ಆಟೋದಲ್ಲಿ ಗ್ರಂಥಾಲಯ ಸ್ಥಾಪಿಸಿದ ಪುಸ್ತಕ ಪ್ರೇಮಿ ಆಟೋ ಡ್ರೈವರ್!

  • ಪುಸ್ತಕ ಪ್ರೇಮಿ ಆಟೋರಾಜ್‌
  • ಆಟೋದಲ್ಲಿ ಗ್ರಂಥಾಲಯ ಸ್ಥಾಪಿಸಿದ ನಾಗರಾಜ ಗಬ್ಬೂರು
A book lover auto driver who installed a library in an auto rav

ಶಶಿಕಲಾ ತಳವಾರ

ಹುಬ್ಬಳ್ಳಿ (ನ.6) : ಇಲ್ಲೊಬ್ಬ ಆಟೋ ಚಾಲಕ ತನ್ನ ರಥದಲ್ಲಿ ಕನ್ನಡ ಪುಸ್ತಕ ಇಟ್ಟುಕೊಂಡು ಓದಿನ ಅಭಿರುಚಿ ಬೆಳೆಸುತ್ತಿದ್ದಾರೆ. ದಿನದ ದುಡಿಮೆಯಲ್ಲಿ ಸಮಾಜ ಸೇವೆಗಾಗಿಯೇ ಇಂತಿಷ್ಟುಹಣ ತೆಗೆಹಿಡುವ ಜತೆಗೆ ನಿರಾಶ್ರಿತರಿಗೆ ಅನ್ನ, ಹೊದಿಕೆ ನೀಡುತ್ತಾರೆ. ಕನ್ನಡ ರಾಜ್ಯೋತ್ಸವ ದಿನದಿಂದ ತನ್ನ ರಥದಲ್ಲಿ ಉಚಿತ ಸೇವೆ ನೀಡುವ ಜತೆಗೆ ಪ್ರತಿ ಪ್ರಯಾಣಿಕರಿಗೆ ಗುಲಾಬಿ ಹೂ ನೀಡಿ ಕನ್ನಡ ಪುಸ್ತಕ ಓದುವಂತೆ ಹಾಗೂ ಕನ್ನಡ ಭಾಷೆ ಬೆಳೆಸಲು ಪ್ರೇರೆಪಿಸುತ್ತಾರೆ.

ಕನ್ನಡ ಪುಸ್ತಕ ಪ್ರೇಮಿ ಮೈಸೂರಿನ ಸೈಯದ್ ಇಸಾಕ್‌ಗೆ ರಾಜರತ್ನಂ ಪ್ರಶಸ್ತಿ

ಇಂತಹ ಕನ್ನಡ ಸೇವೆ ಮಾಡುತ್ತಿರುವವರು ನಗರದ ವೀರಾಪುರ ಓಣಿಯ ಗೊಲ್ಲರ ಕಾಲನಿಯ ನಾಗರಾಜ ಗಬ್ಬೂರು. ಅಪಮಾನವೇ ಗ್ರಂಥಾಲಯಕ್ಕೆ ಪ್ರೇರಣೆ: ನಾಗರಾಜ ಓದಿದ್ದು ಎಸ್‌ಎಸ್‌ಎಲ್‌ಸಿ ಮಾತ್ರ. ಕಾರಣಾಂತರಗಳಿಂದ ವಿದ್ಯಾಭಾಸ ಮುಂದುವರಿಸಲಿಲ್ಲ. 11 ವರ್ಷದಿಂದ ಆಟೋ ಚಾಲನೆ ಮಾಡುತ್ತಿದ್ದಾರೆ. ಅವರ ಸೇವಾ ಮನೋಭಾವನೆಗೆ ಮೂಲ ಕಾರಣ, ಇಲ್ಲಿನ ಹಳೆ ಬಸ್‌ ನಿಲ್ದಾಣದ ಕಾಮತ್‌ ಹೋಟೆಲ್‌ ಹತ್ತಿರ ಶಿರಡಿ ಸಾಯಿಬಾಬಾ ಟ್ರಸ್ಟ್‌ ವತಿಯಿಂದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಆಟೋ ಓಡಿಸುತ್ತಲೇ ಈ ಕಾಯಕದಲ್ಲಿ ನಾಗರಾಜ ಸಹ ಭಾಗಿಯಾಗಿರುತ್ತಿದ್ದರು. ಈ ವ್ಯವಸ್ಥೆ ಬಂದ್‌ ಆಯಿತು. ಬಳಿಕ ನಾಗರಾಜ್‌ ಆಟೋದಲ್ಲಿಯೇ ನೀರಿನ ಕ್ಯಾನ್‌ ಇಟ್ಟುಕೊಂಡು ಜನರ ದಾಹ ಇಂಗಿಸಿದರು. ಆರಂಭದಲ್ಲಿ ಕೆಲವರು ಅಪಹಾಸ್ಯ ಮಾಡಿದರು. ಇನ್ನು ಕೆಲವರು ನೋಡಿ ನಕ್ಕರು. ಆದರೆ ಅವರ ಗುರುಗಳಾದ ಡಾ. ಎ.ಸಿ. ವಾಲಿ ಅವರು ಪುಸ್ತಕ ನೀಡಿ ಪ್ರೋತ್ಸಾಹಿಸಿದರು. ಪುಸ್ತಕದ ಮೇಲೆ ಅಪಾರ ಅಭಿಮಾನ ಹೊಂದಿದ್ದ ನಾಗರಾಜ್‌ ಅಂದಿನಿಂದ ಆಟೋದಲ್ಲಿಯೇ ಗ್ರಂಥಾಲಯ ಆರಂಭಿಸಿದರು.

