಾಲಕ ಸಾವು
ತಾಲೂಕಿನ ವಂದೂರು ಸಮೀಪ ತಮ್ಮ ಮನೆಯ ತೋಟದ ಸಮೀಪ ನಾಯಿಯೊಂದಿಗೆ ಆಟ ಆಡುತ್ತಾ ತೆರಳಿದ ಬಾಲಕನೋರ್ವ ಆಯತಪ್ಪಿ ಬಾವಿಗೆ ಬಿದ್ದು ಮೃತಪಟ್ಟದಾರುಣ ಘಟನೆ ವರದಿಯಾಗಿದೆ.
ಹೊನ್ನಾವರ (ಫೆ.13) :ತಾಲೂಕಿನ ವಂದೂರು ಸಮೀಪ ತಮ್ಮ ಮನೆಯ ತೋಟದ ಸಮೀಪ ನಾಯಿಯೊಂದಿಗೆ ಆಟ ಆಡುತ್ತಾ ತೆರಳಿದ ಬಾಲಕನೋರ್ವ ಆಯತಪ್ಪಿ ಬಾವಿಗೆ ಬಿದ್ದು ಮೃತಪಟ್ಟದಾರುಣ ಘಟನೆ ವರದಿಯಾಗಿದೆ.
ತಾಲೂಕಿನ ಕಡ್ಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಂದೂರಿನ ನಾಗಭೂಷಣ ದಯಾನಂದ ಹೆಗಡೆ(Nagabhushana dayananda hegde) (6) ಎನ್ನುವ ಒಂದನೇ ತರಗತಿ ವಿದ್ಯಾರ್ಥಿ ಆಕಸ್ಮಿಕವಾಗಿ ತೆರೆದ ಬಾವಿಯಲ್ಲಿ ಬಿದ್ದಿದ್ದಾನೆ. ಮಗುವನ್ನು ಕುಟುಂಬದವರು ತೋಟದಲ್ಲಿ ಹುಡುಕಿ ಬಾವಿಯ ಕಡೆ ನೋಡಿದಾಗ ದುರಂತ ಬೆಳಕಿಗೆ ಬಂದಿದೆ.
Kodagu: ಶಾಲೆಗೆ ರಜೆಯೆಂದು ನದಿಗೆ ಹೋದ ಮಕ್ಕಳು: ಈಜು ಬಾರದೇ ಪ್ರಾಣ ಬಿಟ್ಟರು
ಬಾವಿಯಲ್ಲಿ ನೀರು ಇದ್ದ ಪರಿಣಾಮ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಸ್ಥಳಕ್ಕಾಗಮಿಸಿದ ಹೊನ್ನಾವರ ಪಿಎಸ್‌ಐ ಪ್ರವೀಣಕುಮಾರ ನೇತೃತ್ವದಲ್ಲಿ ಸಿಬ್ಬಂದಿ ಪರಿಶೀಲನೆ ನಡೆಸಿದರು. ಸಿಬ್ಬಂದಿ ಶಿವಾನಂದ ಚಿತ್ತರಗಿ ಬಾವಿಗೆ ಇಳಿದು ಬಾಲಕನ ಶವ ಮೇಲಕ್ಕೆ ಎತ್ತಿದ್ದಾರೆ. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾಸಗಿ ಮಿನಿ ಬಸ್-ಆಟೋ ನಡುವೆ ಡಿಕ್ಕಿ: ಮೂವರು ಸಾವು
ಗದಗ: ಖಾಸಗಿ ಮಿನಿ ಬಸ್ ಹಾಗೂ ಆಟೋ ನಡುವೆ ಡಿಕ್ಕಿ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಮೂವರು ಮೃತಪಟ್ಟಿದ್ದು, 8ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ.
ಗದಗ-ರೋಣ(Gadag-Rona) ರಸ್ತೆಯ ದಂಡಿನ ದುರ್ಗಮ್ಮದೇವಿ ದೇವಸ್ಥಾನ ಬಳಿ ಈ ರಸ್ತೆ ಅಪಘಾತ ಸಂಭವಿಸಿದೆ. ಆಟೋದಲ್ಲಿದ್ದ ನರಸಾಪುರ ಆಶ್ರಯ ಕಾಲನಿಯ ಸೈಯದಸಾಬ್ ಸೂಡಿ (20), ನಿಖಿಲ್ ಮುಳಗುಂದ (21) ಹಾಗೂ ಬೆಟಗೇರಿ ಮಂಜುನಾಥ ನಗರ ನಿವಾಸಿ ಪ್ರದೀಪ್ ಪೂಜಾರ (40) ಮೃತ ದುರ್ದೈವಿಗಳು.
Bengaluru: ಈಜುಕೊಳದಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಸಾವು
ಮಿನಿ ಬಸ್‌ನವರು ಬಾಗಲಕೋಟೆಯಿಂದ ಮದುವೆ ಮುಗಿಸಿಕೊಂಡು ಬೆಟಗೇರಿಗೆ ಬರುತ್ತಿದ್ದರು. ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿ ರಭಸಕ್ಕೆ ಆಟೋ ಮಗುಚಿ ಪ್ರಯಾಣಿಕರು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದಾರೆ. ಮಿನಿ ಬಸ್ ಸಹ ಪಲ್ಟಿಯಾಗಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಗದಗ ಗ್ರಾಮೀಣ ಹಾಗೂ ಬೆಟಗೇರಿ ಠಾಣೆಯ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.