ರಾಜ್ಯೋತ್ಸವ ದಿನ ಉಚಿತ ಸೇವೆ:

ಇವರ ಆಟೋ ಹತ್ತಿದ್ದರೆ ಸಾಕು. ಬಗೆಬಗೆಯ ಪುಸ್ತಕಗಳು ರಾರಾಜಿಸುತ್ತಿವೆ. ಸಂತ ಶಿಶುನಾಳ ಶರೀಫರು, ಬಸವೇಶ್ವರ ವಚನಗಳು, ವಿವಿಧ ಸಾಹಿತಿಗಳ ಪುಸ್ತಕಗಳು ಸಿಗಲಿವೆ. ಕನ್ನಡ ರಾಜ್ಯೋತ್ಸವ ದಿನದಂದು ಇವರ ರಥ ಉಚಿತ ಸೇವೆ ನೀಡಲಿದೆ. ಅಂದು ಆಟೋ ಹತ್ತುವ ಪ್ರತಿಯೊಬ್ಬರಿಗೂ ಗುಲಾಬಿ ಹೂ ನೀಡುವ ಜತೆಗೆ ಕನ್ನಡ ಪುಸ್ತಕಗಳನ್ನು ಓದುವ ಜತೆಗೆ ಭಾಷೆ ಬೆಳೆಸುವಂತೆ ಮನವಿ ಮಾಡುತ್ತಾರೆ. ಪ್ರಯಾಣಿಕರು ಪುಸಕ್ತಗಳನ್ನು ಓದಿದ ಬಳಿಕ ಅವರಿಂದ ಅಭಿಪ್ರಾಯ ಪಡೆಯುತ್ತಾರೆ.

ಕುಡ್ಲದ ಮೊದಲ ಆಟೋ ಡ್ರೈವರ್ ಇನ್ನಿಲ್ಲ: Montu Lobo ಇನ್ನು ನೆನಪಷ್ಟೇ!

ಕಳೆದ 7 ವರ್ಷದಿಂದ ಪ್ರಯಾಣಿಕರಿಗೆ ಓದುವುದಕ್ಕಾಗಿ ಪುಸ್ತಕ, ಕುಡಿಯುವುದಕ್ಕಾಗಿ ನೀರನ ವ್ಯವಸ್ಥೆಯನ್ನು ಮಾಡಿದ್ದೇನೆ. ಈ ಕೆಲಸ ಮಾಡಲು ನನಗೆ ಹೆಮ್ಮೆ ಎನಿಸುತ್ತದೆ.

ನಾಗರಾಜ್‌ ಗಬ್ಬೂರು

Latest Videos
Follow Us:
Download App:
  • android
  • ios